ಕುಂಬ್ಳೆ ಕೋಚ್‌ ಹುದ್ದೆ ತೊರೆದಿದ್ದು ಒಂದು ಕಹಿ ಅನುಭವ – ಲಕ್ಷಣ್

Kumble has quit coach and has a bitter experience Says Laxman

0

ಕುಂಬ್ಳೆ ಕೋಚ್‌ ಹುದ್ದೆ ತೊರೆದಿದ್ದು ಒಂದು ಕಹಿ ಅನುಭವ – ಲಕ್ಷಣ್

ಕ್ರೀಡಾಸುದ್ದಿ – ವಿಶಾಖಪಟ್ಟಣ :  ಬಿಸಿಸಿಐನ ಕ್ರಿಕೆಟ್‌ ಸಲಹಾ ಸಮಿತಿ 2016ರಲ್ಲಿ ಕುಂಬ್ಳೆ ಅವರನ್ನು ಟೀಮ್‌ ಇಂಡಿಯಾದ ಕೋಚ್‌ ಆಗಿ ಆಯ್ಕೆ ಮಾಡಿಕೊಂಡಿತ್ತು. ಆದರೆ, ಕುಂಬ್ಳೆ ಮತ್ತು ಕೊಹ್ಲಿ ನಡುವೆ ಹೊಂದಾಣಿಕೆಯಾಗದೆ ಅಂತಿಮವಾಗಿ ಕುಂಬ್ಳೆ ಕೋಚ್‌ ಹುದ್ದೆ ತೊರೆದಿದ್ದರು.

ವಿರಾಟ್‌ ಕೊಹ್ಲಿ ಜತೆಗಿನ ಭಿನ್ನಾಭಿಪ್ರಾಯದಿಂದಾಗಿ ಕುಂಬ್ಳೆ ಕೋಚ್‌ ಹುದ್ದೆಯಿಂದ ನಿರ್ಗಮಿಸಲು ತೀರ್ಮಾನಿಸಿದ್ದರು ಎಂದು  ಬಿಸಿಸಿಐನ ಕ್ರಿಕೆಟ್ ಸಲಹಾ ಸಮಿತಿ ಸದಸ್ಯ ಮತ್ತು ಬ್ಯಾಟಿಂಗ್ ಮಾಂತ್ರಿಕ ಲಕ್ಷ್ಮಣ್‌ ಹೇಳಿದ್ದಾರೆ.

ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ವೇಳೆ ಕಳೆದ ವರ್ಷದ ಚಾಂಪಿಯನ್ಸ್‌ ಟ್ರೋಫಿ ಸಂದರ್ಭದಲ್ಲಿ ಭಾರತೀಯ ಕ್ರಿಕೆಟಿನ ಸಂಘರ್ಷವನ್ನು ಲಕ್ಷ್ಮಣ್‌ ನೆನಿಸಿಕೊಂಡರು.

ಅನಿಲ್ ಮುಂದುವರಿಯಬೇಕೆಂದು ಸಿಎಸಿ ಬಯಸಿದೆ ಎಂದು ಲಕ್ಷ್ಮಣ್ ಹೇಳಿದರು. ಅಲ್ಲದೆ ಅನಿಲ್ ಅವರನ್ನು ತರಬೇತುದಾರರಾಗಿ ಮುಂದುವರೆಸಬೇಕೆಂದು ಸಿಎಸಿಯಲ್ಲಿ ನಾವು ಭಾವಿಸಿದ್ದೆವು ಎಂದರು.

ಕೋಚ್‌ ಆಗಿ ಅನಿಲ್‌ ಮುಂದುವರಿಯಬೇಕು ಎಂಬುದು ಕ್ರಿಕೆಟ್‌ ಸಲಹಾ ಸಮಿತಿಯಲ್ಲಿರುವ ನಮ್ಮ ಅಭಿಪ್ರಾಯವಾಗಿತ್ತು. ಆದರೆ, ಕೋಚ್‌ ಹುದ್ದೆ ತೊರೆಯುವುದು ಸರಿಯಾದ ತೀರ್ಮಾನ ಎಂಬುದು ಕುಂಬ್ಳೆ ಅಭಿಪ್ರಾಯವಾಗಿತ್ತು. ಒಟ್ಟಾರೆ ಅದೊಂದು ಕಹಿ ಅನುಭವವ ಎಂದರು. ////

WebTitle : ಕುಂಬ್ಳೆ ಕೋಚ್‌ ಹುದ್ದೆ ತೊರೆದಿದ್ದು ಒಂದು ಕಹಿ ಅನುಭವ – ಲಕ್ಷಣ್-Kumble has quit coach and has a bitter experience Says Laxman

>>> ಕ್ಲಿಕ್ಕಿಸಿ ಕನ್ನಡ ನ್ಯೂಸ್ : Sports News KannadaKannada Sports News

You're currently offline