ರಾಜ ಲವ್ಸ್ ರಾಧೆ ಬಿಡುಗಡೆಗೆ ಸಿದ್ದ

Raja Loves Radhe releasing soon

30

Film News (itskannada) ಸ್ಯಾಂಡಲ್ ವುಡ್ ನ್ಯೂಸ್ :ರಾಜ ಲವ್ಸ್ ರಾಧೆ ಬಿಡುಗಡೆಗೆ ಸಿದ್ದ-Raja Loves Radhe releasing soon- ಅಂದು ಕೊಂಡಂತೆಯೇ ಆಗಿದ್ದರೆ ರಾಜ ಲವ್ಸ್ ರಾಧೆ ಚಿತ್ರ 2 ತಿಂಗಳ ಹಿಂದೆಯೇ ರಿಲೀಸ್ ಆಗಬೇಕಾಗಿತ್ತು. ವಿಧಾನಸಭಾ ಚುನಾವಣೆಗಳು ಬಂದ ಹಿನ್ನೆಲೆಯಲ್ಲಿ ಮುಂದಕ್ಕೆ ಹೋಗಿ ಇದೀಗ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಇದೇ ತಿಂಗಳ 18 ರಂದು ರಾಜ ಲವ್ಸ್ ರಾಧೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ರಾಜ ಲವ್ಸ್ ರಾಧೆ ಬಿಡುಗಡೆಗೆ ಸಿದ್ದ

ಈ ಸಂಭಾಷಣೆ ನಂತರ ರಾಜಶೇಖರ್‌ರವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ೨ನೇ ಚಿತ್ರವಿದು. ಕೋಟಿಗೊಂದು ಲವ್ ಸ್ಟೋರಿ ಚಿತ್ರಕ್ಕೆ ಬಂಡವಾಳ ಹಾಕಿದ್ದ ನಿರ್ಮಾಪಕ ಹೆಚ್.ಎಲ್.ರಾಜ್ ತಮ್ಮ ೨ನೇ ಪ್ರಯತ್ನವಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಬಹಳ ದಿನಗಳ ನಂತರ ವಿಜಯರಾಘವೇಂದ್ರ ಈ ಚಿತ್ರದ ಮೂಲಕ ತೆರೆಯ ಮೇಲೆ ಬರುತ್ತಿದ್ದಾರೆ.

ಪಂಟ ಚಿತ್ರದ ನಾಯಕಿ ರಿತೀಕ್ಷಾ ಈ ಚಿತ್ರದಲ್ಲಿ ರಾಧಿಕಾ ಪ್ರೀತಿ ಆಗಿ ತನ್ನ ಹೆಸರನ್ನು ಬದಲಾಯಿಸಿಕೊಂಡು ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಈ ಚಿತ್ರದ ಬಿಡುಗಡೆ ಪೂರ್ವ ಪತ್ತಿಕಾಗೋಷ್ಠಿ ಮೊನ್ನೆ ನಡೆಯಿತು. ಚಿತ್ರತಂಡದ ಎಲ್ಲಾ ಸದಸ್ಯರು ಹಾಜರಿದ್ದು ಚಿತ್ರದ ವಿಶೇಷತೆಗಳ ಬಗ್ಗೆ ಮಾತನಾಡಿದರು. /// ಈ ವಿಭಾಗದ ಇನ್ನಷ್ಟು ಸುದ್ದಿಗಳಿಗಾಗಿ ಕ್ಲಿಕ್ಕಿಸಿ – Sandalwood News


ತ್ವರಿತ ಕನ್ನಡ ಸುದ್ದಿ ಹಾಗೂ ಕ್ಷಣಕ್ಷಣದ ಕನ್ನಡ ನ್ಯೂಸ್ ಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ

Stay Updated with itsKannada, to know more Latest Kannada News - Read Kannada News Today Updates Kannada News Online - Get Latest News Headlines Breaking News in Kannada


.
error: Content is protected !!