ಶನಿ ಧಾರಾವಾಹಿ ವೀಕ್ಷಕರಿಗೆ ಬಿಗ್ ಸರ್ಪ್ರೈಸ್

Kannada News (itskannada) ಕಿರುತೆರೆ ಸುದ್ದಿ : ಶನಿ ಧಾರಾವಾಹಿ ವೀಕ್ಷಕರಿಗೆ ಬಿಗ್ ಸರ್ಪ್ರೈಸ್ : ಪ್ರತಿನಿತ್ಯ ‘ಶನಿ’ ಧಾರಾವಾಹಿಯನ್ನು ವೀಕ್ಷಿಸಿ ಖುಷಿ ಪಡುತ್ತಿರುವ ವೀಕ್ಷಕರಿಗೆ ಮತ್ತೊಂದು ಸಿಹಿ ವಿಚಾರವನ್ನು ಕಲರ್ಸ್ ಕನ್ನಡ ವಾಹಿನಿ ಕೊಡುತ್ತಿದೆ. ಪೌರಾಣಿಕ ಧಾರಾವಾಹಿಗಳು ಕಡಿಮೆಯಾಗುತ್ತಿರುವ ಈ ಸಮಯದಲ್ಲಿ ‘ಶನಿ’ ಧಾರಾವಾಹಿಯನ್ನು ವೀಕ್ಷಕರಿಗೆ ಕೊಟ್ಟ ಕಲರ್ಸ್ ಕನ್ನಡ ವಾಹಿನಿ ಇದೀಗ ಮತ್ತೊಂದು ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದೆ.

‘ಶನಿ’ ಧಾರಾವಾಹಿ ಅಷ್ಟೇ ಪ್ರಭಾವ ಬೀರುವಂತಹ ಮತ್ತೊಂದು ಧಾರಾವಾಹಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲು ಸಜ್ಜಾಗುತ್ತಿದೆ. ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ‘ಮಹಾಕಾಳಿ’ ಧಾರಾವಾಹಿ ಪ್ರಸಾರವಾಗಲು ಸಜ್ಜಾಗಿದೆ. ಪ್ರತಿ ವಾರಾಂತ್ಯದಲ್ಲಿ ಒಂದು ಗಂಟೆಯಲ್ಲಿ ಪ್ರಸಾರವಾಗಲಿರುವ ‘ಮಹಾಕಾಳಿ’ ಸೀರಿಯಲ್ ಗೂ ಶನಿ

ಶನಿ ಧಾರಾವಾಹಿ ವೀಕ್ಷಕರಿಗೆ ಬಿಗ್ ಸರ್ಪ್ರೈಸ್-itskannada 2

ಧಾರಾವಾಹಿಗೂ ಸಾಕಷ್ಟು ನಂಟಿದೆ. ‘ಶನಿ’ ಧಾರಾವಾಹಿ ಇಷ್ಟಪಟ್ಟವರು ಮಹಾಕಾಳಿ ಸೀರಿಯಲ್ ಅನ್ನು ಮೆಚ್ಚಿಕೊಳ್ಳಲಿದ್ದಾರೆ. ಯಾಕೆ ಅಂತೀರಾ ಮುಂದೆ ಓದಿ…

ಶನಿ ಧಾರಾವಾಹಿಯ ಪಾತ್ರಧಾರಿಗಳು ‘ಮಹಾಕಾಳಿ’ಯಲ್ಲಿ :

‘ಮಹಾಕಾಳಿ’ ಧಾರಾವಾಹಿಯಲ್ಲಿ ಶಿವನ ಪಾತ್ರ ಧರಿಸಿರುವ ಅರ್ಜುನ್ ಈಗಾಗಲೇ ‘ಶನಿ’ ಧಾರಾವಾಹಿಯಲ್ಲಿ ಶಿವನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೆಯೇ ಇಂದ್ರ ಹಾಗೂ ಬ್ರಹ್ಮ ದೇವನ ಪಾತ್ರಧಾರಿ ಕೂಡ ‘ಶನಿ’ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಶನಿ ಹಾಗೂ ಮಹಾಕಾಳಿ ಒಂದೇ ಕಡೆಯಲ್ಲಿ ಚಿತ್ರೀಕರಣ :

‘ಮಹಾಕಾಳಿ’ಯ ಚಿತ್ರೀಕರಣ ಗುಜರಾತ್ ನ ಉಂಬರ್ಗಾವ್ ನಲ್ಲಿ ನಡೆಯುತ್ತಿದೆ. ಕಲಾವಿದರೆಲ್ಲರೂ ಸದ್ಯಕ್ಕೆ ಅಲ್ಲಿಯೇ ತಂಗಿದ್ದಾರೆ. ಧಾರಾವಾಹಿಯ ಚಿತ್ರೀಕರಣಕ್ಕೆ ಎಷ್ಟು ಸಮಯ ಬೇಕಾಗುತ್ತದೆಯೋ ಅದರಷ್ಟು ಸಮಯ ಗ್ರಾಫಿಕ್ಸ್ ಹಾ

ಗೂ ವಿ.ಎಫ್.ಎಕ್ಸ್ ಕೆಲಸಕ್ಕೆ ಬೇಕಾಗುತ್ತದೆ. ‘ಶನಿ’ ಧಾರಾವಾಹಿ ಕೂಡ ಗುಜರಾತಿನ ಉಂಬರ್ಗಾವ್ ನಲ್ಲಿಯೇ ನಡೆಯುತ್ತಿದೆ. ///