ಪ್ರಭಾಸ್ ಜೊತೆ ನಟನೆ ಅಧ್ಭುತ ಅನುಭವ-ಬಾಲಿವುಡ್ ನಟ ಜಾಕಿ ಶ್ರೊಫ್

exciting-to-work-with-Prabhas-says-Bollywood star Jackie Shroff

Tollywood News (itskannada) ಟಾಲಿವುಡ್ ನ್ಯೂಸ್ : ಪ್ರಭಾಸ್ ಜೊತೆ ನಟನೆ ಅಧ್ಭುತ ಅನುಭವ-ಬಾಲಿವುಡ್ ನಟ ಜಾಕಿ ಶ್ರೊಫ್ : ಪ್ರಭಾಸ್ ರ ನೂತನ ಸಿನಿಮಾ ತಂಡ ಸಧ್ಯ ದುಬೈನಲ್ಲಿ ಬಿಡುಬಿಟ್ಟಿದೆ, ಬಾರೀ ನಿರೀಕ್ಷೆಯ ಸಾಹಸ ಥ್ರಿಲ್ಲರ್ ಚಿತ್ರ, ಸಾಹೋ ತಯಾರಕರು ಪ್ರಸ್ತುತ ದುಬೈನಲ್ಲಿ 40 ದಿನಗಳ ದೀರ್ಘಾವಧಿಯ ವೇಳಾಪಟ್ಟಿಯನ್ನು ಹೊಂದಿದ್ದಾರೆ. ಸಾಹೋದ ಎಲ್ಲಾ ಪ್ರಮುಖ ಪಾತ್ರವರ್ಗ ಮತ್ತು ಸಿಬ್ಬಂದಿಗಳು ದುಬೈ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದಾರೆ. ಸುಜೀತ್ ಈ ಹೆಚ್ಚು ನಿರೀಕ್ಷಿತ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ಬಾಲಿವುಡ್ ನಟ ಜಾಕಿ ಶ್ರೊಫ್ ಸಾಹೋದಲ್ಲಿ ನಕಾರಾತ್ಮಕ ಪಾತ್ರವನ್ನು ನಿಭಾಯಿಸಲಿದ್ದಾರೆ. ಜನಪ್ರಿಯ ಇಂಗ್ಲಿಷ್ ದಿನಪತ್ರಿಕೆಯ ಅವರ ಇತ್ತೀಚಿನ ಸಂದರ್ಶನದಲ್ಲಿ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ರನ್ನು ಪ್ರಶಂಸಿದ್ದಾರೆ. “ಇಂತಹ ಪ್ರತಿಭಾವಂತ ವ್ಯಕ್ತಿಯೊಂದಿಗೆ ಕೆಲಸ ಮಾಡಲು  ತುಂಬಾ ಉತ್ತೇಜನಕಾರಿಯಾಗಿದೆ. ಏನಾದರು ಹೊಸತನ್ನು ಕಲಿತುಕೊಳ್ಳುತ್ತೇನೆ, “ಎಂದಿದ್ದಾರೆ.

ಪ್ರಭಾಸ್ ರವರು ಉತ್ತಮ ನಟ ಹಾಗೂ ಅವರ ಇತ್ತೀಚಿನ ಬಾಹುಬಲಿ ಚಿತ್ರ ನೋಡಿ ನಾನು ಕೂಡ ಅವರ ಅಭಿಮಾನಿಯಾಗಿದ್ದೇನೆ, ಅವರ ಜೊತೆಗೆ ನಟಿಸಲು ನನಗೆ ಉತ್ಸುಕವಾಗಿದೆ ಎಂದಿದ್ದಾರೆ. //// ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ತಪ್ಪದೇ ಕ್ಲಿಕ್ಕಿಸಿ Telugu Cinema News in Kannada