ಸ್ಯಾಂಡಲ್ ವುಡ್ ಗೆ ಮೋಹಕ ತಾರೆ ರಿ ಎಂಟ್ರಿ

Kannada News (itskannada) ಸ್ಯಾಂಡಲ್ ವುಡ್ : ಸ್ಯಾಂಡಲ್ ವುಡ್ ಗೆ ಮೋಹಕ ತಾರೆ ರಿ ಎಂಟ್ರಿ

ಬೆಂಗಳೂರು – ಮೊಹಕ ತಾರೆ,  ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಮರಳಿ  ಬರುತ್ತಿರುವುದು ಅಭಿಮಾನಿಗಳಿಗೆ ಸಂತಸ  ಉಂಟುಮಾಡಿದೆ.
 ಹೌದು ಕಳೆದ ಮಂಡ್ಯ ಲೋಕಸಭಾ ಉಪಚುನಾವಣೆಯಲ್ಲಿ  ಗೆಲುವು ಸಾಧಿಸಿ  ರಾಷ್ಟ್ರ ರಾಜಕಾರಣಕ್ಕೆ  ಎಂಟ್ರಿ ಕೊಟ್ಟಿದ್ದೆ ತಡಾ  ಸಿನಿಮಾ ರಂಗದ ಕಡೆ ನೋಡಲೆ ಇಲ್ಲ. ಇದರಿಂದಾಗಿ ರಮ್ಯಾ ಅವರ  ಬಣ್ಣದ ನಂಟು ಇಲ್ಲಿಗೆ ಕೊನೆ ಆಯ್ತು ಎಂದು ತಿಳಿದವರು ಹೆಚ್ಚು. ಇದರ ಬೆನ್ನಲ್ಲೇ ಅಭಿಮಾನಿಗಳಿಗೆ  ನಿರಾಸೆ ಆಗಿತ್ತು.

“ಶ್ರೀಮನ್ನಾರಾಯಣ”  ಟೀಜರ್ ಗೆ ಪುಲ್ ಫಿಧಾ ಆದ ಸ್ಯಾಂಡಲ್ ವುಡ್ ಕ್ವೀನ್ :-

ಮೊನ್ನೆ  ತಾನೆ ಕಿರಿಕ್  ಪಾರ್ಟಿ ಯ ರಕ್ಷಿತ  ಶೆಟ್ಟಿ  ತಮ್ಮ  ಹುಟ್ಟುಹಬ್ಬದ ದಿನದಂದು ಶ್ರೀಮನ್ನಾರಾಯಣ” ಚಿತ್ರದ  ಟೀಜರ್  ಬಿಡುಗಡೆ ಮಾಡಿದರು. ಚಿತ್ರದ  ಟೀಜರ್ ನೋಡಿ  ಟ್ವಿಟ್ ಮಾಡಿದ್ದಾರೆ. ಟ್ವಿಟ್ ಗೆ  ಪ್ರತಿಕ್ರಿಯಿಸಿದ ರಕ್ಷಿತ್ ಶೆಟ್ಟಿ “ನೀವು ಮತ್ತೊಮ್ಮೆ  ಸ್ಯಾಂಡಲ್ ವುಡ್ ಗೆ  ಬನ್ನಿ ಅಂತ ಕಳಿಸಿದ ಟ್ವಿಟ್ ಗೆ, ನಾನು 2019ಕ್ಕೆ ಮತ್ತೆ ಬರುವೆ  ಎಂದು ಪ್ರತಿಕ್ರಿಯಿಸುವ ಮೂಲಕ ಅಭಿಮಾನಿಗಳಿಗೆ ಖುಷಿಯ ಸಂದೇಶ ನೀಡಿದ್ದಾರೆ.    ಈಗ ಇರುವ “ದಿಲ್ ಕಾ ರಾಜ್” ಚಿತ್ರಕ್ಕೆ ಬರುತ್ತಾರೊ ಅಥವಾ ಹೊಸ ಚಿತ್ರಕ್ಕೆ ಎಂಟ್ರಿ ಕೊಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ////