ಪುನೀತ್ ರಾಜ್‍ಕುಮಾರ್ ಕಾರು ಅಪಘಾತ-ಅಪಾಯದಿಂದ ಅಪ್ಪು ಪಾರು

Kannada News (itskannada) ಸ್ಯಾಂಡಲ್ ವುಡ್ : ಪುನೀತ್ ರಾಜ್‍ಕುಮಾರ್ ಕಾರು ಅಪಘಾತ-ಅಪಾಯದಿಂದ ಅಪ್ಪು ಪಾರು : ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಧ್ಯ ತಮ್ಮ ಮುಂಬರುವ ಚಿತ್ರ ಪವನ್ ಒಡೆಯರ್ ನಿರ್ದೇಶನದ ನಟ ಸಾರ್ವಭೌಮ ಶೂಟಿಂಗ್ ನಲ್ಲಿ ತೊಡಗಿದ್ದಾರೆ. ಚಿತ್ರಿಕರಣವು ಅಂದ್ರಾ , ಹೈದರಾಬಾದ್ ಸೇರಿದಂತೆ ಕರ್ನಾಟಕದ ಹಲವೆಡೆ ಬಿರಿಸಿನ ಚಿತ್ರೀಕರಣ ಸಾಗಿದೆ.

ಪುನೀತ್ ರಾಜ್‍ಕುಮಾರ್ ಕಾರು ಅಪಘಾತ-ಅಪಾಯದಿಂದ ಅಪ್ಪು ಪಾರು :

ಪವರಸ್ಟಾರ್ ಪುನಿತ್ ರಾಜಕುಮಾರ ಚಲಿಸುತ್ತಿದ್ದ ಕಾರು ನಿನ್ನೆ ಅಪಘಾತವಾಗಿದೆ ಎಂಬ ಸುದ್ದಿಯಾಗುತ್ತಿದ್ದಂತೆ ಅಭಿಮಾನಿಗಳು ಹೆದರಿದ್ದಾರೆ. ನಟಸಾರ್ವಭೌಮದ ಚಿತ್ರದ ಶೂಟಿಂಗ್ ಮುಗಿಸಿಕೊಂಡು ಬಳ್ಳಾರಿಯಿಂದ ಬೆಂಗಳೂರಿಗೆ  ಬರುವ ವೇಳೆ ಪುನೀತ್ ಚಲಿಸುತ್ತಿರುವ ಕಾರಿಗೆ ಅನಂತಪುರ ಬಳಿ ಅಪಘಾತವಾಗಿದೆ. ಇದರಿಂದ ಯಾರಿಗೂ ಎನೂ ಆಗಿಲ್ಲ ಎಂಬ ಸುದ್ದಿ ಬರುತ್ತಿದ್ದಂತೆ ಅಭಿಮಾನಿಗಳು ನಿರಾಳರಾಗಿದ್ದಾರೆ.

ಹೌದು, ಪುನೀತ್ ರಾಜ್‍ಕುಮಾರ್ ಕಾರು ಅಪಘಾತ-ಅಪಾಯದಿಂದ ಅಪ್ಪು ಪಾರು ಆಗಿರುವ ಘಟನೆ ನಡೆದಿದ್ದು ಬಳ್ಳಾರಿಯಲ್ಲಿ, ನೆನ್ನೆ ಬಳ್ಳಾರಿ ಜಿಲ್ಲೆಯಲ್ಲಿ ಪುನೀತ್ ಅಭಿನಯದ ಕೆಲ ದೃಶ್ಯಗಳನ್ನು ಚಿತ್ರೀಕರಿಸಲಾಯಿತು , ಶೂಟಿಂಗ್ ಮುಗಿಸಿಕೊಂಡು ಬೆಂಗಳೂರಿಗೆ ಮರಳುವ ವೇಳೆ ಅವರ ಕಾರಿನ ಟೈರ್ ಸಿಡಿದಿದೆ, ಆದರೆ ಯಾವುದೇ ಅಪಾಯ ಸಂಭವಿಸಲಿಲ್ಲ, ಘಟನೆಯು ಕಾಡ್ಗಿಚ್ಚಿನಂತೆ ಹಬ್ಬುತ್ತಿದ್ದಂತೆ, ಪುನೀತ್ ಅಭಿಮಾನಿಗಳು ಹಾಗೂ ಅವರ ಕುಟುಂಬದವರು ಗಾಬರಿಗೊಂಡರು , ಆದರೆ ಘಟನೆ ಬಗ್ಗೆ ತಮ್ಮ ಫೇಸ್ ಬುಕ್ ನಲ್ಲಿ ಮಾಹಿತಿ ನೀಡಿದ ಅವರು , ಯಾವುದೇ ಗಾಸಿಪ್ ಗಳಿಗೆ ಕಿವಿಗೊಡಬೇಡಿ , ನಾನು ಆರಾಮಾಗಿದ್ದೇನೆ , ನಿಮ್ಮ ಪ್ರೀತಿಗೆ ಧನ್ಯವಾದ ಎಂದಿದ್ದಾರೆ. ಅಲ್ಲದೆ ಇದೊಂದು ಚಿಕ್ಕ ಅಪಘಾತ ಯಾರೂ ಗಾಬರಿಯಾಗುವುದು ಬೇಡ , ಯಾವುದೇ ಊಹಾಪೋಹಗಳಿಗೆ ಕಿವಿಗೊಡಬೇಡಿ ಎಂದಿದ್ದಾರೆ.

ಪುನೀತ್ ರಾಜ್‍ಕುಮಾರ್ ಕಾರು ಅಪಘಾತ-ಅಪಾಯದಿಂದ ಅಪ್ಪು ಪಾರು – ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ ಅಪ್ಪು

Aaaramagi iddini not to worry, thank you for all your concerns….

Posted by Puneeth Rajkumar on Thursday, June 7, 2018

ಬಳ್ಳಾರಿಯಲ್ಲಿ ಪವನ್ ಒಡೆಯರ್ ನಿರ್ದೇಶನದ ‘ನಟ ಸಾರ್ವಭೌಮ’ ಚಿತ್ರದ ಚಿತ್ರೀಕರಣ ಮುಗಿಸಿಕೊಂಡು ತುಮಕೂರು ಮಾರ್ಗದಲ್ಲಿ ಟ್ರಾಫಿಕ್ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಆಂಧ್ರ ಪ್ರದೇಶದ ಅನಂತಪುರ ಮಾರ್ಗವಾಗಿ ತನ್ನ ರೇಂಜ್ ರೋವರ್ ಕಾರಿನಲ್ಲಿ ಬೆಂಗಳೂರಿಗೆ ವಾಪಸಾಗುತ್ತಿದ್ದಾಗ ಅನಂತಪುರ ಸಮೀಪ ಮೂರು ರಸ್ತೆ ಸೇರುವಲ್ಲಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಢಿಕ್ಕಿಯಾಗಿದೆ ಎನ್ನಲಾಗಿದೆ. ಘಟನೆಯಲ್ಲಿ ಪುನೀತ್ ರಾಜ್‍ಕುಮಾರ್ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಬಳಿಕ ತನ್ನ ಸ್ನೇಹಿತನ ಕಾರಿನಲ್ಲಿ ಪ್ರಯಾಣಿಸಿದರು ಎಂದು ತಿಳಿದುಬಂದಿದೆ.

ಏನೇ ಆಗಲಿ ಇದೊಂದು ಚಿಕ್ಕ ಅಪಘಾತವೆಂದು ಸ್ವತಹ ಪುನೀತ್ ರಾಜ್ ಕುಮಾರ್ ರವರೆ ಹೇಳಿದ್ದರು , ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಅತಿ ಹೆಚ್ಚು ಪ್ರಚಾರ ನೀಡಿ , ಅಭಿಮಾನಿಗಳು ಗಾಬರಿ ಪಡಿಸಲು ಕೆಲವರು ಮುಂದಾಗಿದ್ದು , ತಮ್ಮ ಅಭಿಮಾನಿಗಳು ಇವನ್ನೆಲ್ಲಾ ನಂಬದಿರಲು ಪುನೀತ್ ಮನವಿ ಮಾಡಿದ್ದಾರೆ. /////

ಈ ವಿಭಾಗದ ಎಲ್ಲಾ ಸುದ್ದಿಗಳಿಗೆ ತಪ್ಪದೇ ಕ್ಲಿಕ್ಕಿಸಿ – Kannada Film News – Sandalwood – Sandalwood News.

WebTitle : ಪುನೀತ್ ರಾಜ್‍ಕುಮಾರ್ ಕಾರು ಅಪಘಾತ-ಅಪಾಯದಿಂದ ಅಪ್ಪು ಪಾರು

Keyword : ಕಾರು ಅಪಘಾತದಿಂದ ನಟ ಪುನೀತ್​ ರಾಜಕುಮಾರ್​ ಪಾರು , puneeth rajkumar car accident , ಪುನೀತ್ ರಾಜ್ ಕುಮಾರ್ ಕಾರಿಗೆ ಅಪಘಾತ , Puneet Rajkumar Met With Accident, Actor And Driver Safe ,Kannada film hero Puneeth Rajkumar escapes Car Accident , ಕಾರು ಅಪಘಾತದಿಂದ ನಟ ಪುನೀತ್​ ರಾಜಕುಮಾರ್​ ಪಾರು , ಪುನೀತ್ ರಾಜ್ ಕುಮಾರ್ ಆಕ್ಸಿಡೆಂಟ್ ನ್ಯೂಸ್ .Kannada film hero Puneeth Rajkumar escaped Car Accident.