ದರ್ಶನ್ ಖರೀದಿಸಿದ ಹೊಸ ಕಾರಿನ ಬೆಲೆ ಗೊತ್ತ ? ಬೆಚ್ಚಿ ಬಿಳ್ತಿರ

Darshan-Purchase-ford-mustang-sports-car

Film News (itskannada) ದರ್ಶನ್ ಖರೀದಿಸಿದ ಹೊಸ ಕಾರಿನ ಬೆಲೆ ಗೊತ್ತ ? ಬೆಚ್ಚಿ ಬಿಳ್ತಿರ-Darshan-Purchase-ford-mustang-sports-car : ನಟ ದರ್ಶನ್‌ ಮತ್ತೆ ಹೊಸ ಕಾರು ಖರೀದಿಸಿದ್ದಾರೆ. ದುಬಾರಿ ಬೆಲೆಯ ಕಾರುಗಳ ಮೇಲೆ ವ್ಯಾಮೋಹ ಇರುವ ದರ್ಶನ್‌ ಈ ಬಾರಿ ಹಳದಿ ಬಣ್ಣದ ಫೋರ್ಡ್‌ ಮಸ್ಟಂಗ್‌ ಕಾರನ್ನು ಖರೀದಿಸಿದ್ದಾರೆ. ಇತ್ತೀಚೆಗಷ್ಟೇ ಲ್ಯಾಂಬೊರ್ಗಿನಿ ಕಾರನ್ನು ಕೊಂಡು ತಂದಿದ್ದ ಅವರ ಮನೆಯ ಮುಂದೆ ಈಗ ಹೊಸ ಮಾಡೆಲ್‌ನ ಫೋರ್ಡ್‌ ಮಸ್ಟಂಗ್‌ ಸ್ಪೋರ್ಟ್ಸ್ ಕಾರ್‌ ಬಂದು ನಿಂತಿದೆ.

ಈ ಕಾರಿನ ಶೋರೂಮಿನ ಬೆಲೆ 75 ಲಕ್ಷ. ಆನ್‌ರೋಡ್‌ ಬೆಲೆ ಒಂದು ಕೋಟಿಯಾಗಬಹುದು ಎನ್ನಲಾಗಿದೆ. ಈಗಾಗಲೇ ದರ್ಶನ್ ಬಳಿ ಬಿಎಂಡಬ್ಲು, ರೇಂಜ್‌ ರೋವರ್‌, ಜಾಗ್ವರ್‌, ಫಾಚ್ರ್ಯೂನರ್‌ ಕಾರುಗಳಿವೆ. ಕಳೆದ ತಿಂಗಳಷ್ಟೇ ಅವರು ಲ್ಯಾಂಬೋರ್ಗಿನಿನ ನ್ಯೂ ಎಡಿಷನ್‌ ಕಾರು ಖರೀದಿಸಿದ್ದರು. ಇವುಗಳ ಸಾಲಿಗೆ ಮತ್ತೊಂದು ಕಾರು ಸೇರ್ಪಡೆ ಆಗಿದೆ.

ದರ್ಶನ್‌ ಕೇವಲ ವಾಹನ ಪ್ರಿಯರು ಮಾತ್ರವಲ್ಲ, ಪಕ್ಷಿ ಮತ್ತು ಪ್ರಾಣಿಗಳನ್ನೂ ಸಾಕಿದ್ದಾರೆ. ದೇಶ ವಿದೇಶಿ ಪಕ್ಷಿಗಳ ಸಂಗ್ರಹಾಲಯವೇ ಅವರ ತೋಟದಲ್ಲಿದೆ. ವಿವಿಧ ತಳಿಯ ಕುದುರೆಗಳು ಮತ್ತು ಹಸುಗಳನ್ನೂ ಅವರು ಸಾಕಿದ್ದಾರೆ. ಅಲ್ಲದೇ ಮೈಸೂರಿನ ಪ್ರಾಣಿ ಸಂಗ್ರಹಾಲಯದಲ್ಲಿರುವ ಕೆಲ ಪ್ರಾಣಿಗಳನ್ನೂ ಅವರು ದತ್ತು ತಗೆದುಕೊಂಡಿದ್ದಾರೆ. //// – ಸುದ್ದಿ ಮಾಹಿತಿ ಕೃಪೆ – ವಿಜಯಕರ್ನಾಟಕ /// ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ತಪ್ಪದೇ ಕ್ಲಿಕ್ಕಿಸಿ – Sandalwood News- Kannada Film News