ಮನುಷತ್ವ ಇನ್ನೂ ಬದುಕಿದಿಯಾ-ಪ್ರಾಣಿ ಪ್ರಿಯರು ನೋಡಲೇ ಬೇಕಾದ ವಿಡಿಯೋ

Video News (itskannada) ಮನುಷತ್ವ ಇನ್ನೂ ಬದುಕಿದಿಯಾ-ಪ್ರಾಣಿ ಪ್ರಿಯರು ನೋಡಲೇ ಬೇಕಾದ ವಿಡಿಯೋ – A Video That Animal Lovers Must See : ಪ್ರಾಣಿಗಳಿಗೆ ಚಿತ್ರ ಹಿಂಸೆ ಕೊಟ್ಟು ವಿಕೃತಿ ಪಡುವ ಹಲವಾರು ವಿಡಿಯೋ ನೋಡಿ ನಾವು ಮರುಗಿದ್ದೇವೆ , ಈ ಪೋರ ನೋಡಿ ನಿಷ್ಕಲ್ಮಷ ಪ್ರೀತಿ ತನ್ನ ಸಾಕು ನಾಯಿ ಅಪಘಾತಕ್ಕೆ ಒಳಗಾಗಿ ಮೃತ ಪಟ್ಟಿದೆ, ಮನಸ್ಪುರ್ವಕವಾಗಿ ಅಳುತ್ತಾ , ಒಮ್ಮೆ ಎದ್ದು ಮಾತನಾಡು ನನ್ನ ಪ್ರೀತಿಯ ಗೆಳೆಯ , ನನಗೆ ಮೊದಲೇ ತಂದೆ ಇಲ್ಲ , ತಾಯಿಯು ಇಲ್ಲ, ನನ್ನ ಆಟ ಪಾಠ , ಮುನಿಸು , ಜಗಳ ಎಲ್ಲವೂ ನಿನ್ನೊಂದಿಗೆ . ಈಗ ನೀನು ನನ್ನನ್ನು ಬಿಟ್ಟುಹೊದೆಯಾ ……. ಎನ್ನುತ್ತಾ ತನ್ನ ಸಾಕು ನಾಯಿ ಬದುಕುಳಿಯ ಬಹುದ ಎಂದು ಕಾಯುತ್ತಿದ್ದಾನೆ…

ರಸ್ತೆ ದಾಟುತ್ತಿದ್ದಾಗ ತನ್ನ ಯಜಮಾನ ಬಾಲಕನನ್ನು ಹಿಂಬಾಲಿಸಿದ ಸಾಕು ನಾಯಿಗೆ ರಸ್ತೆಯಲ್ಲಿ ವೇಗವಾಗಿ ಬಂದ ವಾಹನ ಡಿಕ್ಕಿ ಹುಡೆದು ಸ್ಥಳದಲ್ಲೇ ಮೃತಪಟ್ಟಿದೆ. ಅತೀ ಹೆಚ್ಚು ಹಚ್ಚಿಕೊಂಡಿದ್ದ ಬಾಲಕನಿಗೆ ಇದು ಬಾರಿ ದುಃಖ ನೀಡಿತು , ತನ್ನ ಮುದ್ದಿನ ನಾಯಿ ಕಣ್ಣೆದುರೇ ರಕ್ತದ ಮಡುವಿನಲ್ಲಿ ಬಿದ್ದಿದ್ದರೆ ಬಾಲಕ ಅದರ ಕತ್ತು ಹಿಡಿದು , ಏಳು ಗೆಳೆಯ , ಏಳು ಎಂಬತಿರುವ ದೃಶ್ಯ ಎಂತವರ ಕಣ್ಣಲ್ಲೂ ಒಂದಿಷ್ಟು ನೀರು ತುಂಬಿಕೊಳ್ಳದೆ ಇರದು.

ಸದ್ಯ ಈ ವಿಡಿಯೋ ವೈರಲ್ ಆಗಿದ್ದು , ನನ್ನ ಫೇಸ್ ಬುಕ್ ಟೈಮ್ ಲೈನ್ ಗೆ ಬಂದಿತ್ತು , ಇಂತಹ ಒಳ್ಳೆ ವಿಷಯ ಹಾಗೂ ಆ ಮುಗ್ದ ಬಾಲಕನ ಸಂದೇಶ ಎಲ್ಲರಿಗೂ ತಿಳಿಯಲಿ ಎಂದು ಇಲ್ಲಿ ನಿಮ್ಮೊಂದಿಗೆ ಶೇರ್ ಮಾಡುತ್ತಿದ್ದೇನೆ . ////  ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ತಪ್ಪದೇ ಕ್ಲಿಕ್ಕಿಸಿ – Video News Kannada – Kannada News