ಕೋಲಾರ-ಬಿಜೆಪಿ ಅಭ್ಯರ್ಥಿ ಕಾರಿಗೆ ಬೆಂಕಿ

Set Fire For Bjp Candidate Car In Kolar | itskannada

0 29

Kolar : (itskannadaಕೋಲಾರ: ಕೋಲಾರ-ಬಿಜೆಪಿ ಅಭ್ಯರ್ಥಿ ಕಾರಿಗೆ ಬೆಂಕಿ : ಕೋಲಾರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸೋಮವಾರವಷ್ಟೇ ನಾಮಪತ್ರ ಸಲ್ಲಿಸಿರುವ ಓಂಶಕ್ತಿ ಚಲಪತಿ ಅವರ ಕಾರಿಗೆ ಇಂದು ಬೆಳಗಿನ ಜಾವ ಬೆಂಕಿ ಹಚ್ಚಿ ಕಿಡಿಗೇಡಿಗಳು ಪರಾರಿಯಾಗಿದ್ದಾರೆ.

ಕೋಲಾರ ನಗರದ ಕಠಾರಿ ಪಾಳ್ಯ ಬಡಾವಣೆಯಲ್ಲಿ ತಮ್ಮ ಮನೆಯ ಮುಂದೆ ನಿಲ್ಲಿಸಿದ್ದ ಕಾರಿಗೆ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಇನ್ನೋವ ಕಾರಿಗೆ ಹೊತ್ತಿಕೊಂಡ ಬೆಂಕಿಯ ಕೆನ್ನಾಲಿಗೆಗೆ ಪಕ್ಕದಲ್ಲೇ ಇದ್ದ ಓಮ್ನಿ ಕಾರು ಕೂಡ ಸುಟ್ಟು ಭಸ್ಮವಾಗಿದೆ.

ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಓಂಶಕ್ತಿ ಚಲಪತಿ ಜನಪ್ರಿಯತೆ ಸಹಿಸಲಾಗದೆ ವಿರೋಧಿಗಳು ಈ ರೀತಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.|| ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ಕ್ಲಿಕ್ಕಿಸಿ . . Kolar News KannadaCrime News

ವರುಣ ಕ್ಷೇತ್ರದಲ್ಲಿ ಹೊಸ ತಿರುವು-ಟಿ ಬಸವರಾಜು ಬಿಜೆಪಿಯಿಂದ ಚುನಾವಣ ಕಣಕ್ಕೆ

Stay Updated with itsKannada, to know more Latest Kannada News – Read Kannada News Updates Kannada News Online – Get Latest News Headlines Breaking News in Kannada

ತ್ವರಿತ ಕನ್ನಡ ಸುದ್ದಿ ಹಾಗೂ ಕ್ಷಣಕ್ಷಣದ ಕನ್ನಡ ನ್ಯೂಸ್ ಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ – its-Kannada

error: Content is protected !!