ದಿ ವಿಲನ್ ಚಿತ್ರದ ನಾಯಕಿಗೆ-ರಕ್ಷಿತಾ ಪ್ರೇಮ್ ಡಬ್ಬಿಂಗ್

Rakshitha Prem Voice Dubbing to The Villain

Film News (itskannada) ದಿ ವಿಲನ್ ಚಿತ್ರದ ನಾಯಕಿಗೆ-ರಕ್ಷಿತಾ ಪ್ರೇಮ್ ಡಬ್ಬಿಂಗ್ : ತಮ್ಮ ಪಾತ್ರಗಳ ಮೂಲಕ ಲಕ್ಷಾಂತರ ಅಭಿಮಾನಿಗಳ ಹೃದಯ ಗೆದ್ದಿರುವ ರಕ್ಷಿತಾ ಪ್ರೇಮ್ ತನ್ನ ಪತಿ ಪ್ರೇಮ್ ನಿರ್ದೇಶನದ ದಿ ವಿಲನ್ ಚಿತ್ರದ ನಾಯಕಿ ಅಮಿ ಜಾಕ್ಸನ್‍ಗೆ ಡಬ್ಬಿಂಗ್ ಹೇಳಲು ಹೊರಟಿದ್ದಾರೆ.
ಇದೇ ಮೊಟ್ಟ ಮೊದಲ ಸಲ ಪತಿಯ ಜತೆಗಿನ ಸಿನಿಮಾ ಒಂದಕ್ಕೆ ಕೈ ಜೋಡಿಸಿರುವ ರಕ್ಷಿತಾ ಪ್ರೇಮ್ ಗೆ ಇದು ಹೊಸ ಸವಾಲು ಎನ್ನಬಹುದಾಗಿದೆ. ದಿ ವಿಲನ್’ ಚಿತ್ರದಲ್ಲಿ ಆಮಿ ಜಾಕ್ಸನ್ ನಾಯಕಿ ಆಗಿದ್ದು ಅದರ ಜೊತೆಗೆ ಚಿತ್ರದಲ್ಲಿ ಇನ್ನು ಆರು ನಾಯಕಿಯರು ಇರುತ್ತಾರಂತೆ. ಚಿತ್ರದ ಸ್ಪೆಷಲ್ ಹಾಡಿನಲ್ಲಿ ಆರು ನಟಿಯರು ಹೆಜ್ಜೆ ಹಾಕಲಿದ್ದಾರೆ ಎನ್ನುವುದು ಇನ್ನೊಂದು ವಿಶೇಷವಾದರೆ, ಕನ್ನಡದ ಆರು ನಾಯಕಿಯರನ್ನು ಒಂದು ಹಾಡಿನಲ್ಲಿ ಪ್ರೇಮ್ ಕುಣಿಸಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. //// ಈ ವಿಭಾಗದ ಇನ್ನಷ್ಟು ಸುದ್ದಿಗಳಿಗಾಗಿ ತಪ್ಪದೇ ಕ್ಲಿಕ್ಕಿಸಿ- Kannada Film News – Sandalwood News