ಏಷ್ಯಾ ಕಪ್ ಗೆದ್ದ ಬಾಂಗ್ಲಾದೇಶ

Kannada News (itskannada) Sports – ಕೌಲಲಾಂಪುರ್ : ಮಹಿಳೆಯರ ಏಷ್ಯಾಕಪ್ ಟಿ-20 ಫೈನಲ್ ಪಂದ್ಯದಲ್ಲಿ ಭಾರತ ಮಹಿಳಾ ತಂಡದ ವಿರುದ್ಧ ಬಾಂಗ್ಲಾದೇಶ ಮಹಿಳಾ ತಂಡ ಜಯ ಗಳಿಸಿದೆ.

ಮೊದಲು ಬ್ಯಾಟ್ ಮಾಡಿದ ಭಾರತ, ಹರ್ಮನ್ ಪ್ರೀತ್ ಕೌರ್(56) ಗಳಿಸಿದ ಅರ್ಧಶತಕದ ನೆರವಿನಿಂದ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 112 ರನ್ ಗಳಿಸಿತು.
ತದನಂತರ ಚೇಸ್ ಮಾಡಲು ಬಂದ ಬಾಂಗ್ಲಾದೇಶ ತಂಡ ನಿಧಾನಗತಿಯಲ್ಲಿ ಆರಂಭ ಪಡೆದರೂ  ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಗಳಿಂದ ಉತ್ತಮ ಪ್ರದರ್ಶನ ನೀಡಿದ ಪರಿಣಾಮ ಅಂತಿಮವಾಗಿ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 113 ರನ್ ಗಳಿಸಿ 3 ವಿಕೆಟ್ ಗಳ ಜಯ ಸಾಧಿಸುವ ಮೂಲಕ ಬಾಂಗ್ಲಾದೇಶ ತಂಡ ಮೊದಲ ಬಾರಿಗೆ ಟಿ-20 ಏಷ್ಯಾ ಕಪ್ ಅನ್ನು ತನ್ನದಾಗಿಸಿಕೊಂಡಿತು.