ಟೀ ಕುಡಿತಾ ಇದ್ದವರಿಗೆ ಶಾಕ್-ಇಬ್ಬರ ಸ್ಥಿತಿ ಚಿಂತಾಜನಕ

Crime News (itskannada ) ಟೀ ಕುಡಿತಾ ಇದ್ದವರಿಗೆ ಶಾಕ್-ಇಬ್ಬರ ಸ್ಥಿತಿ ಚಿಂತಾಜನಕ : ವಿದ್ಯುತ್ ಕಂಬದ ತಂತಿ ಕಟ್ಟಾಗಿ ಟೀ ಅಂಗಡಿಯ ಮೇಲೆ ಬಿದ್ದು ಟೀ ಕುಡಿತಾಯಿದ್ದ ಏಳು ಜನರಿಗೆ ಕರೆಂಟ್ ಶಾಕ್ ಹೊಡೆದಿದೆ. ಐವರಿಗೆ ತೀವ್ರ ಗಾಯಗಳಾಗಿದ್ದು , ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.

ಟೀ ಕುಡಿತಾ ಇದ್ದವರಿಗೆ ಶಾಕ್-ಇಬ್ಬರ ಸ್ಥಿತಿ ಚಿಂತಾಜನಕ

ಇಂದು ಮುಂಜಾನೆ ಎಂದಿನಂತೆ ಟೀ ಕುಡಿಯಲು ಬಂದ ಗ್ರಾಮಸ್ಥರಿಗೆ ಟೀ ಅಂಗಡಿಯ ಮೇಲಿನ ವಿದ್ಯುತ್ ಕಂಬದ ತಂತಿಯಲ್ಲಿ ಜವರಾಯ ಹೊಂಚು ಹಾಕಿ ಕೂತಿದ್ದಾನೆಂದು ಹೇಗೆ ತಾನೇ ಗೊತ್ತಿರಲು ಸಾಧ್ಯ…

ಓರ್ವ ಮಹಿಳೆ ಹಾಗೂ ಬಾಲಕ ಸೇರಿದಂತೆ ಒಟ್ಟು 7 ಜನರಿಗೆ ಕರೆಂಟ್ ಶಾಕ್ ಹಿಡಿದಿದ್ದು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಂದು ಬೆಳ್ಳಂಬೆಳ್ಳಗೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲುಕಿನ ನಾಲತವಾಡದ ಜಗದೆವನಗರದಲ್ಲಿ ಈ ದುರ್ಘಟನೆ ನಡೆದಿದ್ದು ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅತ್ಯಂತ ಕಳಪೆ ಗುಣ ಮಟ್ಟದ ತಂತಿಯನ್ನು ಬಳಸಿರುವುದೇ ಈ ಅವಗಡಕ್ಕೆ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದು , ಗಾಯಾಳು ಕುಟುಂಬಕ್ಕೆ ಪರಿಹಾರ ನಿದದಿದ್ದರೆ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ. //// ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ತಪ್ಪದೆ ಕ್ಲಿಕ್ಕಿಸಿ – ಕರ್ನಾಟಕ ಕ್ರೈಂ ನ್ಯೂಸ್ – Karnataka Crime News – Kannada News-

WebTitle : ಟೀ ಕುಡಿತಾ ಇದ್ದವರಿಗೆ ಶಾಕ್-ಇಬ್ಬರ ಸ್ಥಿತಿ ಚಿಂತಾಜನಕ