ಇರಲಾರದೆ ಇರುವೆ ಬಿಟ್ಕೊಂಡ್ರ ಪ್ರಕಾಶ್ ರೈ-ಓದಿ

0

Film News (itskannada) ಸ್ಯಾಂಡಲ್ ವುಡ್ ನ್ಯೂಸ್ : ಇರಲಾರದೆ ಇರುವೆ ಬಿಟ್ಕೊಂಡ್ರ ಪ್ರಕಾಶ್ ರೈ-ಓದಿ – ಪ್ರಕಾಶ್ ರೈ. ಉತ್ತಮ ನಟ, ತಮ್ಮ ನಟನಾ ಶೈಲಿಯಿಂದ ಹಲವು ಅಭಿಮಾನಿಗಳನ್ನು ತನ್ನತ್ತ ಸೆಳೆದುಕೊಂಡ ನಟ. ಕನ್ನಡ,ತೆಲುಗು,ತಮಿಳು ಈಗೆ ಪ್ರತಿ ಭಾಷೆಯಲ್ಲಿಯೂ ಈ ನಟ ಅಭಿಮಾನಿಗಳನ್ನು ಹೊಂದಿದ್ದಾರೆ. ಸಿನಿಮಾವಷ್ಟೇ ಆಗಿದಿದ್ದರೆ ಇಲ್ಲ್ಲಿ ಸುದ್ದಿಯಾಗುತ್ತಿರಲಿಲ್ಲ , ಪ್ರಧಾನಿ ಮೋದಿಯನ್ನು ಟಿಕಿಸಿದರಿಂದ ಇದೀಗ ಬಿಜೆಪಿ ಪಕ್ಷದವರ ವಿರೋಧವನ್ನು ಕಟ್ಟುಕೊಂಡಿದ್ದಾರೆ. ಇದೇ ಕಾರಣದಿಂದ ಸಾಕಷ್ಟು ಅಭಿಮಾನಿಗಳು ಪ್ರಕಾಶ್ ರೈ ಸಿನಿಮಾಗಳನ್ನ ನೋಡುವುದಿಲ್ಲ ಎಂದಿದ್ದಾರೆ

ಕೇವಲ ಒಂದು ಭಾಷೆ ಮಾತ್ರವಲ್ಲದೆ,ತೆಲುಗು ಸಿನಿಮಾರಂಗದ ಅಭಿಮಾನಿಗಳು ಕೂಡ ಪ್ರಕಾಶ್ ರೈ ಹೇಳಿಕೆಗಳಿಗೆ ವಿರೋಧ ವ್ಯಕ್ತ ಪಡಿಸಿದ್ದಾರೆ. ಇನ್ನೊಂದೆಡೆ ಬಾಲಿವುಡ್ ನಲ್ಲಿ ಪ್ರಕಾಶ್ ರೈ ಅವರಿಗೆ ಹಿಂದಿ ಸಿನಿಮಾಗಳಿಗೆ ಅವಕಾಶ ನೀಡುವುದನ್ನ ನಿಲ್ಲಿಸಿದ್ದಾರೆ. ಸ್ಯಾಂಡಲ್ ವುಡ್ ಕೂಡ ಇದಕ್ಕೆ ಹೊರತಾಗಿಲ್ಲ. ಚಂದನವನದ ಸಾಕಷ್ಟು ನಿರ್ದೇಶಕರು ಪ್ರಕಾಶ್ ರೈ ಅವರನ್ನ ಹಿಟ್ಲರ್ ಬುದ್ದಿಯನ್ನ ಬಿಟ್ಟು ಬಿಡಿ ಎಂದು ಹೇಳುತ್ತಿದ್ದಾರೆ.

ಈ ಬಗ್ಗೆ ಸ್ಯಾಂಡಲ್ ವುಡ್ ನ ಕೆಲವರು ತಮ್ಮ ಅಭಿಪ್ರಾಯವನ್ನು ತಮ್ಮ ತಮ್ಮ ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿ ತಿಳಿಸಿದ್ದಾರೆ. ಅವುಗಳಲ್ಲಿ ಕೆಲವು ಇಲ್ಲಿವೆ.

ಹಿರಿಯ ಖಳನಟ ಹರೀಶ್ ರಾಯ್ ತಮ್ಮ ಅಭಿಪ್ರಾಯವನ್ನ ವಿಡಿಯೋ ಮಾಡಿ ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿ. ‘ನೀನು ಯಾವುದೇ ಪಂಚ ಭಾಷೆಯ ನಟನಲ್ಲ. ಮೊದಲು ಹಿಟ್ಲರ್ ತರ ಮಾತನಾಡುವುದನ್ನ ಬಿಡು, ಪ್ರಧಾನ ಮಂತ್ರಿಗಳ ವಿರುದ್ಧ ಮಾತನಾಡುವುದಕ್ಕೆ ನಿನಗೆ ಯಾವುದೇ ಅಧಿಕಾರವಿಲ್ಲ” ಎಂದರೆ,

ಡೆಡ್ಲಿ ಡೈರೆಕ್ಟರ್ ರವಿ ಶ್ರೀವತ್ಸಾ ಕೂಡ ಪ್ರಕಾಶ್ ರೈ ಬಗ್ಗೆ ತಮ್ಮ ಅಭಿಪ್ರಾಯವನ್ನ ಫೇಸ್ ಬುಕ್ ನಲ್ಲಿ “ಪ್ರಕಾಶ್ ರೈ ಒಬ್ಬ ಎಂಜಿಲು ತಿನ್ನೋ ನಾಯಿ ಎನ್ನುವುದು ಸಾಭೀತಾಗಿದೆ. ಇಡೀ ಭಾರತದ ಉದ್ದಗಲಕ್ಕೂ ಮನೆ ಮನೆ ಮುಂದೆ ನಿಂತು ಬೊಗಳೋ ನಾಯಿ ಅದು. ಬೊಗಳಿದಾಗ ಹೊಡಿಬೇಕು ಇಲ್ಲ ಅಂದ್ರೆ ಕಚ್ಚೋಕೆ ಶುರು ಮಾಡುತ್ತೆ” ಎಂದಿದ್ದಾರೆ.

ಟ ಜಗ್ಗೇಶ್ ಕೂಡ ಪ್ರಕಾಶ್ ರೈ ಅವರ ಬಗ್ಗೆ ಮಾತನಾಡಿದ್ದು. ಪ್ರಕಾಶ್ ರೈ ನನಗೆ ಉತ್ತಮ ಸ್ನೇಹಿತ ಒಬ್ಬೊಬ್ಬರಿಗೆ ಒಂದೊಂದು ನಿಲುವು ಇರುತ್ತದೆ. ಹಾಗೆಯೇ ಆತನಿಗೆ ತಲೆ ಸರಿಯಿಲ್ಲ. ಆದ್ದರಿಂದ ಹಿಂಗೆಲ್ಲ ಮಾತನಾಡುತ್ತಾರೆ ಎಂದಿದ್ದಾರೆ.

/// ಈ ವಿಭಾಗದ ಇನ್ನಷ್ಟು ಸುದ್ದಿಗಳಿಗಾಗಿ ಕ್ಲಿಕ್ಕಿಸಿ – Sandalwood News