ಐಜಿಪಿ ಅಲೋಕ ಕುಮಾರ – ಪೊಲೀಸ್ ವ್ಯವಸ್ಥೆಯನ್ನು ಜನಸ್ನೇಹಿಗೊಳಿಸಲು ಕ್ರಮ

action-to-popularize-police-system - IGP

ಬೆಳಗಾವಿ:   (itskannada) : ಪೊಲೀಸ್ ವ್ಯವಸ್ಥೆಯನ್ನು ಜನಸ್ನೇಹಿಗೊಳಿಸಲು ಕ್ರಮ -ಐಜಿಪಿ ಅಲೋಕ ಕುಮಾರ :  ರೌಡಿಗಳು, ಮತೀಯ ಗೂಂಡಾಗಳ ವಿಮರ್ಶೆ ಮಾಡಿ ಚಟುವಟಿಕೆಯಿಂದ ಇರುವವರ ಮೇಲೆ ಮುಂಜಾಗೃತಾ ಕ್ರಮಗಳನ್ನು ಹಾಗೂ ಮುಚ್ಚಳಿಕೆ ಪತ್ರವನ್ನು ತಾಲೂಕು ದಂಡಾಧಿಕಾರಿಗಳಿಂದ ತೆಗೆದುಕೊಳ್ಳುವಂತೆ ಮತ್ತು ರಾಜಕೀಯ ಸಂಘóರ್ಷದಂತಹ ಪ್ರಕರಣಗಳಲ್ಲಿ ಭಾಗಿಯಾಗಿರುವ ವ್ಯಕ್ತಿಗಳನ್ನು ಗುರುತಿಸಿ ಅವರ ಮೇಲೆ ರೌಡಿ ಶೀಟ್‍ಗಳನ್ನು ತೆರೆದು ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಬೆಳಗಾವಿ ಉತ್ತರ ವಲಯದ ಐಜಿಪಿ ಅಲೋಕ ಕುಮಾರ ಅವರು ತಿಳಿಸಿದರು.

ಇಲ್ಲಿನ ಜಿಲ್ಲಾ ಪೊಲೀಸ್ ಭವನದಲ್ಲಿ ಮಂಗಳವಾರ (ಜ.16) ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಕೋಮುಭಾವನೆ ಕೆರಳಿಸುವವರ ಮೇಲೆ ನಿಗಾ ಇರಿಸಿ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆ ದೃಷ್ಠಿಯಲ್ಲಿಟ್ಟುಕೊಂಡು ಉತ್ತರ ವಲಯದ ಜಿಲ್ಲೆಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.

ಅಂತರ್‍ರಾಜ್ಯ ಮಾಹಿತಿ ವಿನಿಮಯ ಸಭೆ:

ಉತ್ತರ ವಲಯದ ಜಿಲ್ಲೆಗಳ ಗಡಿಗೆ ಹೊಂದಿಕೊಂಡಂತೆ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಿದ್ದು, ಮಹಾರಾಷ್ಟ್ರದ ಸೊಲ್ಲಾಪೂರ, ಸಾಂಗ್ಲಿ, ಕೊಲ್ಹಾಪೂರ, ಸಿಂಧೂದುರ್ಗ, ಬೀಡ ಜಿಲ್ಲೆಗಳ ಮತ್ತು ಗೋವಾ ರಾಜ್ಯದ ಅಧಿಕಾರಿಗಳ ಸಭೆ ಕರೆಯಲಾಗುವುದು. ಸಭೆಯಲ್ಲಿ ಅಕ್ರಮ ಮದ್ಯ ಸಾಗಾಟ, ಅಪರಾಧಿಗಳ ಅಕ್ರಮ, ಕಣ್ಮರೆಯಾದ ಅಪರಾಧಿಗಳು ಮತ್ತು ಚೆಕ್‍ಪೋಸ್ಟ್‍ಗಳ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲಾಗುವುದು ಎಂದರು.

ಅಕ್ರಮ ಮದ್ಯ ಮಾರಾಟದ ಮೇಲೆ ನಿಗಾ:

ಉತ್ತರ ವಲಯದ ಎಲ್ಲ ಜಿಲ್ಲೆಗಳಲ್ಲಿ ಅಕ್ರಮ ಮದ್ಯ ಮಾರಾಟದ ಮೇಲೆ ನಿಗಾ ಇಡುವಂತೆ ಮತ್ತು ಕಾನೂನು ರೀತ್ಯ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು..

ಅಂತರ್‍ರಾಜ್ಯ ಗಡಿ ಚೆಕ್‍ಪೋಸ್ಟ್:

ಅಕ್ರಮ ಚಟುವಟಿಕೆಗಳ ತಡೆಗಾಗಿ ಫೆಬ್ರವರಿ ತಿಂಗಳಿನಿಂದ ಉತ್ತರ ವಲಯದ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಹೊರರಾಜ್ಯಗಳ ಗಡಿಯಲ್ಲಿ ಚೆಕ್‍ಪೋಸ್ಟ್‍ಗಳನ್ನು ನಿರ್ಮಿಸಿ, ಸಿಸಿ ಕ್ಯಾಮೆರಾಗಳ ಕಣ್ಗಾವಲಿನಲ್ಲಿ ಸಿಬ್ಬಂದಿಯನ್ನು ನೇಮಿಸಲಾಗುವುದು ಎಂದು ತಿಳಿಸಿದರು.

ಹೆಲ್ಮೆಟ್ ಕಡ್ಡಾಯ:

ರಸ್ತೆ ಅಪಘಾತಗಳಿಂದ ಮೃತರಾಗುವ ಅಮಾಯಕರ ಸಾವನ್ನು ತಪ್ಪಿಸುವ ಹಾಗೂ ಸಂಚಾರವನ್ನು ಸುಗಮಗೊಳಿಸುವುದಕ್ಕಾಗಿ ಬೆಳಗಾವಿ ಉತ್ತರ ವಲಯದ ಜಿಲ್ಲೆಗಳಲ್ಲಿ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು..
ಐಎಸ್‍ಐ ಮಾರ್ಕ್ ಹೊಂದಿರುವ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯವಾಗಿ ಜಾರಿಗೆ ತರಲು ನಿರ್ಧರಿಸಲಾಗಿದ್ದು, ಬೆಳಗಾವಿ ಜಿಲ್ಲೆಯಲ್ಲಿ ಜನೇವರಿ 16 ರಿಂದ 26 ರವರೆಗೆ ಈ ಬಗ್ಗೆ ಜಾಗೃತಿ ಅಭಿಯಾನ ನಡೆಯಲಿದೆ. 26ರ ನಂತರ ಹೆಲ್ಮೆಟ್ ಧರಿಸದಿರುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಸುವ್ಯವಸ್ಥಿತ ಪಾರ್ಕಿಂಗ್ ವ್ಯವಸ್ಥೆ:

ಮುಖ್ಯ ಪಟ್ಟಣಗಳಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ವ್ಯವಸ್ಥಿತಗೊಳಿಸುವ ದೃಷ್ಠಿಯಿಂದ ಸಮ ಮತ್ತು ಬೆಸ ದಿನಾಂಕಗಳ ಪಾರ್ಕಿಂಗ್ ವ್ಯವಸ್ಥೆಯನ್ನು ವಲಯದ ಮುಖ್ಯ ನಗರಗಳಲ್ಲಿ ಮತ್ತು ಪಟ್ಟಣಗಳಲ್ಲಿ ಆರಂಭಿಸಲಾಗುವುದು. ಬೆಳಗಾವಿ ಜಿಲ್ಲೆಯ ಬೈಲಹೊಂಗಲ, ಗೋಕಾಕ, ಚಿಕ್ಕೋಡಿ, ಖಾನಾಪೂರ, ಅಥಣಿ ಇನ್ನಿತರ ಪಟ್ಟಣಗಳಲ್ಲಿ ಶೀಘ್ರವೇ ಈ ವ್ಯವಸ್ಥೆಯನ್ನು ಆರಂಭಿಸಲಾಗುವುದು ಎಂದರು.

ಪೊಲೀಸ್ ವ್ಯವಸ್ಥೆಯನ್ನು ಜನಸ್ನೇಹಿಗೊಳಿಸುವ ದೃಷ್ಠಿಯಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ವಲಯದ ಬೇರೆ ಬೇರೆ ಸ್ಥಳಗಳಲ್ಲಿ ಆಯಾ ಜಿಲ್ಲಾ ವರಿಷ್ಠಾಧಿಕಾರಿಗಳೊಡನೆ ಜನಸಂಪರ್ಕ ಸಭೆಗಳನ್ನು ಏರ್ಪಡಿಸಿ ಜನರ ನೋವು, ದೂರು, ದುಮ್ಮಾನಗಳನ್ನು ಆಲಿಸಿ, ನಿವಾರಣೆಗಾಗಿ ಪ್ರಯತ್ನಿಸಲಾಗುವುದು. ಮೊದಲ ಜನಸಂಪರ್ಕ ಸಭೆಯನ್ನು ಜನೇವರಿ 27 ರಂದು ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ ಆಯೋಜಿಸಲಾಗುವುದು ಎಂದು ತಿಳಿಸಿದರು.

ಅಕ್ಷರಕ್ಕಾಗಿ ಆರಕ್ಷಕ:

ಈ ಯೋಜನೆಯಡಿ ವಲಯದ ಹಿಂದುಳಿದ ಪ್ರದೇಶಗಳ ಗ್ರಾಮಾಂತರ ಪ್ರದೇಶಗಳಲ್ಲಿ ಶಾಲೆ ಬಿಟ್ಟಿರುವ ಮಕ್ಕಳನ್ನು ಗುರುತಿಸಿ, ಅವರ ಪೋಷಕರು ಹಾಗೂ ಶಿಕ್ಷಣ ಇಲಾಖೆಯ ಸಹಕಾರದೊಡನೆ ಆ ಮಕ್ಕಳನ್ನು ಶಾಲೆಗೆ ಸೇರಿಸುವ ಪ್ರಯತ್ನ ಮಾಡಲಾಗುವುದು. ಬೀಟ್ ವ್ಯವಸ್ಥೆಯಲ್ಲಿ ನೇಮಕವಾಗಿರುವ ಪೊಲೀಸ್ ಕಾನ್ಸ್‍ಟೇಬಲ್ ಮತ್ತು ಹೆಡ್‍ಕಾನ್ಸ್‍ಟೇಬಲ್‍ಗಳನ್ನು ಈ ಯೋಜನೆಯಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಸೂಚಿಸಲಾಗುವುದು ಎಂದರು.

ತಿಂಗಳ ಪೊಲೀಸ್:

ಪೊಲೀಸ್ ಠಾಣೆಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಪೊಲೀಸ್ ಕಾನ್ಸ್‍ಟೇಬಲ್ ಮತ್ತು ಹೆಡ್‍ಕಾನ್ಸ್‍ಟೇಬಲ್‍ಗಳನ್ನು ಗುರುತಿಸಿ ಅವರನ್ನು ಆಯಾ ಠಾಣೆಯ ತಿಂಗಳ ಪೊಲೀಸ್ ಎಂದು ಘೋಷಿಸಿ ಗೌರವಿಸುವುದರ ಮೂಲಕ ಎಲ್ಲರಿಗೂ ಸ್ಫೂರ್ತಿದಾಯಕವಾಗುವಂತೆ ಮಾಡಿ ಉತ್ತಮ ಕೆಲಸಗಳಿಗಾಗಿ ಉತ್ತೇಜಿಸಲಾಗುವುದು ಎಂದು ಹೇಳಿದರು.

ಹೆಲ್ತ್ ಕಾರ್ಡ್ ಮತ್ತು ಸಿಬ್ಬಂದಿಯ ಆರೋಗ್ಯ ತಪಾಸಣೆ:

ಪ್ರತಿ ವರ್ಷ ಪೊಲೀಸ್ ಸಿಬ್ಬಂದಿಗೆ ಆರೋಗ್ಯ ತಪಾಸಣೆಯನ್ನು ಕೈಗೊಳ್ಳಲಾಗುತ್ತಿದೆ. ಈ ತಪಾಸಣೆಯ ವರದಿಯ ಆಧಾರದ ಮೇಲೆ ಮೇಲಿಂದ ಮೇಲೆ ಅನಾರೋಗ್ಯದಿಂದ ಬಳಲುವ ಸಿಬ್ಬಂದಿಯನ್ನು ಗುರುತಿಸಿ ಅವರಿಗೆ ಸೂಕ್ತ ಚಿಕಿತ್ಸೆಯನ್ನು ಕೊಡಿಸುವಂತೆ ಮತ್ತು ನಿರಂತರವಾಗಿ ಅವರ ಆರೋಗ್ಯದ ಬೆಳವಣಿಗೆಗಳ ಮೇಲೆ ಗಮನ ಇರಿಸಲು ಮತ್ತು ಹೆಲ್ತ್ ಕಾರ್ಡ್ ನಿರ್ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಐಜಿಪಿ ಅಲೋಕ ಕುಮಾರ ಅವರು ತಿಳಿಸಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರವೀಂದ್ರ ಗಡಾದಿ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು. | itskannada – it’s kannada

 

 ಇಟ್ಸ್ ಕನ್ನಡ : ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ. ಬೆಳಗಾಂ ಸುದ್ದಿಗಾಗಿ ಬೆಳಗಾಂ ಪುಟ ಕ್ಲಿಕ್ಕಿಸಿ ಅಥವಾ ಇಟ್ಸ್ ಕನ್ನಡ ಬೆಳಗಾಂ ಪುಟ –ಬೆಳಗಾಂ ನ ಈ ದಿನದ ಸುದ್ದಿಗಳು -ಇಲ್ಲವೇ ವಿಭಾಗ ಬೆಳಗಾಂ ಕನ್ನಡ ಸುದ್ದಿಗಳು ಕ್ಲಿಕ್ಕಿಸಿ itskannada – Today News In Kannada. for latest news visit-Kannada news– Click for Belgaum News- Belgaum News Today  or look at Belgaum News In Kannada

ನಮ್ಮ ಸುದ್ದಿ ತಾಣವನ್ನು – itskannada – its ಕನ್ನಡ – ಇಟ್ಸ್ ಕನ್ನಡ – ಅಥವಾ its Kannada – it’s Kannada – it’s ಕನ್ನಡ ಎಂದು ಹುಡುಕಬಹುದಾಗಿದೆ.

ಓದುಗರಿಗೆ ಇನ್ನೂ ಹೆಚ್ಚಿನ ಸುದ್ದಿ ಹಾಗೂ ವಿವರ ನೀಡಲು ಈ ಹೊಸ ಪುಟ ತೆರೆಯಲಾಗಿದೆ. ಅತೀ ಶೀಘ್ರದಲ್ಲೇ –Maulr News Today – Devanahalli News Today – Hoskote News Today– Yelahanka News Today– Kolar News Today – Mahadevapura News Today – Anekal News Today –KR Puram News Today –