ವಿಶ್ವ ಕಪ್ ಗೆಲುವಿನ ರಹಸ್ಯ ಬಿಚ್ಚಿಟ್ಟ ಸೆಹ್ವಾಗ್

Kannada News (itskannada) Sports ವಿಶ್ವ ಕಪ್ ಗೆಲುವಿನ ರಹಸ್ಯ ಬಿಚ್ಚಿಟ್ಟ ಸೆಹ್ವಾಗ್

ನವದೆಹಲಿ: 2011ರಲ್ಲಿ ನಡೆದ ವಿಶ್ವಕಪ್‌‌‌ ಫೈನಲ್‌‌ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನ ಮಣಿಸಿ ಮಹೇಂದ್ರ ಸಿಂಗ್‌ ಧೋನಿ ನೇತೃತ್ವದ ಟೀಂ ಇಂಡಿಯಾ ವಿಶ್ವಕಪ್‌ಗೆ ಮುತ್ತಿಕ್ಕಿರುವುದು ಎಲ್ಲರಿಗೂ ಗೊತ್ತಿದೆ. ಬರೋಬ್ಬರಿ 7 ವರ್ಷಗಳ ನಂತರ ಟೀಂ ಇಂಡಿಯಾ ತಂಡದ ಆರಂಭಿಕ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್‌‌, ಗೆಲುವಿನ ಹಿಂದಿನ ರಹಸ್ಯವೊಂದನ್ನ ಹೊರಹಾಕಿದ್ದಾರೆ.

ಹೌದು, ಲಂಕಾ ನೀಡಿದ್ದ 274ರನ್‌ಗಳ ಗುರಿ ಬೆನ್ನಟ್ಟಿದ್ದ ಭಾರತ ತಂಡ ವಿರೇಂದ್ರ ಸೆಹ್ವಾಗ್‌ ವಿಕೆಟ್‌ ಬೇಗನೆ ಕಳೆದುಕೊಂಡಿದ್ದರೂ, ತದನಂತರ ಗೌತಮ್‌ ಗಂಭೀರ್‌ ಹಾಗೂ ಮಹೇಂದ್ರ ಸಿಂಗ್‌ ಧೋನಿ ತಂಡವನ್ನ ಗೆಲುವಿನ ದಢ ಸೇರಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು.
ಆದರೆ, ಆರಂಭಿಕರಾಗಿ ಕಣಕ್ಕಿಳಿದಿದ್ದ ಸೆಹ್ವಾಗ್‌ ಔಟಾಗುತ್ತಿದ್ದಂತೆ ವಿರಾಟ್‌‌ ಕೊಹ್ಲಿ ಕಣಕ್ಕಿಳಿದಿದ್ದರು. ಈ ವೇಳೆ ಡ್ರೆಸ್ಸಿಂಗ್‌ ರೂಂನಲ್ಲಿದ್ದ ಸಚಿನ್‌ ಹೊಸ ಪ್ಲಾನ್‌ ಮಾಡಿದ್ದರು. ಒಂದು ವೇಳೆ ರೈಟ್‌‌‌ ಹ್ಯಾಡ್‌ ಬ್ಯಾಟ್ಸ್‌‌ಮನ್‌ ಔಟಾದರೆ, ರೈಟ್‌ ಹ್ಯಾಡ್‌ ಬ್ಯಾಟ್ಸ್‌ಮನ್‌ ಅಥವಾ ಲೆಫ್ಟ್‌‌ ಹ್ಯಾಡ್‌ ಬ್ಯಾಟ್ಸ್‌ಮನ್‌ ವಿಕೆಟ್‌ ಬಿದ್ದರೆ ಲೆಫ್ಟ್‌ ಹ್ಯಾಡ್‌ ಬ್ಯಾಟ್ಸ್‌‌ಮನ್‌ ಮೈದಾನಕ್ಕಿಳಿಯುವುದು ಎಂದು. ಅದೇ ರೀತಿ ರೈಟ್‌‌‌ ಹ್ಯಾಡ್‌ ಬ್ಯಾಟ್ಸ್‌‌ಮನ್‌ ವಿರಾಟ್‌‌ ಕೊಹ್ಲಿ ಔಟಾಗುತ್ತಿದ್ದಂತೆ ಕ್ಯಾಪ್ಟನ್‌ ಮಹೇಂದ್ರ ಸಿಂಗ್‌ ಧೋನಿ ಮೈದಾನಕ್ಕಿಳಿದಿದ್ದರು.
ಬರೋಬ್ಬರಿ 97ರನ್‌ಗಳಿಕೆ ಮಾಡಿದ್ದ ಧೋನಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವುದರ ಜತೆಗೆ ಟೀಂ ಇಂಡಿಯಾ 28 ವರ್ಷಗಳ ಕನಸು ನನಸು ಮಾಡಿಸಿದ್ದರು. ಈಗಷ್ಟೇ ವಿರೇಂದ್ರ ಸೆಹ್ವಾಗ್‌ ಈ ರಹಸ್ಯ ಹೊರಹಾಕಿದ್ದಾರೆ. /// Kannada Sports News –