ಕಿರಿಕ್ ಶೆಟ್ಟಿ ಈಗ ಶ್ರೀಮನ್ನಾರಾಯಣ-ಟೀಸರ್ ನಲ್ಲೇ ಸುದ್ದು . . .

ರಿಕ್ ಹುಡುಗನ್ ಡಿಫರೆಂಟ್ ಗೆಟಫ್ ಪ್ರೇಕ್ಷಕರು ಫಿದಾ

Kannada News (itskannada) ಸ್ಯಾಂಡಲ್ ವುಡ್ : ಕಿರಿಕ್ ಶೆಟ್ಟಿ ಈಗ ಶ್ರೀಮನ್ನಾರಾಯಣ-ಟೀಸರ್ ನಲ್ಲೇ ಸುದ್ದು – ರಿಕ್ ಹುಡುಗನ್ ಡಿಫರೆಂಟ್ ಗೆಟಫ್ ಪ್ರೇಕ್ಷಕರು ಫಿದಾ – ಕಿರಿಕ್ ಪಾರ್ಟಿ ಚಿತ್ರ ಸದ್ದಿಲ್ಲದೆ ಸುದ್ದಿ ಮಾಡಿ ಕನ್ನಡ ಚಿತ್ರರಂಗದಲ್ಲಿ ಸಂಚಲನ ಮೂಡಿಸಿತ್ತು. ಅಲ್ಲದೆ ಯುವಕರ ಮನಗೆದ್ದ ರಕ್ಷಿತ್ ಶೆಟ್ಟಿ ಮತ್ತೆ ಈಗ ಸುದ್ದಿಯಾಗಿದ್ದಾರೆ. –

Avane Srimannarayana – ಅವನೇ ಶ್ರೀಮನ್ನಾರಾಯಣ

ವಿಚಿತ್ರ ಹಾಗೂ ವಿಭಿನ್ನ ವಿಷಯಕ್ಕೆ ಸಂಬಂಧಿಸಿದ ಚಿತ್ರಕ್ಕೆ ರಕ್ಷಿತ್ ಖುಷಿಯಾಗಿದ್ದಾನೆ. ಡಿಫರೆಂಟ್ ಗೆಟಪ್ ನಲ್ಲಿ ಪೊಲೀಸ್ ಪಾತ್ರದಲ್ಲಿ ಕಾಣಿಸುತ್ತಿರುವ ರಕ್ಷಿತ್ ಟೀಸರ್ ನಲ್ಲೆ ಸುದ್ದು ಮಾಡ್ತಾಯಿದ್ದಾನೆ. ಅದು ಯಾವ ಚಿತ್ರ ಅಂತೀರಾ ಅದುವೇ “ಅವನೇ ಶ್ರೀಮನ್ನಾರಾಯಣ”.  ರಕ್ಷಿತ್ ಶೆಟ್ಟಿ ಹುಟ್ಟು ಹಬ್ಬಕ್ಕೆ ಚಿತ್ರ ತಂಡ ಟೀಸರ್ ರಿಲೀಸ್ ಮಾಡಿತ್ತು.  ಮೊದಲ ದಿನವೇ 3 ಲಕ್ಷ ಜನ ವೀಕ್ಷಿಸಿ ಸಖತ್ ಹವಾ ಕ್ರೀಯೆಟ್ ಮಾಡಿತ್ತು. ಅಲ್ಲದೇ ಎರಡೇ ದಿನಗಳಲ್ಲಿ 5 ಲಕ್ಷ ಜನ ವೀಕ್ಷಿಸಿ ಸಖತ್ ಹವಾ ಕ್ರಿಯೆಟ್ ಮಾಡಿದೆ.

” ಕಷ್ಟದಲ್ಲಿರುವವರ ಕಾಪಾಡಲು ಬಂದೇ ಬರುತ್ತಾನೆ” ಎಂಬ ಡೈಲಾಗ್ ಎಲ್ಲೆಡೆ ಹವಾ ಕ್ರಿಯೆಟ್ ಮಾಡ್ತಾಯಿದೆ. ಚಿತ್ರ ತಂಡ ಈಗಾಗಲೇ ಚಿತ್ರೀಕರಣ ಆರಂಭಿಸಿದೆ. ನಾಯಕಿಯಾಗಿ ಶಾನ್ವಿ ಶ್ರೀವಾಸ್ತವ್ ನಟಿಸುತ್ತಿದ್ದಾರೆ. ಪುಫ್ಕರ್ ಮಲ್ಲಿಕಾರ್ಜುನ್ ನಿರ್ಮಿಸುತ್ತಿರುವ ಚಿತ್ರಕ್ಕೆ ಸಚಿನ್ ನಿರ್ದೇಶಿಸುತ್ತಿದ್ದಾರೆ. ಅಜನಿಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಡಿಸೆಂಬರ್ ತಿಂಗಳಲ್ಲಿ ಪ್ರೇಕ್ಷಕರಿಗೆ ರಸದೌತಣ ನೀಡಲು ಬರುತ್ತಿದ್ದಾನೆ , “ಅವನೇ ಶ್ರೀಮನ್ನಾರಾಯಣ” .

ಈ ವಿಭಾಗದ ಎಲ್ಲಾ ಸುದ್ದಿಗಳಿಗೆ ತಪ್ಪದೇ ಕ್ಲಿಕ್ಕಿಸಿ – Film News – Kannada Film News – Sandalwood News – ಅವನೇ ಶ್ರೀಮನ್ನಾರಾಯಣ