ವಿರಾಟ್ ಕೊಹ್ಲಿ ಪ್ರತಿಮೆ ಅನಾವರಣ

Kannada News (itskannada) Sports News : ವಿರಾಟ್ ಕೊಹ್ಲಿ ಪ್ರತಿಮೆ ಅನಾವರಣ – ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಮೇಣದ ಬತ್ತಿಯ ಪ್ರತಿಮೆಯನ್ನು ದೆಹಲಿಯ ಮೇಡಂ ಟುನ್ಸಾಡ್ಸ್  ಮ್ಯೂಜಿಯಂವೊಂದರಲ್ಲಿ ನಿನ್ನೆ ಅನಾವರಣ  ಗೊಳಿಸಲಾಯಿತು.  ಮ್ಯೂಜಿಯಂನಲ್ಲಿ ಈ  ಹಿಂದೆ ಕಪಿಲ್ ದೇವ್, ಲಿಯೋನಲ್  ಮೆಸ್ಸಿ, ಮತ್ತು ಉಸೇನ್ ಬೊಲ್ಟ್ ಇವರುಗಳ ಮೇಣದ ಬತ್ತಿ ಈಗಾಗಲೇ ಅನಾವರಣ ಗೊಳಿಸಿದ್ದಾರೆ. ಈಗ ನಾಯಕ ವಿರಾಟ್ ಕೊಹ್ಲಿ ಅವರ ಪ್ರತಿಮೆಯನ್ನು ಅನಾವರಣ ಗೊಳಿಸಿದ್ದಾರೆ.

ವಿರಾಟ್ ಕೊಹ್ಲಿ ಪ್ರತಿಮೆ ಅನಾವರಣ

ವಿರಾಟ್ ಕೊಹ್ಲಿ ಪ್ರತಿಮೆ ಅನಾವರಣ-itskannada 3

ಅವರ ಮೇಣದ ಬತ್ತಿಯ ಪ್ರತಿಮೆಯನ್ನು ತಯಾರಿಕೆಗೆ ಲಂಡನ್ನಿಂದ ಕಲಾವಿದರನ್ನು ಕರೆಸಲಾಗಿತ್ತು. ಕೊಹ್ಲಿ ಒಬ್ಬ ಭಾರತ ತಂಡದ ಶ್ರೇಷ್ಠ ಆಟಗಾರನಾಗಿದ್ದು. ಮೂರು ವಿಭಾಗದಲ್ಲಿ ಶ್ರೇಷ್ಠ ಆಟದಿಂದ ಗಮನ ಸೆಳೆಯುತ್ತಿದ್ದು  ಸ್ಟಾರ್ ಆಟಗಾರರಾಗಿದ್ದಾರೆ.
ಅಲ್ಲದೆ ಈ ವರ್ಷದಲ್ಲಿ ಅತ್ಯಂತ ಶ್ರೀಮಂತ  ಕ್ರೀಡಾಪಟು ೮೩ ನೇ ಸ್ಥಾನ ಪಡೆದಿದ್ದಾರೆ. ಅಲ್ಲದೆ ಭಾರತದ ಏಕೈಕ ಆಟಗಾರರಾಗಿದ್ದು ವಿಶೇಷ ಎನ್ನಬಹುದು.
ವಿರಾಟ್ ಕೊಹ್ಲಿ ಪ್ರತಿಮೆ ಅನಾವರಣ ವಿಷಯ ತಿಳಿದ ಅವರ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದು , ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಎಲ್ಲಾ ಅಭಿಮಾನಿಗಳು ಶುಭಕೋರಿದ್ದಾರೆ, ಲಕ್ಷಾಂತರ ಅಭಿಮಾನಿಗಳು ಟ್ವೀಟ್ ಮಾಡಿದ್ದು , ಕೆಲ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನ  ಪ್ರತಿಮೆ ಬಳಿ ಸೆಲ್ಫಿ ಕ್ಲಿಕ್ಕಿಸಿ ಕೊಂಡು ಸಂಭ್ರಮಿಸಿದರು. /// Sports News Kannada
WebTitle : ವಿರಾಟ್ ಕೊಹ್ಲಿ ಪ್ರತಿಮೆ ಅನಾವರಣ