ಯು ಟರ್ನ್ ತೆಲುಗು ವರ್ಶನ್-ಕ್ಲೈಮ್ಯಾಕ್ಸ್ ಬದಲಾವಣೆ

Changed Climax For U Turn Telugu Version

Tollywood (itskannada) ಯು ಟರ್ನ್ ತೆಲುಗು ವರ್ಶನ್-ಕ್ಲೈಮ್ಯಾಕ್ಸ್ ಬದಲಾವಣೆ-Changed Climax For U Turn Telugu Version :  ಈಗಾಗಲೇ ಕನ್ನಡದಲ್ಲಿ ಯು ಟರ್ನ್ ನೋಡಿದ ಪ್ರೇಕ್ಷಕರು ತೆಲುಗು ಭಾಷೆಯಲ್ಲಿ ಚಿತ್ರವನ್ನು ವೀಕ್ಷಿಸುವಾಗ ಥ್ರಿಲ್ ಕಳೆದುಕೊಂಡು ನಿರಾಶೆಗೊಳ್ಳಬೇಕಾಗಿಲ್ಲ. ಚಿತ್ರದ ನಿರ್ದೇಶಕ ಪವನ್ ಕುಮಾರ್  ಚಿತ್ರದ ಕಥೆಗೆ ಬೇರೆಯದೇ ಆದ ರೂಪು ನೀಡುತ್ತಿದ್ದಾರೆ, ಕನ್ನಡ ಹಾಗೂ ತೆಲುಗು ಅವತರಿಣಿಕೆಯಲ್ಲಿ ಸಾಕಷ್ಟು ಬದಲಾವಣೆ ನೀಡಲು ತಯಾರಿ ನಡೆಸುತ್ತಿದ್ದಾರೆ

ಕನ್ನಡದ ‘ಯು ಟರ್ನ್’ ಚಿತ್ರದಲ್ಲಿ ಶ್ರದ್ಧಾ ಶ್ರೀನಾಥ್ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ರೋಮಾಂಚಕ ಚಿತ್ರವು ತೆಲುಗು ಭಾಷೆಯಲ್ಲಿ ಸಮಂತಾ ಅವರ ಮುಖ್ಯ ಪಾತ್ರವಾಗಿ ಮರು ನಿರ್ದೇಶಿಸಲ್ಪಡುತ್ತಿದೆ. ಕನ್ನಡದ ತೆಲುಗು ಆವೃತ್ತಿಯನ್ನು ಕೂಡ ಪವನ್ ಕುಮಾರ್ ರವರೇ ನಿರ್ದೇಶಿಸುತ್ತಿದ್ದಾರೆ. ತೆಲುಗು ವರ್ಶನ್ ಗಾಗಿ ಸಾಕಷ್ಟು ಬದಲಾವಣೆ ಮಾಡಿರುವ ಅವರು ತೆಲುಗು ಪ್ರೇಕ್ಷಕರಿಗೆ ಹೊಸ ಫೀಲ್ ನೀಡಲು ಮುಂದಾಗಿದ್ದಾರೆ, ಹಾಗೂ ಕನ್ನಡದ ಯು ಟರ್ನ್ ಚಿತ್ರವನ್ನು ಸಾಕಷ್ಟು ತೆಲುಗು ಸಿನಿ ರಸಿಕರು ಅದಾಗಲೇ ನೋಡಿರುವುದರಿಂದ ಅದೇ ಕಥೆಗೆ ಪ್ರೇಕ್ಷಕರನ್ನು ಸೆಳೆಯುವುದು ನಿರ್ದೇಶಕರಿಗೆ ದೊಡ್ಡ ಸವಾಲಾಗಿದೆ.

ಚಿತ್ರದ ಚಿತ್ರೀಕರಣ ಹೈದರಾಬಾದ್ ನಲ್ಲಿ ನಡೆಯುತ್ತಿದ್ದು , ಸಮಂತಾ ನಟನೆಯ ಕೆಲವು ಸನ್ನಿವೇಶಗಳನ್ನು ಚಿತ್ರೀಕರಿಸಲಾಯಿತು. /// ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ಕ್ಲಿಕ್ಕಿಸಿ – Telugu Cinema News in Kannada