ರವಿಮಾಮನಿಗೆ ಧ್ವನಿ ಕೊಡೋಕೆ ಮತ್ತೆ ವಾಪಸ್ ಬಂದ್ರು ಶ್ರೀನಿವಾಸ್..!

Kannada News (itskannada) ಸ್ಯಾಂಡಲ್ ವುಡ್ : ರವಿಮಾಮನಿಗೆ ಧ್ವನಿ ಕೊಡೋಕೆ ಮತ್ತೆ ವಾಪಸ್ ಬಂದ್ರು ಶ್ರೀನಿವಾಸ್..! Srinivas Prabhu return to dub for Ravichandran for Kurukshetra

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ‘ಕುರುಕ್ಷೇತ್ರ’ ಸಿನಿಮಾ ಶೂಟಿಂಗ್ ಮುಗಿಸಿ ಡಬ್ಬಿಂಗ್ ಕೆಲಸದಲ್ಲಿ ತೊಡಗಿಕೊಂಡಿದೆ. ಈ ಮಧ್ಯೆ ಆಡಿಯೋ ಬಿಡುಗಡೆ ಮಾಡಲು ಸಜ್ಜಾಗುತ್ತಿರುವ ಚಿತ್ರತಂಡ ಕ್ರೇಜಿಸ್ಟಾರ್ ಅಭಿಮಾನಿಗಳಿಗೆ ಒಂದು ಸರ್ಪ್ರೈಸ್ ನೀಡಿದೆ. ಎಲ್ಲರಿಗೂ ಗೊತ್ತಿರುವಾಗೆ, ‘ಕುರುಕ್ಷೇತ್ರ’ ಚಿತ್ರದಲ್ಲಿ ರವಿಚಂದ್ರನ್ ಕೃಷ್ಣನ ಪಾತ್ರ ನಿರ್ವಹಿಸಿದ್ದಾರೆ.

ಮೊದಲ ಬಾರಿಗೆ ಪೌರಾಣಿಕ ಚಿತ್ರದಲ್ಲಿ ನಟಿಸಿರುವ ರವಿಚಂದ್ರನ್ ಸಾಕಷ್ಟು ತಯಾರಿ ನಡೆಸಿ ಅಭಿನಯಿಸಿದ್ದಾರೆ. ಇದೀಗ, ಕೃಷ್ಣನ ಪಾತ್ರಕ್ಕೆ ಮೇಜರ್ ಸರ್ಜರಿ ಮಾಡಲು ಚಿತ್ರತಂಡ ನಿರ್ಧರಿಸಿದೆ. ಏನದು.? ಮುಂದೆ ಓದಿ….

ಕುರುಕ್ಷೇತ್ರ ಚಿತ್ರದಲ್ಲಿ ಕೃಷ್ಣನ ಪಾತ್ರಕ್ಕೆ ರವಿಚಂದ್ರನ್ ವಾಯ್ಸ್ ಇಲ್ಲ : 

ಕೃಷ್ಣನ ಪಾತ್ರದಲ್ಲಿ ಅದ್ಭುತವಾಗಿ ನಟಿಸಿರುವ ರವಿಚಂದ್ರನ್ ತನ್ನ ಪಾತ್ರಕ್ಕೆ ಡಬ್ಬಿಂಗ್ ಮಾಡುತ್ತಿಲ್ಲ ಎಂಬ ಸುದ್ದಿ ಹೊರಬಿದ್ದಿದೆ. ಅಂದ್ರೆ, ಬೇರೊಬ್ಬ ಕಲಾವಿದರಿಂದ ಈ ಪಾತ್ರಕ್ಕೆ ಕಂಠದಾನ ಮಾಡಲು ಮುಂದಾಗಿದ್ದಾರೆ. ಚಿತ್ರದಲ್ಲಿ ನಾಟಕದ ಶೈಲಿಯ ಡೈಲಾಗ್‌ಗಳಿದ್ದು ರವಿಚಂದ್ರನ್ ಪಾತ್ರವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ತೆರೆಗೆ ತರಲು ಚಿತ್ರತಂಡ ನಿರ್ಧರಿಸಿದ್ದು, ಡಬ್ಬಿಂಗ್ ಇನ್ನೊಬ್ಬ ಕಲಾವಿದರನ್ನ ಕರೆತರುವ ಯೋಜನೆಯಲ್ಲಿದೆ.

ಕುರುಕ್ಷೇತ್ರ ಚಿತ್ರಕ್ಕಾಗಿ ಮತ್ತೆ ಬರಲಿದ್ದಾರೆ ಹಳೇ ರವಿಚಂದ್ರನ್ : ರವಿಮಾಮನಿಗೆ ಧ್ವನಿ ಕೊಡೋಕೆ ಮತ್ತೆ ವಾಪಸ್ ಬಂದ್ರು ಶ್ರೀನಿವಾಸ್

ಮೂಲಗಳ ಪ್ರಕಾರ ಹಳೆ ಸಿನಿಮಾಗಳಲ್ಲಿ ರವಿಚಂದ್ರನ್ ಅವರಿಗೆ ಕಂಠದಾನ ಮಾಡುತ್ತಿದ್ದ ಹಿರಿಯ ನಟ ಶ್ರೀನಿವಾಸ ಪ್ರಭು ಅವರಿಂದ ಕೃಷ್ಣನ ಪಾತ್ರಕ್ಕೆ ಡಬ್ಬಿಂಗ್ ಮಾಡಿಸಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.

ಕ್ರೇಜಿಸ್ಟಾರ್ ಗೆ ದನಿಯಾಗಿದ್ದ ನಟ : 

ಅಂದ್ಹಾಗೆ, ರವಿಚಂದ್ರನ್ ಅವರ ಹಳೇ ಸಿನಿಮಾಗಳಿಗೆ ಕ್ರೇಜಿಸ್ಟಾರ್ ಡಬ್ ಮಾಡುತ್ತಿರಲಿಲ್ಲ. ಅವರು ಬದಲು ಶ್ರೀನಿವಾಸ ಪ್ರಭು ಅವರೇ ವಾಯ್ಸ್ ನೀಡುತ್ತಿದ್ದರು. ಹಾಗಾಗಿ, ರವಿಚಂದ್ರನ್ ಅವರ ಹೇಳೆಯ ವಾಯ್ಸ್ ಗೂ ನಿಜ ಜೀವನದಲ್ಲಿ ಮಾತನಾಡುವ ಧ್ವನಿಗೂ ಬಹಳಷ್ಟು ವ್ಯತ್ಯಾಸವಿದೆ. ಇದು ಅನೇಕ ಅಭಿಮಾನಿಗಳಿಗೆ ಗೊತ್ತಿಲ್ಲದೆ ಇರಬಹುದು.

ಕುರುಕ್ಷೇತ್ರ-ಕೃಷ್ಣನನ್ನ ಬಿಟ್ಟು ಎಲ್ಲರ ಕೆಲಸವೂ ಮುಗಿದಿದೆ

ಇತ್ತೀಚಿಗಷ್ಟೆ ನಟ ದರ್ಶನ್ ದುರ್ಯೋಧನ ಪಾತ್ರಕ್ಕೆ ಡಬ್ಬಿಂಗ್ ಮಾಡಿ ಮುಗಿಸಿದ್ದರು. ಸದ್ಯದ ಮಾಹಿತಿ ಪ್ರಕಾರ ‘ಕುರುಕ್ಷೇತ್ರ’ ಚಿತ್ರದ ಬಹುತೇಕ ಎಲ್ಲರ ಡಬ್ಬಿಂಗ್ ಕೆಲಸವೂ ಮುಗಿದಿದೆ. ಆದ್ರೆ, ರವಿಚಂದ್ರನ್ ಅವರ ಕೃಷ್ಣನ ಪಾತ್ರ ಮಾತ್ರ ಬಾಕಿ ಉಳಿದಿದೆಯಂತೆ. ಇದೀಗ, ಅದನ್ನ ಮುಗಿಸುವ ಸಲುವಾಗಿ ಸಿದ್ಧತೆ ನಡೆಸಿದ್ದಾರೆ.

ಕುರುಕ್ಷೇತ್ರ ಚಿತ್ರ – ಸದ್ಯದಲ್ಲೇ ಆಡಿಯೋ ರಿಲೀಸ್

ಮುನಿರತ್ನ ನಿರ್ಮಾಣ ಮಾಡಿರುವ ‘ಕುರುಕ್ಷೇತ್ರ’ ಚಿತ್ರಕ್ಕೆ ನಾಗಣ್ಣ ನಿರ್ದೇಶನ ಮಾಡಿದ್ದಾರೆ. ದರ್ಶನ್, ಅರ್ಜುನ ಸರ್ಜಾ, ಅಂಬರೀಶ್, ರವಿಚಂದ್ರನ್, ರವಿಶಂಕರ್, ಸ್ನೇಹಾ, ಮೇಘನಾ ರಾಜ್, ಹರಿಪ್ರಿಯಾ, ಸೋನು ಸೂದ್ ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದು, ಹರಿಕೃಷ್ಣ ಸಂಗೀತ ಸಂಯೋಜನೆ ನೀಡಿದ್ದಾರೆ.
– ರಾಜೀವ್ ಎಂ ಗೌಡ
ಈ ವಿಭಾಗದ ಎಲ್ಲಾ ಸುದ್ದಿಗಳಿಗೆ ತಪ್ಪದೇ ಕ್ಲಿಕ್ಕಿಸಿ – ಕನ್ನಡ Film News – Sandalwood News – Kannada Film News
Title : ರವಿಮಾಮನಿಗೆ ಧ್ವನಿ ಕೊಡೋಕೆ ಮತ್ತೆ ವಾಪಸ್ ಬಂದ್ರು ಶ್ರೀನಿವಾಸ್..!
Keyword : ಕುರುಕ್ಷೇತ್ರ , ಕುರುಕ್ಷೇತ್ರ ಬಿಡುಗಡೆ , ಕುರುಕ್ಷೇತ್ರ ಆಡಿಯೋ , Kurukshetra Kannada Film News Updates Kurukshetra (2018) | Kurukshetra Kannada Movie – Kurukshetra Movie: Showtimes, Review, Trailer, Posters, News – Srinivas Prabhu return to dub for Ravichandran for Kurukshetra