ಸೆಂಚುರಿ ಬಾರಿಸಿದ ಟಗರು-ಇನ್ನು ನಿಂತಿಲ್ಲ ಪೊಗರು | ಸ್ಯಾಂಡಲ್ ವುಡ್ ನ್ಯೂಸ್

Kannada News (itskannada) ಸ್ಯಾಂಡಲ್ ವುಡ್ : ಸೆಂಚುರಿ ಬಾರಿಸಿದ ಟಗರು-ಇನ್ನು ನಿಂತಿಲ್ಲ ಪೊಗರು : Tagaru craze going towards 100 days-ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ ಅಭಿನಯದ ಟಗರು ಚಿತ್ರ ಶತಕ ಬಾರಿಸಿದೆ. ಅಲ್ಲದೇ  ಶಿವರಾಜ್ ಕುಮಾರ  ಮತ್ತೊಮ್ಮೆ ಸೆಂಚೂರಿ ಸ್ಟಾರ್ ಎಂದು ಸಾಬೀತು ಪಡಿಸಿದ್ದಾರೆ.

ದುನಿಯಾ ಸೂರಿ ನಿರ್ದೇಶನದ  ಟಗರು ಚಿತ್ರ ರಾಜ್ಯಾದ್ಯಂತ ಶತದಿನ ಪೂರೈಸಿದ ಹಿನ್ನೆಲೆಯಲ್ಲಿ ಸಂಭ್ರಮಿಸಲು ಸಜ್ಜಾಗಿದೆ. ಈ ವರ್ಷದಲ್ಲಿ ಟಗರು ಚಿತ್ರ ಶತದಿನ ಪೂರೈಸಿದ ಸಿನಿಮಾವಾಗಿದ್ದು ಶಿವಣ್ಣನ ಅಭಿಮಾನಿಗಳಿಗೆ ಸಖತ್ ಖುಷಿ ತಂದಿದೆ. ಅಲ್ಲದೆ ಮಫ್ತಿ ಕೂಡ ಶತಕ ಬಾರಿಸಿತು. ಇದರಿಂದ ಶಿವಣ್ಣನಿಗೆ ಡಬಲ್ ಧಮಾಂಕ ಎನಿಸಿದೆ.

ಸೆಂಚುರಿ ಬಾರಿಸಿದ ಟಗರು-ಇನ್ನು ನಿಂತಿಲ್ಲ ಪೊಗರು | ಸ್ಯಾಂಡಲ್ವುಡ್ ನ್ಯೂಸ್

ಗರು ಚಿತ್ರ ನೂರು ದಿನ ಪೂರೈಸಿಯೂ ಮುನ್ನುಗುತ್ತಿದ್ದು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

ಕನ್ನಡ ಸಿನಿಮಾ ಸುದ್ದಿ-itskannada

ಚಿತ್ರದಲ್ಲಿ ಶಿವಣ್ಣ ಲಾಂಗು ಮತ್ತು ಮಚ್ಚು ಅಬ್ಬರದಿಂದ ಪ್ರೇಕ್ಷಕರಿಗೆ ಖುಷಿ ತಂದಿದೆ. ಸಿನಿಮಾ ಖಡಕ್ ಡೈಲಾಗ್ಸ್ ಚಿನ್ನಾಗಿ ಮೂಡಿದ್ದಾವೆ. ಅಲ್ಲದೇ ಚರಣರಾಜ್ ಅವರ ಹಾಡುಗಳು ಪ್ರೇಕ್ಷಕರಿಗೆ ಖುಷಿ ತಂದಿವೆ.
ಈ ಹಿನ್ನೆಲೆಯಲ್ಲಿ ಮೊನ್ನೆ ಬೆಂಗಳೂರಿನ ಸಂತೋಷ್ ಥೇಟರ್ ನಲ್ಲಿ ದುನಿಯಾ ಸೂರಿ, ನಾಯಕ  ಶಿವರಾಜ್ ಕುಮಾರ್, ನಟಿ ಮಾನ್ವಿತಾ ಹರೀಶ್ ಅಲ್ಲದೇ ಖಳನಟರು ಶತದಿನದ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಶಿವಣ್ಣ ಟಗರು ಹಾಡುಗಳಿಗೆ ಸಖತ್ ಸ್ಟೆಪ್ ಹಾಕಿ ಅಭಿಮಾನಿಗಳನ್ನು ರಂಜಿಸಿದರು. ನಿರ್ದೇಶಕ  ದುನಿಯಾ ಸೂರಿ ಮಾತನಾಡಿ ಟಗರು ೧೦೦ ಪೂರೈಸಿದ್ದು ಸಂತಸ ತಂದಿದೆ. ಶಿವಣ್ಣ ಹಾಗೂ ಅಪ್ಪು ಜೊತೆಗೂಡಿ ಒಂದು ಸಿನಿಮಾ ಮಾಡುವೆ ಅದುವೇ 2 ನೇ ಟಗರು ಎಂದು ಅಭಿಮಾನಿಗಳಿಗೆ ತಿಳಿಸಿದರು. ಆಗ ಕೇಕೆ, ಸೀಳೆ ಮುಗಿಲು ಮುಟ್ಟಿದವು.
ಅಲ್ಲದೆ ಟಗರು ಹಾಗೂ ಮಫ್ತಿ 100 ದಿನ ಪೂರೈಸಿದ್ದರಿಂದ ” ಸ್ಯಾಂಡಲ್ ವುಡ್ ನ “ಬಾಸ್” ಎಂದು ಶಿವರಾಜ್ ಕುಮಾರ್ ರನ್ನು  ಕರೆಯುತ್ತಿದ್ದಾರೆ. ಇದೇ ಜೂನ 11 ರಂದು ಬೆಂಗಳೂರಿನ ಹಲವು ಥೇಟರ್ ನಲ್ಲಿ ಟಗರು 100 ಸಂಭ್ರಮ ಆಚರಿಸಲಿದ್ದಾರೆ. ///  Sandalwood News
– ಶಶಿಧರ ಚಂ ಬಿಕ್ಕಣ್ಣವರ
Kannada Film News – Kannada Cinema Suddi – ಕನ್ನಡ ಸಿನಿಮಾ ಸುದ್ದಿ – ಕನ್ನಡ ಸಿನಿಮಾ – Latest Kannada Film News – Kannada Movie Release.