ಟಾಲಿವುಡ್-ಮಹೇಶ್ ಬಾಬುಗೆ ಬ್ಲಾಕ್ ಬಸ್ಟರ್ ಸಿನಿಮಾ ತಯಾರಿ-ಸುಕುಮಾರ್

Blockbuster for Mahesh Babu-Sukumar

Tollywood News (itskannada) ಟಾಲಿವುಡ್ ನ್ಯೂಸ್ : ಟಾಲಿವುಡ್-ಮಹೇಶ್ ಬಾಬುಗೆ ಬ್ಲಾಕ್ ಬಸ್ಟರ್ ಸಿನಿಮಾ ತಯಾರಿ-ಸುಕುಮಾರ್-Blockbuster for Mahesh Babu-Sukumar- ರಂಗಸ್ಥಳಂನ ಯಶಸ್ಸಿನ ನಂತರ ನಿರ್ದೇಶಕ ಸುಕುಮಾರ್ ತಮ್ಮ ಮುಂದಿನ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದಾರೆ. ನಾಯಕ ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಮುಂದಿನ ಚಿತ್ರಕ್ಕಾಗಿ ಸಿದ್ದತೆನಡೆಸಿದ್ದಾರೆ. ಈ ಯೋಜನೆಯು ಮಿಥ್ರಿ ಮೂವಿ ಮೇಕರ್ಸ್ ಮೂಲಕ ಹೊರಬರುವ ನಿರೀಕ್ಷೆಯಿದೆ. ಮಹೇಶ್ ಬಾಬು ರವರಿಗೆ 1 ನೆನೋಕ್ಕಡಿನೆ ಭಾರೀ ನಿರಾಶೆ ನೀಡಿತ್ತು, ಎಂದು ಸುಕುಮಾರ್ ಮಹೇಶ್ ಬಾಬುರವರಿಗೆ ಬ್ಲಾಕ್ ಬಸ್ಟರ್ ಸಿನಿಮಾ ನೀಡಲು ನಿರ್ಧರಿಸಿದ್ದಾರೆ.

ನಿರ್ದೇಶಕ ಸುಕುಮಾರ್ ತನ್ನ ಹುಟ್ಟೂರು ಮಟ್ಟಪರ್ರು ಗೆ ಭೇಟಿ ನೀಡಿದ್ದಾರೆ.ಈ ಸಂಧರ್ಭದಲ್ಲಿ  ಸ್ಥಳೀಯ ಮಾಧ್ಯಮದೊಂದಿಗೆ ಮಾತನಾಡಿದ ಅವರು , ಮಹೇಶ್ ಅವರೊಂದಿಗಿನ ಅವರ ಚಿತ್ರ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಮತ್ತು ಈ ದಿನಗಳಲ್ಲಿ ಅವರು ಚಿತ್ರಕಥೆ ಸಿದ್ದ ಪಡಿಸುತ್ತಿರುವುದಾಗಿ ಹೇಳಿದ್ದಾರೆ. ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್ ಸಂಗೀತವನ್ನು ನೀಡಲಿದ್ದು ,ಸುಕುಮಾರ್ ಈಗಾಗಲೇ ಸರಿಯಾದ ನಟರಿಗೆ ಸ್ಕೌಟಿಂಗ್ ಮಾಡುತ್ತಿದ್ದಾರೆ ಎಂದು ಬಹಿರಂಗಪಡಿಸಿದರು. //// ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ತಪ್ಪದೇ ಕ್ಲಿಕ್ಕಿಸಿ Telugu Cinema News in Kannada