ಸಿದ್ದವಾಗುತ್ತಿದೆ ಅಧುನಿಕ ಶಕುಂತ್ಲೆ

Hamsalekha new film shakunthle

0

Film News(itskannada)ಸ್ಯಾಂಡಲ್ ವುಡ್ ನ್ಯೂಸ್:ಸಿದ್ದವಾಗುತ್ತಿದೆ ಅಧುನಿಕ ಶಕುಂತ್ಲೆ,‘ನಾದಬ್ರಹ್ಮ’ ಎಂದೇ ಕರೆಸಿಕೊಳ್ಳುವ ಹಂಸಲೇಖ ಅವರು ಸಂಗೀತ ಮತ್ತು ಸಾಹಿತ್ಯ ಎರಡರಿಂದಲೂ ದೊಡ್ಡ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡವರು.ಇದೀಗ ಈ ನಾದಬ್ರಹ್ಮ ಇಪ್ಪತ್ತೈದು ವರ್ಷಗಳ ಹಿಂದೆ ಅಂದುಕೊಂಡಿದ್ದ ಚಿತ್ರವನ್ನು ತೆರೆಯಮೇಲೆ ತರಲು ತೊಡಗಿದ್ದಾರೆ. ಅದುವೇ ಶಕುಂತ್ಲೆ. ಶಕುಂತ್ಲೆ ಸ್ಯಾಂಡಲ್‌ವುಡ್‌ನ ಖ್ಯಾತ ಸಂಗೀತ ಸಂಯೋಜಕ, ಚಿತ್ರಸಾಹಿತಿ ಹಂಸಲೇಖ ಚೊಚ್ಚಲ ನಿರ್ದೇಶನದ ಚಿತ್ರ. ‘ಶಕುಂತ್ಲೆ’ ಸಿನಿಮಾ ಸದ್ಯದಲ್ಲೇ ಚಿತ್ರೀಕರಣ ಆರಂಭಿಸಲಿದೆ. ಅಗತ್ಯ ತಯಾರಿಗಳೆಲ್ಲವೂ ಅಂತಿಮ ಹಂತದಲ್ಲಿದ್ದು, ‘ಶಕುಂತ್ಲೆ’ ನಿರ್ದೇಶನಕ್ಕೆ ಚಾಲನೆ ಕೊಡುವುದಾಗಿ ಸ್ವತಃ ಹೇಳಿಕೊಂಡಿದ್ದಾರೆ. ಚಿತ್ರಕ್ಕೆ ಸಂಬಂಧಿಸಿದಂತೆ ಮಾಹಿತಿ ಕೊಡಲು ಫೇಸ್‌ಬುಕ್‌ ಲೈವ್‌ಗೆ ಬಂದಿದ್ದ ಅವರು, ಕುತೂಹಲ ಸಂಗತಿಗಳನ್ನು ಹರಬಿಟ್ಟಿದ್ದಾರೆ.

ಹಂಸಲೇಖ ‘ಶಕುಂತ್ಲೆ’ ಸಿನಿಮಾದಲ್ಲೊಂದು ಒಗಟು ಅಳವಡಿಸಿದ್ದಾರೆ. ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಇದನ್ನು ಹಾಡಿದ್ದು, ಅದೀಗ ವೈರಲ್ ಆಗಿದೆ. ಈ ಒಗಟು ಬಿಡಿಸಿದವರಿಗೆ ‘ಶಕುಂತ್ಲೆ’ ಚಿತ್ರತಂಡದಿಂದ ಒಂದು ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿದ್ದು, ಚಿತ್ರಪ್ರೇಮಿಗಳಿಂದ ಇದಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. “ಇದು ನಾನು ಚಿಕ್ಕಂದಿನಲ್ಲಿ ಕೇಳಿದ್ದ ಒಗಟು. ನಮ್ಮ ಚಿತ್ರಕ್ಕೇಕೆ ಇದನ್ನು ಅಳವಡಿಸಬಾರದು ಎಂದು ಅಲೋಚಿಸಿದೆ. ಚಿತ್ರಕತೆಗೆ ಸೂಕ್ತ ರೀತಿಯಲ್ಲಿ ಹೊಂದಿಕೆ ಆಗಿದ್ದುದರಿಂದ ಅಳವಡಿಸಿದ್ದೇವೆ,” ಎನ್ನುತ್ತಾರೆ ಹಂಸಲೇಖ.ಹಂಸಲೇಖಾರವರು ‘ಶಕುಂತ್ಲೆ’ ನಂತರ ‘ಐಯೋರಾ’ ಮತ್ತು ‘ಗಿಟಾರ್’ ಎಂಬ ಮತ್ತೆರಡು ಚಿತ್ರಗಳನ್ನು ನಿರ್ದೇಶನ ಮಾಡಲಿದ್ದಾರಂತೆ.// ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ತಪ್ಪದೆ ಕ್ಲಿಕ್ಕಿಸಿ – Sandalwood News