ರಣರಂಗದ ಯುದ್ದಕ್ಕೆ ಸಜ್ಜಾದ ಕುರುಕ್ಷೇತ್ರ !

0 358

Kannada News (itskannada) ಸ್ಯಾಂಡಲ್ ವುಡ್ : ಕುರುಕ್ಷೇತ್ರ – ರಣರಂಗದ ಯುದ್ದಕ್ಕೆ ಸಜ್ಜಾದ ಕುರುಕ್ಷೇತ್ರ :ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯಿಸಿರುವ ಅತಿ ಹೆಚ್ಚು ವೆಚ್ಚದಲ್ಲಿ ನಿರ್ಮಿಸಿರುವ ‘ಕುರುಕ್ಷೇತ್ರ’ ಚಿತ್ರದ ಶೂಟಿಂಗ್ ಮುಕ್ತಾಯವಾಗಿದೆ. ಅತಿ ಹೆಚ್ಚು ನಾಯಕರು ಅಭಿನಯಿಸಿರುವ  ಸಿನಿಮಾ ಇದಾಗಿದ್ದು. ಇದೀಗ ಫೋಸ್ಟ್‌ ಪ್ರೊಡಕ್ಷನ್‌ ಕೆಲಸ ಭರದಿಂದ ಸಾಗಿದೆ.

ರಣರಂಗದ ಯುದ್ದಕ್ಕೆ ಸಜ್ಜಾದ ಕುರುಕ್ಷೇತ್ರ

ದರ್ಶನ ಈಗಾಗಲೇ ನಟಿಸಿದ ಸುಪ್ರಸಿದ್ಧ  ಸಂಗೊಳ್ಳಿರಾಯಣ್ಣ ಚಿತ್ರದಂತೆ ಕುರುಕ್ಷೇತ್ರ ಒಂದು ಸಮಾಜದ ಇತಿಹಾಸ ಹಿನ್ನೆಲೆಯನ್ನು  ಆದರಿಸಿದ ಚಿತ್ರ ಎನ್ನಲಾಗುತ್ತಿದೆ. ಸಂಗೊಳ್ಳಿರಾಯಣ್ಣ
ಈಗಾಗಲೇ ಭರ್ಜರಿ ಪ್ರದರ್ಶನ ಕಂಡಿರುವ ಚಿತ್ರ ಆಗಿತ್ತು. ಅದರಂತೆ ಕುರುಕ್ಷೇತ್ರ ಚಿತ್ರದ ಮೇಲೆ ಬಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
 ಕುರುಕ್ಷೇತ್ರ ರಿಲೀಸ್‌ಗೆ  ಕಾಯುತ್ತಿರುವ ದರ್ಶನ ಅಭಿಮಾನಿಗಳಿಗೆ ಈಗ ಸಿಹಿ ಸುದ್ದಿ ಸಿಕ್ಕಿರುವ ಅಭಿಮಾನಿಗಳಿಗೆ  ದರ್ಶನ್‌, ತಮ್ಮ ಪಾತ್ರದ  ಕೆಲಸವನ್ನು  ಮುಗಿಸಿದ್ದಾರೆ. ಈ ವಿಚಾರವನ್ನು ದರ್ಶನ್‌ ಅವರೇ ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ.
ಚಿತ್ರ ಒಂದು ವರ್ಷದ ಹಿಂದೆ ಸೆಟ್ಟೇರಿತ್ತು ಆದರೆ ನಿರ್ಮಾಪಕ ಮುನಿರತ್ನ ಚುನಾವಣೆಯಲ್ಲಿ ಬ್ಯುಸಿಯಾಗಿದ್ದರು. ಅದರ ಸಲುವಾಗಿ ಸ್ವಲ್ಪ ಲೇಟಾಗಿದೆ.
ಕುರುಕ್ಷೇತ್ರ ನಾಯಕ ನಟರ ಬಳಗ: 
ಕುರುಕ್ಷೇತ್ರ ಚಿತ್ರದಲ್ಲಿ ತಾರ ಬಳಗವೇ ಇದೆ. ನಟ ದರ್ಶನ್‌ , ರವಿಚಂದ್ರನ್, ರೆಬಲ್ ಸ್ಟಾರ್ ಅಂಬರೀಶ್,  ಅರ್ಜುನ  ಸರ್ಜಾ, ನಿಖಿಲ್ ಕುಮಾರಸ್ವಾಮಿ, ಮೇಘನಾ ರಾಜ್, ಸ್ನೇಹಾ  ಸೇರಿದಂತೆ ಇನ್ನಿತರರು ಈ ಚಿತ್ರದಲ್ಲಿ ಒಟ್ಟಾರೆ ಕಾಣಬಹುದಾಗಿದೆ.

ಅರ್ಧ ಶತಕ ಬಾರಿಸಲಿರುವ ಕುರುಕ್ಷೇತ್ರ ದರ್ಶನ್‌

ದರ್ಶನ್‌ ಒಂದೆಡೆ ಕುರುಕ್ಷೇತ್ರ ಚಿತ್ರದಲ್ಲಿ ನಟಿಸುತ್ತಿರುವುದು ಒಂದೆಡೆ ಖುಷಿಯಾದರೆ ಇನ್ನೊಂದೆಡೆ ಅವರು ತಮ್ಮ ೫೦ ನೇ ಚಿತ್ರ ಇದಾಗಿದ್ದು ಅವರಿಗೆ ಡಬಲ್ ಖುಷಿಯಾಗಿದ್ದು, ಬಿಡುಗಡೆಗಾಗಿ ದಚ್ಚು ಫ್ಯಾನ್ಸ್ ಸಂಭ್ರಮದಿಂದ ಕಾಯುತ್ತಿದ್ದಾರೆ. ಈ ಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತ ಸಂಯೋಜಿಸಿದ್ದು ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ. ಶಾಸಕ ಮುನಿರತ್ನ ಚಿತ್ರಕ್ಕೆ ಬಂಡವಾಳ ಹೂಡಿದಾರೆ. ಈಗಾಗಲೇ ಸಿನಿ ರಂಗದಲ್ಲಿ ಸಂಚಲನ ಮೂಡಿಸಲು ತಯಾರಾಗಿರುವ ಕುರುಕ್ಷೇತ್ರ ತೆರೆ ಕಾಣಬೇಕಾಗಿದೆ.
ಕುರುಕ್ಷೇತ್ರ ಚಿತ್ರದ ನನ್ನ  ಭಾಗ  ಸಂಪೂರ್ಣವಾಗಿ ಮುಗಿದಿದೆ. ಇನ್ನೇನು ಚಿತ್ರದ ಮುಂದಿನ ಚಟುವಟಿಕೆಗಳು ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಇನ್ನು ಆಲ್‌ಮೋಸ್ಟ್‌ ಆಲ್‌ ಕುರುಕ್ಷೇತ್ರ ಚಿತ್ರದ ಕೆಲಸ ಮುಕ್ತಾಯದ ಹಂತಕ್ಕೆ ಬಂದಂತಾಗಿದೆ. ಶೀಘ್ರದಲ್ಲಿಯೇ ಅದು ತೆರೆ ಮೇಲೆ ಬರುವುದು ಗ್ಯಾರಂಟಿ. ಎಂದು ಟ್ವೀಟರ್ ಅಕೌಂಟ್ ನಲ್ಲಿ ಹಂಚಿಕೊಂಡಿದ್ದಾರೆ.  //// Kannada Film NewsSandalwood News

ಕುರುಕ್ಷೇತ್ರ ಕನ್ನಡ ಸಿನಿಮಾ ,  ಕುರುಕ್ಷೇತ್ರ ಫಿಲಂ  , ಕುರುಕ್ಷೇತ್ರ ಬಿಡುಗಡೆ , ದರ್ಶನ್‌ ಕುರುಕ್ಷೇತ್ರ , Kurukshetra Teaser | Kannada Movie | Challenging Star Darshan , Kurukshetra Kannada Movie News , Kurukshetra Release Date ,  Kurukshetra New Film Kananda, Kurukshetra review Kurukshetra: Latest News, Videos and Photos of Kurukshetra

Stay Updated with itsKannada, to know more Latest Kannada News – Read Kannada News Updates Kannada News Online – Get Latest News Headlines Breaking News in Kannada

ತ್ವರಿತ ಕನ್ನಡ ಸುದ್ದಿ ಹಾಗೂ ಕ್ಷಣಕ್ಷಣದ ಕನ್ನಡ ನ್ಯೂಸ್ ಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ – its-Kannada

error: Content is protected !!