ಶಿವಣ್ಣನ ಅಭಿಮಾನಿಗಳಿಂದ ಸೆಟ್ಟೇರಿತು ಸಿನಿಮಾ

shivanna fans started new movie

0

Film News (itskannada) ಸ್ಯಾಂಡಲ್ ವುಡ್ : ಶಿವಣ್ಣನ ಅಭಿಮಾನಿಗಳಿಂದ ಸೆಟ್ಟೇರಿತು ಸಿನಿಮಾ : ಹೌದು , ಬೆಳಗಾವಿಯ ‘ಸಿಂಹದ ಮರಿ ಡಾ. ಶಿವರಾಜ್‍ಕುಮಾರ್’ ಅಭಿಮಾನಿಗಳ ಸಂಘದ ಮಲ್ಲೇಶ ಪೂಜಾರಿ ಮತ್ತು ಶೇಖರ ಕಾಲೇರಿ ಕೂಡಾ ಒಂದು ಚಿತ್ರವನ್ನು ನಿರ್ಮಿಸುತ್ತಿದ್ದಾರೆ ಎನ್ನುವುದು ಗಾಂಧಿನಗರದ ಬಿಸಿ ಚರ್ಚೆಯಾಗಿತ್ತು.

ಆದರೀಗ ಆ ಊಹಾಪೋಹಗಳು ನಿಜವಾಗಿದ್ದು , ಅದಾಗಲೇ ಸಿನಿಮಾದ ಮಾತುಕತೆ ಮುಗಿದಿದ್ದು ಚಿತ್ರೀಕರಣ ಬರದಿಂದ ಸಾಗುತ್ತಿದೆ ಎನ್ನಲಾಗಿದೆ. ವಿಶೇಷವೆಂದರೆ, ನಿರ್ಮಾಪಕರು ಶಿವರಾಜಕುಮಾರ್ ಅವರ ಅಭಿಮಾನಿಗಳಾಗಿದ್ದರೂ, ಈ ಸಿನಿಮಾದಲ್ಲಿ ಶಿವರಾಜ್‌ಕುಮಾರ್ ನಟಿಸುತ್ತಿಲ್ಲ.  ಆದರೂ ಹೊಸಬರ  ಪ್ರಯತ್ನಕ್ಕೆ ಡಾ.ಶಿವಣ್ಣ ಅವರು ಚಿತ್ರದ ಮೊದಲ ದೃಶ್ಯಕ್ಕೆ ಶಿವರಾಜಕುಮಾರ್ ಕ್ಲಾಪ್ ಮಾಡುವ ಮೂಲಕ ಚಿತ್ರತಂಡದವರಿಗೆ ಹಾರೈಸಿದ್ದಾರೆ ಎಂದು ವರದಿಯಾಗಿದೆ.

ಇತ್ತೀಚೆಗೆ ರಾಚೇನಹಳ್ಳಿಯ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ನಡೆದ ಸಿನಿಮಾ ಮಹೂರ್ತ ಕಾರ್ಯಕ್ರಮಕ್ಕೆ ಡಾ. ಶಿವರಾಜ್‍ಕುಮಾರ್ ಆಗಮಿಸಿ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ತಂಡಕ್ಕೆ ಶುಭ ಹಾರೈಸಿದರು. ನಾಯಕನಾಗಿ ಇದು ಅರುಣ್‍ಗೆ ಎರಡನೇಯ ಚಿತ್ರ. ಚೈತ್ರ ಈ ಸಿನಿಮಾಗೆ ನಾಯಕಿ. ಖಳನಾಯಕನಾಗಿ ಪ್ರಶಾಂತ್ ನಟಿಸುತ್ತಿದ್ದು, ಅವರೊಂದಿಗೆ ಮೈಕೋ ಮಂಜು, ಭವಾನಿ ಪ್ರಕಾಶ್, ಹರೀಶ್ ನೀನಾಸಂ, ಮಾಲತಿಶ್ರೀ ಮೈಸೂರು ತಾರಾಬಳಗದಲ್ಲಿದ್ದಾರೆ ಎಂದು ಸಿನಿಮೂಲಗಳು ತಿಳಿಸಿವೆ. //  ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ಕ್ಲಿಕ್ಕಿಸಿ – Sandalwood News