ಕೋಟಿಗೊಬ್ಬ-3 ಅಬ್ಬರಿಸಲು ರೆಡಿಯಾಗ್ತಾಯಿದೆ | ಕನ್ನಡ ನ್ಯೂಸ್

Kiccha Sudeep's Kotigobba 3

0 76

Kannada News (itskannada) ಸ್ಯಾಂಡಲ್ ವುಡ್ : ಕೋಟಿಗೊಬ್ಬ-3 ಅಬ್ಬರಿಸಲು ರೆಡಿಯಾಗ್ತಾಯಿದೆ : ಈಗಾಗಲೇ ಕೋಟಿಗೊಬ್ಬ , ಕೋಟಿಗೊಬ್ಬ-2 ಚಿತ್ರಗಳು ಪ್ರೇಕ್ಷಕರು ಹುಬ್ಬೆರಿಸುವಂತೆ ಮಾಡಿದ ಚಿತ್ರಗಳು. ಅಲ್ಲದೇ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ಸಿನಿಮಾಗಳು. ಈ ಎರಡೂ ಚಿತ್ರಗಳನ್ನು ಸೂರಪ್ಪ ಬಾಬು ನಿರ್ಮಾಣ ಮಾಡಿದ್ದರು. ಅಲ್ಲದೇ ರಾಜ್ಯಾದ್ಯಂತ ಚಿತ್ರಗಳು ಭರ್ಜರಿ ಪ್ರದರ್ಶನ ನೀಡಿ ಯಶಸ್ವಿ ಕಂಡಿದ್ದವು.

ಕೋಟಿಗೊಬ್ಬ-3 ಅಬ್ಬರಿಸಲು ರೆಡಿಯಾಗ್ತಾಯಿದೆ

ಈಗ ಅದೇ ಸಾಲಿಗೆ ನಿಲ್ಲಿಸಲು ಸೂರಪ್ಪ ಬಾಬು ಮತ್ತೆ ಕೋಟಿಗೊಬ್ಬ-3 ಮಾಡಲು ಮುಂದಾಗಿದ್ದಾರೆ. ಈಗಾಗಲೇ ಕೋಟಿಗೊಬ್ಬ-2 ರಲ್ಲಿ ಅಭಿನಯ ಚಕ್ರವರ್ತಿ ಸುದೀಪ್ ದ್ವೀಪಾತ್ರದಲ್ಲಿ  ಸಖತ್ ಆಗಿ ನಟಿಸಿ ಗಮನ ಸೆಳೆದಿದ್ದಾರೆ. ಈ ಚಿತ್ರಕ್ಕೂ ಅವರೇ ನಾಯಕರಾಗುತ್ತಿದ್ದು ವಿಭಿನ್ನ ಪಾತ್ರದಲ್ಲಿ  ಕಾಣಿಸಿಕೊಳ್ಳುತ್ತಿದ್ದಾರಂತೆ. ಕೋಟಿಗೊಬ್ಬ-3 ಚಿತ್ರಕ್ಕೆ ಶಿವಕಾರ್ತಿಕ್ ಆಕ್ಷನ್ ಕಟ್ ಹೇಳಲಿದ್ದು, ನಾಯಕಿಯಾಗಿ ಮಲಿಯಾಳಿಯಂನ ಮಡೋನಾ ಸೆಬಾಸ್ಟಿಯನ್  ನಟಿಸಲಿದ್ದಾರೆ.

ಈ ಚಿತ್ರ ಯುರೋಪ ಹಾಗೂ ಟರ್ಕಿ ಇತರ ದೇಶಗಳಲ್ಲಿ ಚಿತ್ರಿಸಲಿದ್ದು ಜೂನ ೨೦ ರಿಂದ ಆರಂಭವಾಗಲಿದ್ದು ೪೦ ದಿನಗಳ ಕಾಲ ಚಿತ್ರೀಕರಣಕ್ಕಾಗಿ ವಿದೇಶಕ್ಕೆ ಹಾರಲಿದ್ದಾರೆ.

ಕೋಟಿಗೊಬ್ಬ-3 ಕ್ರಿಸ್ ಮಸ್ ಹಬ್ಬಕ್ಕೆ ತೆರೆ!

ಪೈಲ್ವಾನ್ ಚಿತ್ರೀಕರಣದ ಮೊದಲ ಹಂತದಲ್ಲಿ ಸುದೀಪ್ ಬ್ಯುಸಿಯಾಗಿದ್ದು ,ಬಿಡುವಿನ ಸಮಯ ಇರುವುದರಿಂದ ಈ ಚಿತ್ರೀಕರಣದಲ್ಲಿ ಭಾಗಿಯಾಗಿತ್ತಿದ್ದಾರೆ. ಈ ಚಿತ್ರಕ್ಕೆ ಅರ್ಜುನ ಜನ್ಯ ಸಂಗೀತ ನೀಡಲಿದ್ದಾರೆ. ಈ ಚಿತ್ರದಲ್ಲಿ ರವಿಶಂಕರ್, ರಂಗಾಯಣ, ಸೇರಿದಂತೆ ಇನ್ನಿತರರು ಪ್ರಮುಖ ಪಾತ್ರದಲ್ಲಿ ಕಾಣಿಸಲಿದ್ದಾರೆ. ಕ್ರಿಸ್ ಮಸ್ ಹಬ್ಬಕ್ಕೆ ಕೋಟಿಗೊಬ್ಬ-3 ತೆರೆ ಕಾಣಲಿದ್ದು ಕಾದು ನೋಡಬೇಕಾಗಿದೆ. ///
-ಶಶಿಧರ ಬಿಕ್ಕಣ್ಣವರ 
Film News – Kannada Film News – Sandalwood News – ಕನ್ನಡ ಸಿನಿಮಾ ಸುದ್ದಿ- ಕೋಟಿಗೊಬ್ಬ-3 – Kotigobba-3 New Film Kannada News

Stay Updated with itsKannada, to know more Latest Kannada News – Read Kannada News Updates Kannada News Online – Get Latest News Headlines Breaking News in Kannada

ತ್ವರಿತ ಕನ್ನಡ ಸುದ್ದಿ ಹಾಗೂ ಕ್ಷಣಕ್ಷಣದ ಕನ್ನಡ ನ್ಯೂಸ್ ಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ – its-Kannada

error: Content is protected !!