ಕರಿ ಚಿರತೆ ದುನಿಯಾ ವಿಜಯ್ ಅರೆಸ್ಟ್ ಅಂಡ್ ರಿಲೀಸ್

ತಲೆ ಮರೆಸಿಕೊಂಡಿದ್ದ ದುನಿಯಾ ವಿಜಯ್ ಬಂಧನ

Kannada News (itskannada) ಸ್ಯಾಂಡಲ್ ವುಡ್ : ತಲೆ ಮರೆಸಿಕೊಂಡಿದ್ದ ದುನಿಯಾ ವಿಜಯ್ ಬಂಧನ : ಕರಿ ಚಿರತೆ ದುನಿಯಾ ವಿಜಯ್ ಅರೆಸ್ಟ್ ಅಂಡ್ ರಿಲೀಸ್ : ಮಾಸ್ತಿಗುಡಿ ಚಿತ್ರದ ಶೂಟಿಂಗ್ ವೇಳೆ ಸಾವನ್ನಪ್ಪಿದ್ದ ಇಬ್ಬರು ಖಳನಟರ ಸಾವಿಗೆ ಕಾರಣವಾಗಿದ್ದ ಸುಂದರ್ .ಪಿ ಗೌಡ ಬಂಧನದ ವೇಳೆ ಪರಾರಿಯಾಗಲು ಸಹಕಾರ ನೀಡಿದ್ದ ಆರೋಪ ಎದುರಿಸುತ್ತಿದ್ದ ನಟ ದುನಿಯಾ ವಿಜಯನನ್ನು ಬೆಂಗಳೂರಿನ ಚನ್ನಮ್ಮನ ಅಚ್ಚುಕಟ್ಟು ಪೊಲೀಸ್ ಠಾಣೆ ಪೊಲೀಸರು ತಮಿಳುನಾಡಿನಲ್ಲಿ ಬಂಧಿಸಿದ್ದಾರೆ.

ತಲೆ ಮರೆಸಿಕೊಂಡಿದ್ದ ದುನಿಯಾ ವಿಜಯ್ ಬಂಧನ 

ಉದಯ ಮತ್ತು ಅನಿಲ್ ಸಾವಿಗೆ ಕಾರಣವಾಗಿದ್ದ ಸುಂದರಗೌಡ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನಲೆಯಲ್ಲಿ ವಾರೆಂಟ್ ಹೊರಡಿಸಲಾಗಿತ್ತು. ಆಗ ಪೊಲೀಸರು ಸುಂದರಗೌಡನನ್ನು ಬಂಧಿಸಲು ಮುಂದಾಗಿದ್ದರು. ಈ ವೇಳೆ ದುನಿಯಾ ವಿಜಯ್ ಸಹಕರಿಸಿದ್ದರು ಎನ್ನಲಾಗಿದೆ.
 ಮಾಸ್ತಿಗುಡಿ ಚಿತ್ರದ ಶೂಟಿಂಗ್ ವೇಳೆ ಸಾವನ್ನಪ್ಪಿದ್ದ ಪ್ರಕರಣಕ್ಕೆ ಪೊಲೀಸರು  ಸುಂದರ್ .ಪಿ ರವರನ್ನು  ಬಂದಿಸಲು ಹೋದಾಗ ದುನಿಯಾ ವಿಜಯ್ ಸುಂದರ್.ಪಿ.ಗೌಡ ತಪ್ಪಿಸಿಕೊಳ್ಳಲು ನೆರವಾಗಿದ್ದರು , ಈ ಬಗ್ಗೆ ಚನ್ನಮ್ಮನ ಅಚ್ಚುಕಟ್ಟು ಪೋಲಿಸ್ ದೂರು ದಾಖಲಿಸಿದ್ದರು , ಅದರೆ FIR ಆದಾಗಿನಿಂದ ತಲೆ ಮರೆಸಿಕೊಂಡಿದ್ದ ವಿಜಯ್ ಇಂದು ತಮಿಳು ನಾಡಿನಲ್ಲಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ……  ಪೊಲೀಸರು ದುನಿಯಾ ವಿಜಯ್ ಬಂದನಕ್ಕೆ ವಿಶೇಷ ತಂಡವನ್ನು ರಚಿಸಿ ಸುಮಾರು 5 ದಿನಗಳ ಹುಡುಕಾಟ ನಡೆಸಿ ಇಂದು ಬಂಧಿಸಿದ್ದಾರೆ. ತಲೆ ಮರೆಸಿಕೊಂಡಿದ್ದ ವಿಜಯ್ ಅನ್ನು ಬಂಧಿಸಲು ನ್ಯಾಯಾಲಯ ವಾರೆಂಟ್ ಹೊರಡಿಸಿತ್ತು.
ಕಳೇದ ನಾಲ್ಕೈದು ದಿನಗಳಿಂದ ತಮಿಳುನಾಡಿನಲ್ಲಿ ತಲೆ ಮರೆಸಿಕೊಂಡಿದ್ದ ದುನಿಯಾ ವಿಜಯ್ ಬಂಧನಕ್ಕೆ ಅಲ್ಲಿಯೇ ಬೀಡು ಬಿಟ್ಟಿದ್ದ ಬೆಂಗಳೂರು ಪೊಲೀಸರು ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಮಿಳುನಾಡಿನಿಂದ ಬೆಂಗಳೂರಿಗೆ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ , ಸಧ್ಯ ಸ್ಪೆಷಲ್ ಕೋರ್ಟ್ ನಲ್ಲಿ ಜಾಮೀನು ಅರ್ಜಿ ಕೋರಿದ್ದ ನಟ ವಿಜಯಗೆ ನಿರೀಕ್ಷಣಾ ಜಾಮೀನು ನೀಡಿದ್ದಾರೆ.   ///  Film News – Sandalwood News
webtitle : ತಲೆ ಮರೆಸಿಕೊಂಡಿದ್ದ ದುನಿಯಾ ವಿಜಯ್ ಬಂಧನ , ತಲೆ ಮರೆಸಿಕೊಂಡಿದ್ದ ದುನಿಯಾ ವಿಜಯ್ ಆರೆಸ್ಟ್ ,ನಟ ದುನಿಯಾ ವಿಜಯ್‌ ಬಂಧನ,ಕರಿ ಚಿರತೆ ದುನಿಯಾ ವಿಜಯ್ ಅರೆಸ್ಟ್ ಅಂಡ್ ರಿಲೀಸ್.