ಚಿಟ್ಟೆ-ಹರ್ಷಿಕಾ ಪೂಣಚ್ಚ ಈಗ ಗೃಹಿಣಿ

Harshika poonacha in chitte

0

Film News (itskannada) ಸ್ಯಾಂಡಲ್ ವುಡ್ ನ್ಯೂಸ್ : ಸ್ಯಾಂಡಲ್ ವುಡ್ ನಟಿ ಹರ್ಷಿಕಾ ಪೂಣಚ್ಚ ಯಾರಿಗೆಗೊತ್ತಿಲ್ಲ ಹೇಳಿ ,ಇನ್ನು ಅವರ ನಟನೆ ಹೆಚ್ಚಾಗಿ ಹೇಳುವ ಅವಶ್ಯಕತೆ ಇಲ್ಲ.ಹರ್ಷಿಕಾ ಪೂಣಚ್ಚ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡು ತನ್ನ ನಟನಾ ಶೈಲಿಯಿಂದ ವಿಭಿನ್ನ ರೀತಿಯ ನಟನೆಯಿಂದ ಪ್ರೇಕ್ಷಕರನ್ನ ತಮ್ಮತ್ತ ಸೆಳೆದ ನಟಿ. ಸದ್ಯ ಅವರು ಚಿಟ್ಟೆ ಸಿನಿಮಾದಲ್ಲಿ ನಟಿಸುತ್ತಿದ್ದು ವಿಭಿನ್ನವಾಗಿ ತೆರೆ ಮೇಲೆ ಬರಲು ರೆಡಿಯಾಗಿರುವುದು ವಿಶೇಷ.

ಸದ್ಯ ಚಿಟ್ಟೆ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಬಿಡುಗಡೆಗೆ ಸಿದ್ಧವಾಗಿದೆ . ಈ ಸಿನಿಮಾದ ಟೀಸರ್ ಈಗಾಗ್ಲೆ ಬಿಡುಗಡೆಯಾಗಿದ್ದು, ಮೆಚ್ಚುಗೆ ಪಡೆದುಕೊಂಡಿದೆ. ಹರ್ಷಿಕಾ ಪೂಣಚ್ಚ ಹುಟ್ಟುಹಬ್ಬದಂದು ‘ಚಿಟ್ಟೆ’ಯ ಟೀಸರ್ ಬಿಡುಗಡೆಯಾಗಿದ್ದು ವಿಶೇಷ. ಅದಲ್ಲದೆ ಈ ಚಿತ್ರದಲ್ಲಿದಲ್ಲಿ ಹರ್ಷಿಕಾ ಪೂಣಚ್ಚ ಗೃಹಿಣಿ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಇನ್ನೊಂದು ವಿಶೇಷ.

ಹರ್ಷಿಕಾ ಪೂಣಚ್ಚ ನಟಿಸಿರುವ ಒಟ್ಟಾರೆ 18 ಸಿನಿಮಾಗಳಲ್ಲಿ ಯಾವುದರಲ್ಲೂ ಪೂರ್ಣ ಪ್ರಮಾಣವಾಗಿ ಗೃಹಿಣಿಯಾಗಿ ಕಾಣಿಸಿಕೊಂಡಿಲ್ಲ, ಚಿಟ್ಟೆ ಚಿತ್ರದಲ್ಲಿ ಪೂರ್ಣ ಪ್ರಮಾಣವಾಗಿ ಗೃಹಿಣಿಯಾಗಿ ಪಾತ್ರ ನಿರ್ವಹಿಸಿದ್ದಾರೆ.ಚಿಟ್ಟೆ ಎಂಬ ಶಿರ್ಷೀಕೆಯಲ್ಲಿಯೇ ಹರ್ಷಿಕಾ ಕಾಣಿಸಿಕೊಳ್ಳಲಿದ್ದಾರೆ

ಸಿನಿಮಾ ತೆರೆಗೆ ಬರಲು ಸಜ್ಜಾಗಿದ್ದು, ಚುನಾವಣೆ ಮುಗಿದ ಬಳಿಕ ಆಡಿಯೋ ಬಿಡುಗಡೆ ಮಾಡೋ ಚಿಂತನೆಯಲ್ಲಿದೆ ಚಿತ್ರ ತಂಡ. ಇದಾದ ಬಳಿಕ ಅತೀ ಶೀಘ್ರದಲ್ಲಿ ಸಿನಿಮಾ ತೆರೆ ಮೇಲೆ ಬರುವ ಸಾಧ್ಯತೆ ಇದೆ. ಬೇಗ ಬರಲಿ ಆ ಚಿಟ್ಟೆ ಹಾರುವ ಸಮಯ  . . .  // ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ಕ್ಲಿಕ್ಕಿಸಿ – Sandalwood News