ತೆಲುಗು/ಕನ್ನಡ ನಟಿಯರನ್ನು ಬಳಸಿ ವೇಶ್ಯಾವಾಟಿಕೆ-ಟಾಲಿವುಡ್ ದಂಪತಿ ಬಂಧನ

US feds bust Tollywood sex racket in Chicago

0

Kannada-News (itskannada) Crime News ತೆಲುಗು/ಕನ್ನಡ ನಟಿಯರನ್ನು ಬಳಸಿ ವೇಶ್ಯಾವಾಟಿಕೆ-ಟಾಲಿವುಡ್ ದಂಪತಿ ಬಂಧನ – US feds bust Tollywood sex racket in Chicago

ಅವಕಾಶದ ಆಸೆ ತೋರಿಸಿ ಕಲಾವಿದರನ್ನು ವೇಶ್ಯಾವಾಟಿಕೆಗೆ ದುಡುತ್ತಿದ್ದ ದಂಪತಿಗಳ ಬಂಧನವಾಗಿದೆ. ಕನ್ನಡ ಮತ್ತು ತೆಲುಗು ಸಿನಿಮಾ ಕಲಾವಿದರನ್ನು ಚಿಕಾಗೋ ದಲ್ಲಿ ವೇಶ್ಯಾವಾಟಿಕೆಗೆ ದೂಡಿದ್ದ ಐವರನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಕಿಶನ್‌‌‌ ಮೊಡುಗುಮುದಿ ಅಲಿಯಾಸ್‌‌ ಶ್ರೀಜಾ ಚೆನ್ನುಪತಿ ಹಾಗೂ ಚಂದ್ರಕಲಾ ಪೂರ್ಣಿಮಾ ಅಲಿಯಾಸ್‌‌‌‌ ವೆಭಾ ಜಯರಾಮ್‌‌‌‌‌ ಎಂಬ ಹೈದರಾಬಾದ್‌‌‌‌ ಮೂಲದ ದಂಪತಿಗಳೇ ಈ ಕೃತ್ಯಕ್ಕೆ ಕೈಹಾಕಿ ಸಧ್ಯ ವಾಷಿಂಗ್ಟನ್‌‌‌‌‌‌ನ ಪೋಲಿಸರಿಂದ ಬಂಧನಕ್ಕೊಳಗಾಗಿದ್ದರೆ.

ತೆಲುಗು/ಕನ್ನಡ ನಟಿಯರನ್ನು ಬಳಸಿ ವೇಶ್ಯಾವಾಟಿಕೆ-ಟಾಲಿವುಡ್ ದಂಪತಿ ಬಂಧನ

ವಿದೇಶ ಕಾರ್ಯಕ್ರಮಗಳು , ಕೂಟಗಳು ,ಅಮೆರಿಕದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸ್ಥಳೀಯ ಜಾಹೀರಾತುಗಳಲ್ಲಿ ನಟಿಸಲು ಅವಕಾಶ ನೀಡುವುದಾಗಿ ನಟಿಯರನ್ನು ನಂಬಿಸಿ ಅವರಿಗೆ ತಾವೇ ವಿಮಾನ ಹಾಗು ವಸತಿ ಸೌಕರ್ಯ ನೀಡಿ. ನಂತರ ವೇಶ್ಯಾವಾಟಿಕೆಯಲ್ಲಿ ತೊಡಗಿಸುತ್ತಿದ್ದರು ಎನ್ನಲಾಗಿದೆ. ಇದೀಗ ದಂಪತಿಗಳಿಬ್ಬರು ಜೈಲುವಾಸ ಅನುಭವಿಸುತ್ತಿದ್ದಾರೆ. ದಂಪತಿಗೆ ಇಬ್ಬರು ಮಕ್ಕಳಿದ್ದು, ಅವರನ್ನು ವರ್ಜೀನಿಯಾದ ಮಕ್ಕಳ ಕಲ್ಯಾಣ ಅಧಿಕಾರಿಗಳ ವಶಕ್ಕೆ ನೀಡಲಾಗಿದೆ ಎಂದು ತಿಳಿದುಬಂದಿದೆ.

ಯಾರೇ ಆಗಲಿ ಅವಕಾಶಕ್ಕಾಗಿ ಯಾರನ್ನೂ ನಂಬದೇ ಇರುವುದು ಒಳಿತು , ಇನ್ನಾದರು ಜಾಗ್ರತೆವಹಿಸಿ , ಇಂತಹ ದಂಪತಿ ಹಾಗೂ ನೀಚರ ಗಾಳಕ್ಕೆ ಯಾರೂ ಎರೆಹುಳು ಆಗದಿರಿ.ನಾವು ಎಲ್ಲಿಯ ತನಕ ಮೋಸ ಹೋಗುತ್ತೆವೆಯೋ ಅಲ್ಲಿಯ ತನಕ ನಮ್ಮನ್ನು ಮೋಸ ಮಾಡುವವರು ನಮ್ಮ ಬೆನ್ನ ಹಿಂದೆಯೇ ಹೊಂಚು ಹಾಕುತ್ತಿರುತ್ತಾರೆ….  ///

ತೆಲುಗು/ಕನ್ನಡ ನಟಿಯರನ್ನು ಬಳಸಿ ವೇಶ್ಯಾವಾಟಿಕೆ-ಟಾಲಿವುಡ್ ದಂಪತಿ ಬಂಧನ

ಕೀವರ್ಡ್ : US feds bust Tollywood sex racket in Chicago-Kishan Modugumudi: US feds bust Tollywood sex racket in Chicago-Tollywood sex racket busted in Chicago, Indian-origin couple involved