ತುಮಕೂರು-ವೈಶಾಲಿ ಬಾರ್ ಅಂಡ್ ರೆಸ್ಟೋರೆಂಟ್ ಗೆ ಬೆಂಕಿ-ಬಿಲ್ ಕೊಡದೆ ಮಧ್ಯಪ್ರಿಯರು ಎಸ್ಕೇಪ್

Tumkur-Fire to Vaishali Bar and Restaurant

Tumkur (itskannada) ತುಮಕೂರು-ವೈಶಾಲಿ ಬಾರ್ ಅಂಡ್ ರೆಸ್ಟೋರೆಂಟ್ ಗೆ ಬೆಂಕಿ-ಬಿಲ್ ಕೊಡದೆ ಮಧ್ಯಪ್ರಿಯರು ಎಸ್ಕೇಪ್-Tumkur-Fire to Vaishali Bar and Restaurant : ತುಮಕೂರಿನ ಬಿ.ಎಚ್ ರಸ್ತೆಯ ವೈಶಾಲಿ ಬಾರ್ ಅಂಡ್ ರೆಸ್ಟೋರೆಂಟ್ ಗೆ ತಡರಾತ್ರಿ ಬೆಂಕಿ ತಗುಲಿದ ಪರಿಣಾಮ ದಟ್ಟವಾದ ಹೋಗೆ ಆವರಿಸಿದೆ, ರೆಸ್ಟೋರೆಂಟ್ ನ ಅಡುಗೆ ಕೋಣೆಯಲ್ಲಿನ ಜಿಡ್ಡಿನ ಪರಿಣಾಮದಿಂದಾಗಿ ಬೆಂಕಿ ಕಾಣಿಸಿಕೊಂಡಿದೆ ಎಂದು ತಿಳಿದು ಬಂದಿದೆ.

ತಡರಾತ್ರಿ ಈ ಘಟನೆ ನಡೆದಿದ್ದು ಪರಿಣಾಮ ಅಲ್ಲಿದ್ದ ವಸ್ತುಗಳು ಪಿಟೋಪಕರಣಗಳು ಬೆಂಕಿಯ ಕೆನ್ನಾಲಿಗೆಗೆ ಭಸ್ಮವಾಗಿವೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಬಾರ್ ನಲ್ಲಿದ ಮಧ್ಯಪ್ರಿಯರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಇದನ್ನೇ ಲಾಭಿ ಮಾಡಿಕೊಂಡ ಕೆಲ ಮಧ್ಯಪ್ರಿಯರು ಬಿಲ್ ಪಾವತಿಸದೆ ಅಲ್ಲಿಂದ ತೆರಳಿದ್ದಾರೆಂದು ತಿಳಿದು ಬಂದಿದೆ.

ಈ ಬಗ್ಗೆ ಹೊಸಬಡಾವಣೆ ಪೋಲಿಸರು ಪ್ರಕರಣ ದಾಖಲಿಸಿದ್ದು, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಲಿಲ್ಲ. /// ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ಕ್ಲಿಕ್ಕಿಸಿ – Kannada News- Crime News – Karnataka Crime News – Tumkur News Online