ಫಿಟ್ನೇಸ್ ಚಾಲೆಂಜ್ ಹಾಕಿದ ಕಿಚ್ಚ-ಅಭಿಮಾನಿಗಳ ಕಿತ್ತಾಟ | ಕನ್ನಡ ನ್ಯೂಸ್

Kannada News (itskannada) ಸ್ಯಾಂಡಲ್ ವುಡ್ ನ್ಯೂಸ್ : ಫಿಟ್ನೇಸ್ ಚಾಲೆಂಜ್ ಹಾಕಿದ ಕಿಚ್ಚ-ಅಭಿಮಾನಿಗಳ ಕಿತ್ತಾಟ | ಕನ್ನಡ ನ್ಯೂಸ್ : ಕಳೆದ ಕೆಲ ದಿನಗಳ ಹಿಂದೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಆರಂಭಿಸಿದ ಫಿಟ್ನೆಸ್ ಚಾಲೆಂಜ್ ಅಭಿಯಾನದಲ್ಲಿ ಕೇಂದ್ರ ಕ್ರೀಡಾ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ,ಪ್ರಧಾನಿ ಮೋದಿ ಸೇರಿದಂತೆ ಹಲವು ಸ್ಟಾರ್ ಗಳು ಈಗಾಗಲೇ ಸ್ವೀಕರಿಸಿದ್ದಾರೆ.

ಫಿಟ್ನೇಸ್ ಚಾಲೆಂಜ್ ಹಾಕಿದ ಕಿಚ್ಚ-ಅಭಿಮಾನಿಗಳ ಕಿತ್ತಾಟ | ಕನ್ನಡ ನ್ಯೂಸ್

ಅಲ್ಲದೇ ಇದೀಗ ಕನ್ನಡ ಚಿತ್ರ ನಾಯಕರಲ್ಲಿ ಕಂಡು ಬಂದಿದೆ. ಕನ್ನಡದ ಅಭಿನಯ ಚಕ್ರವರ್ತಿ  ಕಿಚ್ಚ ಸುದೀಪ್  ಅವರು ಚಿತ್ರ ರಂಗದ ನಾಯಕರಾದ ಯಶ್, ಶಿವರಾಜಕುಮಾರ ಅವರಿಗೆ  ಫಿಟ್ನೆಸ್ ಚಾಲೆಂಜ್  ಹಾಕಿದ್ದಾರೆ.

ಚಾಲೆಂಜ್ ಸ್ವೀಕರಿಸಿದ ಯಶ್  ಅವರು ತಮ್ಮ ಗೆಳೆಯನಿಂದ ಫಿಟ್ನೆಸ್  ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ.
ಯಶ್ ಅವರು ಸುದೀಪ ಅಂದು ಏಕ ವಚನದಲ್ಲಿ ಮಾತನಾಡಿದ್ದಾರೆ ಎಂದು  ಸುದೀಪ ಅಭಿಮಾನಿಗಳು ಯಶ್ ಗೆ ಟ್ವೀಟರ್ ನಲ್ಲಿ ಚಾಟಿ ಬಿಸಿದ್ದಾರೆ.  ಇದರಿಂದ ಸುಮ್ಮನಿರದ ಯಶ್ ಸಹ ಅಭಿಮಾನಿಗಳು ಸುದೀಪ ಅಭಿಮಾನಿಗಳಿಗೆ ಚಾಟಿ ಬಿಸಿದ್ದಾರೆ.ಇದರಿಂದ ಸುದೀಪ ತಮ್ಮ ಅಭಿಮಾನಿಗಳಿಗೆ ಸುಮ್ಮನಿರುವಂತೆ ಮನವಿ ಮಾಡಿದರು.
ಅಲ್ಲದೆ ಸುದೀಪ ಹಾಕಿದ ಚಾಲೆಂಜ್ ನ್ನು ಪತ್ರಿ ಪ್ರಿಯಾ ರಾಧಾಕೃಷ್ಣನ್ ಸ್ವೀಕರಿಸಿ ತಮ್ಮ ಟ್ವಿಟರ್ ಅಕೌಂಟ್ ನಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದಾರೆ.  ಅಲ್ಲದೇ ಅವರು ಶೃತಿ ಹರಿಹರನ್ ಸೇರಿದಂತೆ ಇತರ ನಾಯಕಿಯರಿಗೆ ಚಾಲೆಂಜ್ ಮಾಡಿದ್ದಾರೆ. ಮುಂದೆ ಈ ಅಭಿಯಾನ ಯಾವ ಮಟ್ಟದಲ್ಲಿ ಸದ್ದು ಮಾಡುತ್ತದೆ ಎಂದು ಕಾದುನೋಡೊಣ. /// Kannada Film News – Kannada Cinema News – Sandalwood News Kananda.