ಬಚ್ಚಾ ಎಂದ ತಿಪ್ಪೆಸ್ವಾಮಿ-ಟಾಂಗ್ ನೀಡಿದ ಯಶ್

20

Film News (itskannada)ಸ್ಯಾಂಡಲ್ ವುಡ್ ನ್ಯೂಸ್ :  ಬಚ್ಚಾ ಎಂದ ತಿಪ್ಪೆಸ್ವಾಮಿ-ಟಾಂಗ್ ನೀಡಿದ ಯಶ್ : ರಾಜ್ಯ ವಿಧಾನ ಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಎಲ್ಲಾ ಕಡೆ ಚುನಾವಣಾ ಕಾವು ಜೋರಾಗಿದೆ. ಈ ನಡುವೆ ಮೊಳಕಾಲ್ಮೂರಿನಲ್ಲಿ ಶ್ರೀರಾಮುಲು ಪರವಾಗಿ ಪ್ರಚಾರ ಮಾಡಿದ ರಾಕಿಂಗ್ ಸ್ಟಾರ್ ಯಶ್ ಮತ್ತು ಕಿಚ್ಚ ಸುದೀಪ್ ಅವರನ್ನು ಬಚ್ಚಾ ಎಂದು ಕರೆದಿದ್ದ ತಿಪ್ಪೆಸ್ವಾಮಿ ಅವರಿಗೆ ಯಶ್ ಖಡಕ್ ಟಾಂಗ್ ನೀಡಿದ್ದಾರೆ.

ಬಚ್ಚಾ ಎಂದ ತಿಪ್ಪೆಸ್ವಾಮಿ-ಟಾಂಗ್ ನೀಡಿದ ಯಶ್

ಈ ಬಗ್ಗೆ ಮಾತನಾಡಿದ ಯಶ್‘ ರಾಜಕೀಯ ಒಂದು ಗೇಮ್. ಅದು ನಿಜ ಇರಬೇಕು. ಅವರ ವಯಸ್ಸೇನು, ಅವರು ತುಂಬಾ ಹಿರಿಯರು, ಅವರ ಮುಂದೆ ನಾನು ಬಚ್ಚಾನೆ. ಅದನ್ನ ಜನ ಡಿಸೈಡ್ ಮಾಡುತ್ತಾರೆ’ ಎಂದು ಖಡಕ್ ಉತ್ತರ ನೀಡಿದ್ದಾರೆ.

ರಾಜಕೀಯದಲ್ಲಿ ಒಬ್ಬ ಗೆಲ್ಲಬೇಕಾದರೆ ನಾಲ್ಕು ಜನ ಸೋಲಲೇಬೇಕು. ಶ್ರೀರಾಮುಲು ನನಗೆ ಪರಿಚಯ ಹೀಗಾಗಿ ಅವರ ಹಾಗೂ ನನ್ನ ಅಭಿಮಾನಿಗಳಿಗೋಸ್ಕರ ಪ್ರಚಾರ ಮಾಡಿದೆ. ಜನಕ್ಕೆ ಏನೂ ಮಾಡಬೇಕು ಅನ್ನೋದು ನನ್ನ ಬುದ್ಧಿವಂತಿಕೆ, ವ್ಯವಸ್ಥೆಯನ್ನು ಬದಲಾಯಿಸುವ ನಂಬಿಕೆ ನನ್ನಲ್ಲಿಲ್ಲ.

ಶಕ್ತಿವಂತರು, ಬುದ್ಧಿವಂತರು, ಜನರ ಪ್ರೀತಿಗಳಿಸಲು ಪ್ರಯತ್ನ ಪಡುವವರಿಗೆ ನಾನು ಸಹಕಾರಿಯಾಗುತ್ತೇನೆ. ನಾನು ಪ್ರಚಾರ ಮಾಡುವ ಸ್ಥಳಗಳಲ್ಲಿ ವಿರೋಧಿಗಳಿಗೆ ಭಯ ಹುಟ್ಟಿರಬಹುದು ಎಂದು ಟಾಂಗ್ ನೀಡಿದ್ದಾರೆ.

ನಾನು ಪ್ರಚಾರ ಮಾಡುತ್ತಿರುವ ಅಭ್ಯರ್ಥಿಗಳ, ಗೆಲುವು ಸೋಲಿಗಿಂತ ಮುಖ್ಯ ಅವರು ಹೇಗೆ ಕೆಲಸ ಮಾಡುತ್ತಾರೆ ಎನ್ನುವುದು ಮುಖ್ಯ. ಎಂದಿದ್ದಾರೆ. // ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ಕ್ಲಿಕ್ಕಿಸಿ – Sandalwood News


ತ್ವರಿತ ಕನ್ನಡ ಸುದ್ದಿ ಹಾಗೂ ಕ್ಷಣಕ್ಷಣದ ಕನ್ನಡ ನ್ಯೂಸ್ ಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ

Stay Updated with itsKannada, to know more Latest Kannada News - Read Kannada News Today Updates Kannada News Online - Get Latest News Headlines Breaking News in Kannada


.
error: Content is protected !!