ಸಕ್ರಿಯ ರಾಜಕಾರಣದಿಂದ ನಿರ್ಗಮಿಸುತ್ತೇನೆ – ನಟ ಅಂಬರೀಷ್

0

Politics : (itskannada) ಬೆಂಗಳೂರು: ಚುನಾವಣೆಯ ದಿನಾಂಕ ಘೋಷಣೆಯಾದಾಗಿಲಿನಿಂದ ಇಲ್ಲಿಯ ತನಕ ಮಾಜಿ ಸಚಿವ, ನಟ  ಅಂಬರೀಷ್ ರವರ ರಾಜಕೀಯ ಬೆಳವಣಿಗೆ ನಿಗೂಡವಾಗಿ ಕುತೂಹಲಕ್ಕೆ ಕಾರಣವಾಗಿತ್ತು. ಇಲ್ಲಿಯವರೆಗೂ ನಿಗೂಢವಾಗಿ ನಡೆದುಕೊಂಡ ಅಂಬರೀಷ್ ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಇದೇ ಮೊದಲ ಬಾರಿ ಮುಕ್ತವಾಗಿ ಮಾತನಾಡಿದರು.

ಈ ಬಗ್ಗೆ ಬೆಂಗಳೂರು ನಿವಾಸದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅಂಬರೀಶ್ ನಾನಿನ್ನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಮಾಜಿ ಸಚಿವ, ನಟ  ಅಂಬರೀಷ್ ಹೇಳುತ್ತಾ ನನಗೂ ವಯಸ್ಸಾಗಿದೆ. ಆರೋಗ್ಯ ಕೂಡ ಕೈಕೊಟ್ಟಿದೆ. ಹೀಗಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಪ್ರಚಾರಕ್ಕೂ ಹೋಗುವುದಿಲ್ಲ ಎಂದು ತಿಳಿಸಿದ್ದಾರೆ.

ಮಂಡ್ಯದಲ್ಲಿ ನಾಯಕರಿಗೇನು ಕಡಿಮೆಯಿಲ್ಲ ,  ನಾನಿಲ್ಲ ಅಂದರೆ  ಇನ್ನೊಬ್ಬ ನಾಯಕ ಹುಟ್ಟಿಕೊಳ್ಳುತ್ತಾನೆ. ನನ್ನ ಶಕ್ತಿ ಕುಂದುತ್ತಿದೆ. ನಾನ್ಯಾಕೆ ಬೇರೆಯವರ ಪ್ರಚಾರಕ್ಕೆ ಹೋಗಬೇಕು. ನಾನು ಎಲ್ಲವನ್ನೂ ಯೋಚಿಸಿಯೇ ನಿರ್ಧರಿಸಿದ್ದೇನೆ. ಸಕ್ರಿಯ ರಾಜಕಾರಣದಿಂದ ನಿರ್ಗಮಿಸುತ್ತೇನೆ ಎಂದೂ ಅಂಬಿ ಹೇಳಿದರು.

ಪಕ್ಷದ ಹೈಕಮಾಂಡ್ ಗೆ ನಾನು ಯಾರದೂ ಹೆಸರು ಸೂಚಿಸಿಲ್ಲ.  ಒಂದು ವೇಳೆ ಅವರು ಸೂಚಿಸಿದರೆ ಅವರನ್ನು ಗೆಲ್ಲಿಸುವ ಹೊಣೆ ನನ್ನದಾಗುತ್ತದೆ ಎಂದರು. ||ಈ ವಿಭಾಗದ ಇನ್ನೂ ಹೆಚ್ಚಿನ ಸುದ್ದಿಗಳಿಗಾಗಿ ಕ್ಲಿಕ್ಕಿಸಿ…. Karnataka Politics News

You're currently offline