ಕನ್ನಡ ಚಿತ್ರಕ್ಕಾಗಿ ತಮಿಳು ಚಿತ್ರ ಮುಂದೂಡಿದ ಸಾನಿಕ

Film News (itskannada) ಕನ್ನಡ ಚಿತ್ರಕ್ಕಾಗಿ ತಮಿಳು ಚಿತ್ರ ಮುಂದೂಡಿದ ಸಾನಿಕ : ಸಾನಿಕಾ ಕನ್ನಡ ಮತ್ತು ತಮಿಳು ಎರಡೂ ಭಾಷೆಗಳಲ್ಲಿಯೂ ನಟಿಸುತ್ತಿದ್ದಾರೆ. ಕಳೆದ ವರ್ಷ ತಮಿಳಿನ ಅಳಗಿಯನಾಟ್ಕಳ್‌ ಎಂಬ ಸಿನಿಮಾ ಒಪ್ಪಿಕೊಂಡಿದ್ದರು. ಆ ಸಿನಿಮಾದ ಚಿತ್ರೀಕರಣ ಕುಂಟುತ್ತಾ ಸಾಗಿತ್ತು, ಈ ನಡುವೆ ಯುವ ನಿರ್ದೇಶಕ ವಿಕ್ಕಿ ಅವರ ವಿವಿಕ್ತ ಸಿನಿಮಾದ ಕಥೆ ಹೇಳಿದ್ದಾರೆ. 
ಈ ಕಥೆ ಸಾನಿಕಾಗೆ ಇಷ್ಟವಾಗಿ, ತಮಿಳಿನ ಸಿನಿಮಾ ಮುಗಿಸಿ ವಿವಿಕ್ತಗೆ ಬರುವುದಾಗಿ ಮಾತುಕೊಟ್ಟಿದ್ದರು. ಆದರೆ ತಮಿಳಿನ ಸಿನಿಮಾ ದಿನೇ ದಿನೇ ತಡವಾಗುತ್ತಲೇ ಹೋಗಿದೆ. ಹಾಗಾಗಿ ಡಿಸೆಂಬರ್‌ನಲ್ಲಿ ವಿವಿಕ್ತ ಆರಂಭವಾಗಿತ್ತು. ಇದೇ ಸಮಯದಲ್ಲೇ ಸಾನಿಕಾರ ಆರೋಗ್ಯ ಕೈಕೊಟ್ಟಿತು. ಅವರಿಗಾಗಿ ನಿರ್ಮಾಪಕ ರಾಕೇಶ್‌ ಮತ್ತು ನಿರ್ದೇಶಕರು ಎರಡು ತಿಂಗಳು ಕಾದು, ಈಗ ಚಿತ್ರೀಕರಣ ಆರಂಭಿಸಿದ್ದಾರೆ. ಇದೇ ಸಮಯದಲ್ಲಿ ಅಳಗಿಯನಾಟ್ಕಳ್‌ ಚಿತ್ರದವರು ಡೇಟ್ಸ್‌ ಕೇಳಿದ್ದಾರಂತೆ. ಆದರೆ, ಸಾನಿಕಾ ಕನ್ನಡಕ್ಕೆ ಆದ್ಯತೆ ನೀಡಿದ್ದಾರೆ.

ವಿವಿಕ್ತ ನಾಯಕಿ ಪ್ರಧಾನ ಚಿತ್ರ, ಥ್ರಿಲ್ಲರ್‌ ಸಬ್ಜೆಕ್ಟ್ ಇದ್ದು, ಪ್ರತಾಪ್‌ ನಾರಾಯಣ್‌, ಧರ್ಮ ಕೀರ್ತಿರಾಜ್‌ ನಾಯಕರಾಗಿದ್ದಾರೆ. ಸಬ್ಜೆಕ್ಟ್ ಬಹಳ ಚೆನ್ನಾಗಿದ್ದು, ಈ ಸಿನಿಮಾ ಮೇಲೆ ನನಗೆ ಹೆಚ್ಚಿನ ನಿರೀಕ್ಷೆ ಇದೆ ಎನ್ನುತ್ತಾರೆ ಸಾನಿಕಾ. //// ಸುದ್ದಿ ಮಾಹಿತಿ ಕೃಪೆ – ವಿಜಯಕರ್ನಾಟಕ //// ಈ   ವಿಭಾಗದ ಇನ್ನಷ್ಟು ಸುದ್ದಿಗಳಿಗೆ ತಪ್ಪದೇ ಕ್ಲಿಕ್ಕಿಸಿ – Sandalwood News – Kannada Film News