ಸೂರ್ಯವಂಶದ ಸೇವಂತಿ ಕಣ್ಣೀರ ಸ್ಟೋರಿ

Kannada News (itskannada) ಸ್ಯಾಂಡಲ್ ವುಡ್ : ಸೂರ್ಯವಂಶದ ಸೇವಂತಿ ಕಣ್ಣೀರ ಸ್ಟೋರಿ : ‘ನಾಗಮಂಡಲ’, ‘ಸೂರ್ಯವಂಶ’ ಅಂತಹ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದ ವಿಜಯಲಕ್ಷ್ಮಿ ಎಲ್ ಹೋದ್ರು, ಏನ್ ಮಾಡ್ತಿದ್ದಾರೆ ಎಂಬ ಕುತೂಹಲ, ಪ್ರಶ್ನೆ ಅಭಿಮಾನಿಗಳನ್ನ ಕಾಡ್ತಿತ್ತು.

ಸೂರ್ಯವಂಶದ ಸೇವಂತಿ ಕಣ್ಣೀರ ಸ್ಟೋರಿ

ಹೀಗಿರುವಾಗ, ದಿಢೀರ್ ಅಂತ ಟಿವಿ ವಾಹಿನಿಯಲ್ಲಿ ಕಾಣಿಸಿಕೊಂಡು ಸರ್ಪ್ರೈಸ್ ಕೊಟ್ಟಿದ್ದಾರೆ ಏನ್ ವಿಶೇಷ ಇರಬಹುದು ಅಂದುಕೊಂಡವರು ಇದ್ದಾರೆ.
ಹೌದು, ಇದೊಂದು ಖುಷಿಯ ವಿಚಾರವಾದ್ರು, ಇನ್ನೊಂದು ರೀತಿಯಲ್ಲಿ ಬೇಸರದ ಸಂಗತಿ. ಯಾಕಂದ್ರೆ, ಒಂದು ಕಾಲದಲ್ಲಿ ಸೂಪರ್ ಹಿಟ್ ಸಿನಿಮಾ ಕೊಟ್ಟವರು, ಸೂಪರ್ ಸ್ಟಾರ್ ನಟರ ಜೊತೆ ಅಭಿನಯಿಸಿದವರೋ ಈಗ ಅವಕಾಶಕ್ಕಾಗಿ ಕೇಳಿಕೊಳ್ಳುವ ಪರಿಸ್ಥಿತಿ ಬಂದಿದೆ ಎಂಬುದು ಶೋಚನೀಯ.
ಇನ್ನು ವಿಜಯಲಕ್ಷ್ಮಿ ಅವರಿಗೆ ಕನ್ನಡ ಆವತರಣಿಕೆಯ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಗೆ ಆಹ್ವಾನ ಇತ್ತಾದರೂ ಇವರು ಹೋಗಿರಲಿಲ್ಲ ಎಂದು ಬಿಗ್ ಬಾಸ್ ಶೋ ಆರಂಭದ ಸಮಯದಲ್ಲಿ ಇವರ ಬಗ್ಗೆ ಗಾಸಿಪ್ ಸುದ್ದಿಗಳು ಎಲ್ಲೆಡೆ ಹರಿದಾಡಿದ್ದವು //// Film News – Kannada Film News -Sandalwood News