ವರ್ಲ್ಡ್ ಕ್ರಿಕೆಟ್ ನಲ್ಲಿ ಹೊಸ ದಾಖಲೆ ಸೃಷ್ಟಿಸಿದ ನ್ಯೂಜಿಲೆಂಡ್

Kannada News (itskannada) Sports : ವರ್ಲ್ಡ್ ಕ್ರಿಕೆಟ್ ನಲ್ಲಿ ಹೊಸ ದಾಖಲೆ ಸೃಷ್ಟಿಸಿದ ನ್ಯೂಜಿಲೆಂಡ್ : ವಿಶ್ವ ಕ್ರಿಕೆಟ್‌‌ನಲ್ಲಿ ನಿರ್ಮಾಣವಾಯ್ತು ನೂತನ ದಾಖಲೆ… 50 ಓವರ್‌‌ನಲ್ಲಿ ಬರೋಬ್ಬರಿ 490 ರನ್‌‌  ಗಳಿಸಿದ ನ್ಯೂಜಿಲೆಂಡ್ ಮಹಿಳಾ ತಂಡ ಹೊಸ ದಾಖಲೆ ನಿರ್ಮಿಸಿದೆ.

ವರ್ಲ್ಡ್ ಕ್ರಿಕೆಟ್ ನಲ್ಲಿ ಹೊಸ ದಾಖಲೆ ಸೃಷ್ಟಿಸಿದ ನ್ಯೂಜಿಲೆಂಡ್

ಕ್ರಿಕೆಟ್‌‌ನಲ್ಲಿ ಬಹುಬೇಗ ಅಳಸಿ ಹಾಕಲು ಸಾಧ್ಯವಿಲ್ಲದಂತಹ ಹೊಸದೊಂದು ದಾಖಲೆ ನಿರ್ಮಾಣವಾಗಿದ್ದು, ನ್ಯೂಜಿಲೆಂಡ್‌ನ ಮಹಿಳಾ ಕ್ರಿಕೆಟ್‌‌ ತಂಡ ಈ ದಾಖಲೆ ನಿರ್ಮಿಸಿದೆ.
ಐರ್ಲೆಂಡ್‌‌ ತಂಡದ ವಿರುದ್ಧ ಇಂದು ನಡೆದ ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ನಿಗದಿತ 50 ಓವರ್‌ಗಳಲ್ಲಿ ಬರೋಬ್ಬರಿ 490ರನ್‌ ಗಳಿಕೆ ಮಾಡಿ ಈವರೆಗೆ ಕ್ರಿಕೆಟ್‌‌ ಇತಿಹಾಸದಲ್ಲಿ ನಿರ್ಮಾಣವಾಗದಂತಹ ದಾಖಲೆ ನ್ಯೂಜಿಲೆಂಡ್‌‌ ತಂಡ ನಿರ್ಮಿಸಿದೆ.
ಟಾಸ್‌ ಗೆದ್ದು ಬ್ಯಾಟಿಂಗ್‌‌ ಮಾಡಿದ ನ್ಯೂಜಿಲೆಂಡ್‌ ತಂಡದ ಪರ ಕ್ಯಾಪ್ಟನ್‌ ಸುಝೀ ಬೇಟ್ಸ್(151), ಜೆಸ್ ವಾಟ್ಕಿನ್(62), ಮ್ಯಾಡಿ ಗ್ರೀನ್(121) ಹಾಗೂ ಅಮೆಲಿಯಾ ಕೆರ್(81)ರನ್‌ಗಳ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 4ವಿಕೆಟ್‌‌ ಕಳೆದುಕೊಂಡು ಬರೋಬ್ಬರಿ 490ರನ್‌ ಗಳಿಸಿದೆ.
ಇದರೊಂದಿಗೆ ಈ ಹಿಂದೆ ನ್ಯೂಜಿಲೆಂಡ್‌ ತಂಡ 1997ರಲ್ಲಿ ಪಾಕ್‌ ವಿರುದ್ಧ ನಿರ್ಮಿಸಿದ್ದ 455ರನ್‌ಗಳ ದಾಖಲೆ ಅಳಿಸಿ ಹಾಕಿದೆ. ಇನ್ನು 2016ರಲ್ಲಿ ಇಂಗ್ಲೆಂಡ್‌ ಮಹಿಳಾ ತಂಡ ಪಾಕ್‌ ವಿರುದ್ಧ 444ರನ್‌ ಗಳಿಸಿತ್ತು. ಐರ್ಲೆಂಡ್‌‌ ತಂಡದ ಪರ ಮರ್ರಿ 10 ಓವರ್‌‌ ಬೌಲಿಂಗ್‌ ಮಾಡಿ 119ರನ್‌‌ ನೀಡಿ, ದುಬಾರಿ ಬೌಲರ್‌ ಎನಿಸಿಕೊಂಡರು. //// Sports News Kannada – Kannada Sports News