ಚಂದನವನಕ್ಕೆ ಐಸೂ ರೀ ಎಂಟ್ರಿ-ದರ್ಶನ್ ತಂಗಿಯಾಗಿ

Kannada News (itskannada) ಸ್ಯಾಂಡಲ್ ವುಡ್ : ಚಂದನವನಕ್ಕೆ ಐಸೂ ರೀ ಎಂಟ್ರಿ-ದರ್ಶನ್ ತಂಗಿಯಾಗಿ – ಚೆಲುವಿನ ಚಿತ್ತಾರದ ಬೆಡಗಿ ನಟಿ ಅಮೂಲ್ಯ ಮತ್ತೆ  ಬಣ್ಣದ ಲೋಕಕ್ಕೆ ಬರುತ್ತಿದ್ದಾರೆ. ಹಿಟ್ ಮೇಲೆ ಹಿಟ್ ಚಿತ್ರ ಕೊಟ್ಟ ಅಮೂಲ್ಯ ಈಗ ಮತ್ತೆ ಚಿತ್ರರಂಗದಲ್ಲಿ ಸದ್ದು ಮಾಡಲು ಬರುತ್ತಿದ್ದಾರೆ. ಈಗಷ್ಟೇ ಅಂದರೆ ಕಳೆದ  ವರ್ಷದಲ್ಲಿ  ನಟಿ ಅಮೂಲ್ಯ ಜಗದೀಶ್ ಎಂಬುವರನ್ನು ಮದುವೆಯಾಗಿದ್ದರು. ಆದ್ದರಿಂದ ಸ್ವಲ್ಪ ಗ್ಯಾಪ್ ಕೊಟ್ಟು ಮರಳಿ ಬರುತ್ತಿದ್ದಾರೆ.  ನಟಿಸಲು ಒಲ್ಲೆ ಅಂದವಳು  ಮತ್ತೆ ಬಂದಳು ಅಂತೀರಾ, ಚಿತ್ರಗಳು ಹೆಚ್ಚು ಆಫರ್ ಬರ್ತಿವೆ ಅಂತೆ. ಅದಕ್ಕಾಗಿ ಇಷ್ಟದ ಪಾತ್ರ ಸಿಕ್ಕರೆ ಮಾತ್ರ ಮಾಡುವೆನು ಎಂದಿದ್ದಾರೆ.

ಮಲಿಯಾಳಂ  ವೇದಾಲಂ ಎಂಬ ಕನ್ನಡ ರಿಮೇಕ್   ಚಿತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಅಮೂಲ್ಯ . ಚಾಲೇಜಿಂಗ್ ಸ್ಟಾರ್ ದರ್ಶನ್ ತಂಗಿಯಾಗಿ ಅಭಿನಯಿಸಲಿದ್ದಾರೆ,ತಂಗಿಯ ಪಾತ್ರದಲ್ಲಿ ಕಾಣಿಸಲಿದ್ದಾರೆ. ಅಲ್ಲದೇ ದರ್ಶನ್ ಅವರ ಜೊತೆ ನಟಿಸಬೇಕೆಂಬ ಆಸೆ ಬಹಳ ದಿನದಿಂದ  ಇತ್ತು. ಅದು ಈ ಚಿತ್ರದಲ್ಲಿ ನೆರವೇರಿದೆ ಅಂತಾರೆ ಅಮೂಲ್ಯ. ///