ತುಮಕೂರು ಬಳಿ ಪೊಲೀಸರಿಂದ 2.98 ಕೋಟಿ ರೂ. ವಶ

Police seizes Rs 2.98 cr cash near Tumkur

0

Tumkur (itskannada)ತುಮಕೂರು:  ತುಮಕೂರು ಬಳಿ ಪೊಲೀಸರಿಂದ 2.98 ಕೋಟಿ ರೂ. ವಶ : ಚುನಾವಣಾ ಆಯೋಗದ  ತಂಡಗಳು ಮತ್ತು ಪೊಲೀಸ್ ಅಧಿಕಾರಿಗಳು ಖಾಸಗಿ ಬಸ್ ಯಿಂದ 2.98 ಕೋಟಿ ರೂ. ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.

ನಗರ ಹೊರವಲಯದಲ್ಲಿರುವ JAS ಟೋಲ್ ನ ಬಳಿ ಮಂಗಳವಾರ ಬೆಳಿಗ್ಗೆ ಗಜಾನನಾ ಮೋಟಾರ್ ಟ್ರಾನ್ಸ್ ಪೋರ್ಟ್ ಗೆ ಸೇರಿದ ಸ್ಲೀಪರ್ ಕೋಚ್ ಬಸ್ ನಿಂದ 2000 ಮತ್ತು 500 ರೂ. ಮುಖಬೆಲೆಯ 2.98 ಕೋಟಿ ರೂ. ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.

ಸಾರ್ವಜನಿಕರಂತೆ ನಟಿಸಿದ ಪೊಲೀಸರು ಖಾಸಗಿ ಬಸ್ ಮೇಲೆ ದಾಳಿ ನಡೆಸಿ ಹಣವನ್ನು ವಶಪಡಿಸಿಕೊಂಡರು ಎಂದು ಜಿಲ್ಲೆಯ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ದಿವ್ಯ ಗೋಪಿನಾಥ್ ಹೇಳಿದರು, ‘ಹಣವು ಯಾರಾದರೂ ಪ್ರಯಾಣಿಕರಿಕೆ ಸೇರಿದ್ದಿರಬೇಕೆಂದು ವಿಚಾರಿಸಿದಾಗ ಅದರ ವಾರಸುದಾರರು ಯಾರು ಅಲ್ಲಿರಲಿಲ್ಲ, ಹಣವು ಯಾರದು ಎಂದು ಹೇಳಲು ಯಾರೊಬ್ಬರೂ ಮುಂದೆ ಬರಲಿಲ್ಲ.

ಹಣದ ಮೂಲವನ್ನು ಕಂಡುಹಿಡಿಯಲು ಪೊಲೀಸರು ಮತ್ತಷ್ಟು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣವನ್ನು ಕ್ಯಾತ್ಸಂದ್ರ  ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ. // ಈ ವಿಭಾಗದ ಇನ್ನಷ್ಟು ಸುದ್ದಿಗಳಿಗಾಗಿ ಕ್ಲಿಕ್ಕಿಸಿ –  Tumkur News Online – Crime – Karnataka Crime News – Kannada News – Karnataka News