ಬಿಡುಗಡೆಗೆ ಸಿದ್ದವಾಗಿದೆ ‘ಜಂಬ ಲಕಿಡಿ ಪಂಬಾ’

Kannada News (itskannada) Tollywood  : ಬಿಡುಗಡೆಗೆ ಸಿದ್ದವಾಗಿದೆ ‘ಜಂಬ ಲಕಿಡಿ ಪಂಬಾ’ : ಶ್ರೀನಿವಾಸ್ ರೆಡ್ಡಿ ಅಭಿನಯದ ‘ಜಂಬ ಲಕಿಡಿ ಪಂಬಾ’ ಬಿಡುಗಡೆ ಸಿದ್ದವಾಗಿದೆ. ಜೂನ್ 22 ರಂದು ಈ  ಹಾಸ್ಯ ಪ್ರಧಾನ ಚಿತ್ರವು ಚಿತ್ರಮಂದಿರಕ್ಕೆ ಬರಲಿದೆ. ಜೆ.ಬಿ. ಮುರಳಿ ಕೃಷ್ಣ ನಿರ್ದೇಶನದ ಈ ಚಿತ್ರವು ಸಿದ್ಧಿ ಇದ್ನಾನಿ ಅವರನ್ನು ಪ್ರಮುಖ ನಟಿಯನ್ನಾಗಿ ಪರಿಚಯಿಸುತ್ತಿದೆ.

ಪೋಷಕ ಪಾತ್ರದಲ್ಲಿ ಪೊಸನಿ ಕೃಷ್ಣ ಮುರಳಿ, ವೆನ್ನೆಲಾ ಕಿಶೋರ್, ಸತ್ಯಂ ರಾಜೇಶ್, ಧನರಾಜ್, ರಘು ಬಾಬು, ಜಯ ಪ್ರಕಾಶ್ ರೆಡ್ಡಿ, ತನಿಕೆಲ್ಲ ಭರಣಿ, ಹರಿ ತೇಜಾ, ಹಿಮಾಜ, ಸುಧಾ, ಮಧುಮಣಿ ಮತ್ತು ರಜೀತಾ ಸೇರಿದ್ದಾರೆ. ಈ ಚಿತ್ರವನ್ನು ರವಿ ನಿರ್ಮಿಸಿದ್ದು, ಜೊಜೊ ಜೋಸ್ ಮತ್ತು ಎನ್. ಶ್ರೀನಿವಾಸ ರೆಡ್ಡಿ ಅವರು ಸಹ ನಿರ್ಮಾಣ ಕಾರರಾಗಿದ್ದಾರೆ ಮತ್ತು ಬಿ.ಸುರೇಶ್ ರೆಡ್ಡಿ ಅವರ ಬ್ಯಾನರ್ಗಳಾದ Celluloids ಮತ್ತು Mainline ​​ಪ್ರೊಡಕ್ಷನ್ಸ್ ನಲ್ಲಿ ಮೂಡಿಬರುತ್ತಿದೆ.