ರಾಮಧಾನ್ಯ-ಟೀಸರ್ ಇಷ್ಟ ಪಟ್ಟು ಧ್ವನಿ ನೀಡಿದ ದರ್ಶನ್

Darshan given voice for Ramadhanya

25

Film News (itskannada)ಸ್ಯಾಂಡಲ್ ವುಡ್ ನ್ಯೂಸ್ : ರಾಮಧಾನ್ಯ-ಟೀಸರ್ ಇಷ್ಟ ಪಟ್ಟು ಧ್ವನಿ ನೀಡಿದ ದರ್ಶನ್ :  ರಾಮಧಾನ್ಯ ಸಿನಿಮಾ ಪ್ರಾರಂಭದ ಒಂದು ನಿಮಿಷ ಮತ್ತು ಕೊನೆಯ ಒಂದು ನಿಮಿಷ ದರ್ಶನ್ ಅವರ ಧ್ವನಿ ಇರಲಿದೆ. ಸಿನಿಮಾದ ಪ್ರಾರಂಭ ದರ್ಶನ್ ಅವರ ಧ್ವನಿಯ ಮೂಲಕ ಶುರುವಾಗಲಿದೆ.

ಇನ್ನೊಂದು ವಿಶೇಷ ಅಂದ್ರೆ ಈ ಸಿನಿಮಾದಲ್ಲಿ ನಟಿಸಿರೋದು ಬೇರಾರು ಅಲ್ಲ. ದರ್ಶನ್ ಅವರ ಗೆಳೆಯರ ಬಳಗದಲ್ಲಿ ಗುರುತಿಸಿಕೊಂಡಿರುವ ಯಶಸ್ ಸೂರ್ಯ. ಇವರಿಗಾಗಿ ದರ್ಶನ್ ತಮ್ಮ ಧ್ವನಿ ನೀಡಿದ್ದಾರೆ ಎನ್ನಲಾಗಿದೆ.

ಇನ್ನು ಧ್ವನಿ ನೀಡುವ  ಮೊದಲು ದರ್ಶನ್ ’ರಾಮಧಾನ್ಯ ’ ಸಿನಿಮಾದ ಟೀಸರ್ ಅನ್ನು ನೋಡಿದ್ರಂತೆ. ಟೀಸರ್ ಇಷ್ಟ ಪಟ್ಟ ದರ್ಶನ್ ತಮ್ಮ ಧ್ವನಿ ನೀಡಿದ್ದಾರಂತೆ. ಇನ್ನು ’ರಾಮಧಾನ್ಯ ಸಿನಿಮಾದ ಆಡಿಯೋವನ್ನು ಸಹ ದರ್ಶನ್ ಮೇ ೯ಕ್ಕೆ ಬಿಡುಗಡೆ ಮಾಡಲಿದ್ದಾರೆ ಅನ್ನೋ ಮಾಹಿತಿ ಕೂಡ ಇದೀಗ ಲಭ್ಯವಾಗಿದೆ. ಚಿತ್ರದಲ್ಲಿ ಸಾಫ್ಟ್ ವೇರ್ ಇಂಜಿನಿಯರ್, ರಾಮ, ಕನಕದಾಸ ಸೇರಿ ನಾಲ್ಕು ಬೇರೆ ಬೇರೆ ಶೇಡ್ ಗಳಲ್ಲಿ ಯಶಸ್ ಸೂರ್ಯ ನಟಿಸುತ್ತಿದ್ದಾರೆ. ನಾಗೇಶ್ ಕುಮಾರ್ ಚಿತ್ರದ ಆಕ್ಷನ್ ಕಟ್ ಹೇಳಿದ್ದಾರೆ.

ಇನ್ನು ಈ ಸಿನಿಮಾ ಅಷ್ಟೆ ಅಲ್ಲದೆ ಈ ಹಿಂದೆ ಧೃವಸರ್ಜಾ ಅಭಿನಯದ ಭರ್ಜರಿ ಸಿನಿಮಾಕ್ಕೂ ಧ್ವನಿ ನೀಡಿದ್ದರೆ ದರ್ಶನ್. // ಈ ವಿಭಾಗದ ಇನ್ನಷ್ಟು ಸುದ್ದಿಗಳಿಗಾಗಿ ತಪ್ಪದೇ ಕ್ಲಿಕ್ಕಿಸಿ – Sandalwood News


ತ್ವರಿತ ಕನ್ನಡ ಸುದ್ದಿ ಹಾಗೂ ಕ್ಷಣಕ್ಷಣದ ಕನ್ನಡ ನ್ಯೂಸ್ ಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ

Stay Updated with itsKannada, to know more Latest Kannada News - Read Kannada News Today Updates Kannada News Online - Get Latest News Headlines Breaking News in Kannada


.
error: Content is protected !!