ಐವತ್ತು ದಿನ ಮುಗಿಸಿದ ‘ಭರತ್ ಅನೆ ನೇನು’

Kannada News (itskannada) Tollywood  : ಹೈದರಾಬಾದ್ : ಐವತ್ತು ದಿನ ಮುಗಿಸಿದ ‘ಭರತ್ ಅನೆ ನೇನು’ –  ತೆಲುಗಿನ ಸೂಪರ್ ಸ್ಟಾರ್ ಮಹೇಶ್ ಬಾಬು ಅಭಿನಯದ ಭರತ್ ಅನೆ ನೇನು ಚಿತ್ರ ದೇಶಾದ್ಯಂತ 25 ಚಿತ್ರಮಂದಿರಗಳಲ್ಲಿ 50 ದಿನಗಳನ್ನು ಮುಗಿಸಿದೆ.

ಐವತ್ತು ದಿನ ಮುಗಿಸಿದ ‘ಭರತ್ ಅನೆ ನೇನು’

ಏಪ್ರಿಲ್ 20 ರಂದು ಬಿಡುಗಡೆಯಾಗಿದ್ದ ಈ ಚಿತ್ರವು ಶ್ರೀಮಂತುಡು ಖ್ಯಾತಿಯ ಕೊರಟಾಲ ಶಿವು  ನಿರ್ದೇಶನದಲ್ಲಿ ಮೂಡಿಬಂದಿದ್ದು  ಆಂಧ್ರ ಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಲ್ಲಿ  50 ದಿನಗಳನ್ನು ಪೂರೈಸಿದೆ. ಈ ಚಿತ್ರದಲ್ಲಿ ಮಹೇಶ್ ಬಾಬುರವರು ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಭರತ್ ರಾಮ್ ಎಂಬ ಯುವಕನ ಪಾತ್ರ ಮಾಡುತ್ತಿದ್ದು, ಆತ ಮುಂದೆ ತನ್ನ ಜವಾಬ್ದಾರಿಯನ್ನು ಹೇಗೆ ನಿರ್ವಹಿಸುತ್ತಾನೆ ಎಂಬುದು ಈ ಚಿತ್ರದ ಕಥೆಯಾಗಿದೆ.
ಇನ್ನು ಈ ಚಿತ್ರವು ತೆಲುಗು ರಾಜ್ಯಗಳಾದ ತೆಲಂಗಾಣ ಹಾಗೂ ಆಂಧ್ರ ಪ್ರದೇಶ ದ 20 ಥಿಯೇಟರ್ ಗಳು , ಯುನೈಟೆಡ್ ಅರಬ್ ನ 4 ಥಿಯೇಟರ್ ಗಳಲ್ಲಿ ಮತ್ತು ಕರ್ನಾಟಕದ 1  ಥಿಯೇಟರ್ ನಲ್ಲಿ 50 ದಿನಗಳನ್ನು ಪೂರೈಸಿದೆ. /// Telugu Cinema News in Kannada