ಗ್ರಾಮೀಣ ಪ್ರತಿಭೆಗೆ ಒಲಿದ ಅವಕಾಶ, ದಶರಥ ಹಾಡಿಗೆ ದನಿಯಾದ ‘ದೊಡ್ಡಪ್ಪ’

Opportunity For the Belgaum rural talent, Doddappa Singing in Dasharatha Kannada Movie

0

ಗ್ರಾಮೀಣ ಪ್ರತಿಭೆಗೆ ಒಲಿದ ಅವಕಾಶ, ದಶರಥ ಹಾಡಿಗೆ ದನಿಯಾದ ಕನ್ನಡ ಕೋಗಿಲೆ ಖ್ಯಾತಿಯ ‘ದೊಡ್ಡಪ್ಪ’

Opportunity For the Belgaum rural talent, Doddappa Singing in Dasharatha Kannada Movie

ಸ್ಯಾಂಡಲ್ ವುಡ್  : ರಿಯಾಲಿಟಿ ಶೋಗಳ ಅಬ್ಬರದ ನಡುವೆ ೨೦೧೮ ರ ಕನ್ನಡ ಕೋಗಿಲೆ ರಿಯಾಲಿಟಿ ಶೋ ತುಂಬ ದೊಡ್ಡ ಸದ್ದು ಮಾಡಿತ್ತು. ಇದರಲ್ಲಿ ಕನ್ನಡ ಕೋಗಿಲೆ ಶೋ ಕೂಡ ಒಂದು.

ಮೂರೆ ಮೂರು ಪೆಗ್ ಹಾಡಿನ ಖ್ಯಾತಿಯ ಹಾಗೂ ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿ, ಸಂಗೀತ ನಿರ್ದೇಶಕ ಸಾಧುಕೋಕಿಲ ಹಾಗೂ ಖ್ಯಾತ ಗಾಯಕಿ ಅರ್ಚನಾ ಇವರು ನಿರ್ಣಾಯಕರಾಗಿದ್ದ ಈ ಶೋನಲ್ಲಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಪಟ್ಟಿಹಾಳ ಗ್ರಾಮದ ಅಚ್ಚ ಗ್ರಾಮೀಣ ಪ್ರತಿಭೆ ದೊಡ್ಡಪ್ಪ ಮಾದರ ವಿಜೇತರಾಗಿದ್ದರು.

ದೊಡ್ಡಪ್ಪ ಆಕೇಸ್ಟ್ರಾಗಳಲ್ಲಿ ಹಾಡುತ್ತ ತೀರ ಬಡತನದಲ್ಲಿ ಬೆಳೆದ ಪ್ರತಿಭೆ. ರಿಯಾಲಿಟಿ ಶೋಗೆ ಆಯ್ಕೆಯಾದಾಗಲೇ ಬೆಳಗಾವಿ ಜಿಲ್ಲೆಯನ್ನು ಬೆಂಗಳೂರು ಮಟ್ಟದಲ್ಲಿ ಪ್ರತಿನಿಧಿಸಿದ ಹೆಮ್ಮೆ ಇವರದು. ಗ್ರಾಮೀಣ ಪ್ರತಿಭೆಗೆ ಒಲಿದ ಅವಕಾಶ, ದಶರಥ ಹಾಡಿಗೆ ದನಿಯಾದ 'ದೊಡ್ಡಪ್ಪ'

ಇವರ ಗಾಯನ ಶ್ರಮಕ್ಕೆ ಪ್ರತಿಭೆಗೆ ಮನಸೋತು ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಅವರು ಇವರಿಗೆ ತಮ್ಮ ಸಂಗೀತ ನಿರ್ದೇಶನದಲ್ಲಿ ಒಂದು ಹಾಡು ಹಾಡಿಸುವ ಭರವಸೆ ನೀಡಿದ್ದರು.

ಅದರಂತೆ ವಿ.ರವಿಚಂದ್ರನ್ ನಟಿಸಿರುವ ಎಂ.ಎಸ್.ರಮೇಶ್ ನಿರ್ದೇಶನದ ‘ದಶರಥ‘ ಚಿತ್ರದಲ್ಲಿನ ‘ಕರಿ ಕೋಟು ಹಾಕೋರೆಲ್ಲ ಕೇಸು ಗೆಲ್ಲೋದಿಲ್ಲ’ ಎಂಬ ಹಾಡಿಗೆ ದನಿಯಾಗುವ ಮೂಲಕ ಚಿತ್ರರಂಗದಲ್ಲಿ ಹಿನ್ನೆಲೆ ಗಾಯಕರಾಗಿ ಪದಾರ್ಪಣೆ ಮಾಡಿದ್ದಾರೆ.////

WebTitle : ಗ್ರಾಮೀಣ ಪ್ರತಿಭೆಗೆ ಒಲಿದ ಅವಕಾಶ, ದಶರಥ ಹಾಡಿಗೆ ದನಿಯಾದ ‘ದೊಡ್ಡಪ್ಪ’ – Opportunity For the Belgaum rural talent, Doddappa Singing in Dasharatha Kannada Movie

>>> ಕ್ಲಿಕ್ಕಿಸಿ ಕನ್ನಡ ನ್ಯೂಸ್ : Kannada Film NewsSandalwood News