ಡಿಸೆಂಬರ್ ತಿಂಗಳು ಲಕ್ಕಿ ಎಂದ ಲಕ್ಕಿ ಪತ್ನಿ ರಾಧಿಕಾ, ಏನದು ?

December is lucky, Says Rocking Star Yash wife Radhika

0

ಡಿಸೆಂಬರ್ ತಿಂಗಳು ಲಕ್ಕಿ ಎಂದ ಲಕ್ಕಿ ಪತ್ನಿ ರಾಧಿಕಾ, ಏನದು ?

ಸ್ಯಾಂಡಲ್ ವುಡ್ : ನಮಗೆ ನಿಮಗೆ ತಿಳಿದಂತೆ ರಾಕಿಂಗ್ ಸ್ಟಾರ್ ಯಶ್ ಗೂ ಡಿಸೆಂಬರ್ ತಿಂಗಳು ಎಲ್ಲಿಲ್ಲದ ಸಂಬಂಧ , ಅದೇ ತಿಂಗಳಲ್ಲಿ ಬಿಡುಗಡೆ ಗೊಂಡ ಅವರ ಸಿನಿಮಾ ಭರ್ಜರಿ ಯಶಸ್ಸು ಕಂಡಿದ್ದೂ , ಅಂತೆಯೇ ಅವರು ಡಿಸೆಂಬರ್ ನಲ್ಲಿ ವಿವಾಹವಾಗಿದ್ದು , ಇದೀಗ ಅದೇ ಸಾಲಿಗೆ ಮಗಳ ಆಗಮನ .

ಇಷ್ಟು ದಿವಸ ಇದೊಂದು ಕಾಕತಾಳೀಯ ಅನ್ನುತ್ತಿದ್ದ ರಾಧಿಕಾ ಇದೀಗ ಡಿಸೆಂಬರ್ ತಿಂಗಳು ನಮ್ಮ ಪಾಲಿಗೆ ನಿಜಕ್ಕೂ ಲಕ್ಕಿ ಎಂದಿದ್ದಾರೆ.

ಡಿಸೆಂಬರ್ 2ರಂದು ಹೆಣ್ಣುಮಗುವಿಗೆ ಜನ್ಮ ನೀಡಿದ ನಟಿ ರಾಧಿಕಾ ಪಂಡಿತ್ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಸುದ್ದಿಗೋಷ್ಠಿ ನಡೆಸಿ ದಂಪತಿಗಳು ವೈದ್ಯರೂ ಸೇರಿದಂತೆ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

ಮಾತನಾಡಿದ ರಾಧಿಕಾ ,ಇಂದು ನಮ್ಮ ಎರಡನೇ ವರ್ಷದ ಮದುವೆ ವಾರ್ಷಿಕೋತ್ಸವ ಸಂತಸದಲ್ಲಿ ಮಗಳೂ ಬಾಗಿಯಾಗಿರುವುದು ಇನ್ನಷ್ಟು ಸಂತಸಕ್ಕೆ ಕಾರಣವಾಗಿದೆ ಎಂದರು.

ಸಧ್ಯ ಯಶ್ ಕೆಜಿಎಫ್ ಚಿತ್ರದ ಪ್ರಮೋಷನ್‌ ನಲ್ಲಿ ಸ್ವಲ್ಪ ಬ್ಯುಸಿ ಇದ್ದು, ಆದರೂ ಸಂಭ್ರಮದಲ್ಲಿದ್ದು  ತಾನು  ನನ್ನ ಮಗುವಿನೊಂದಿಗೆ ಸಂಭ್ರಮ ಆಚರಿಸುತ್ತಿದ್ದೇನೆಂದು ರಾಧಿಕಾ ಹೇಳಿದರು.////

WebTitle : ಡಿಸೆಂಬರ್ ತಿಂಗಳು ಲಕ್ಕಿ ಎಂದ ಲಕ್ಕಿ ಪತ್ನಿ ರಾಧಿಕಾ, ಏನದು ?-December is lucky, Says Rocking Star Yash wife Radhika

>>> ಕ್ಲಿಕ್ಕಿಸಿ  ಕನ್ನಡ ನ್ಯೂಸ್ : Sandalwood News | Kannada Film News