“ಬಿಲ್ಲ ರಂಗ ಬಾಷ” ಸಂಕ್ರಾಂತಿ ಬಳಿಕ ಚಿತ್ರ ಮುಹೂರ್ತ

Billa Ranga Baasha, after the Sankranti, will be Muhurtha

0

“ಬಿಲ್ಲ ರಂಗ ಬಾಷ” ಸಂಕ್ರಾಂತಿ ಬಳಿಕ ಚಿತ್ರ ಮುಹೂರ್ತ

ಸ್ಯಾಂಡಲ್ ವುಡ್ : ನಟ ಸುದೀಪ್‌ ಮತ್ತು “ರಂಗಿತರಂಗ’ ಖ್ಯಾತಿಯ ಅನೂಪ್‌ ಭಂಡಾರಿ ಆ್ಯಕ್ಷನ್‌-ಅಡ್ವೆಂಚರ್‌ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ ಎಂಬ ಸುದ್ದಿ ಕೆಲ ದಿನಗಳ ಹಿಂದಷ್ಟೇ ಹೊರಬಿದ್ದಿತ್ತು. ಈಗ ಈ ಹೊಸಚಿತ್ರಕ್ಕೆ “ಬಿಲ್ಲ ರಂಗ ಬಾಷ’ ಎಂದು ಹೆಸರಿಡಲಾಗಿದ್ದು, ಸುದೀಪ್‌ ತಮ್ಮ ಟ್ವಿಟ್ಟರ್‌ನಲ್ಲಿ ಈ ಚಿತ್ರದ ಟೈಟಲ್‌ ಪೋಸ್ಟರ್‌ ಬಿಡುಗಡೆ ಮಾಡಿದ್ದಾರೆ.

ಇನ್ನು ಸಿನಿಮಾದ ಟೈಟಲ್‌ ಪೋಸ್ಟರ್‌ ನೋಡಿದರೆ, ಪಕ್ಕಾ ಔಟ್‌ ಆ್ಯಂಡ್‌ ಔಟ್‌ ಮಾಸ್‌ ಎಂಟರ್‌ಟೈನ್ಮೆಂಟ್‌ ಸಿನಿಮಾದಂತೆ ಕಾಣುತ್ತಿದೆ.  ಇನ್ನು ಈ ಚಿತ್ರದಲ್ಲಿ ನಿರ್ದೇಶಕ ಅನೂಪ್‌ ಭಂಡಾರಿ, ಕ್ರಿ.ಶ 2209ರಲ್ಲಿದ್ದ ರಾಜನೊಬ್ಬನ ಕಥೆಯನ್ನ ಹೇಳುವ ಸುಳಿವನ್ನು ಬಿಟ್ಟುಕೊಟ್ಟಿರುವುದರಿಂದ, ಸುದೀಪ್‌ ಏನಾದ್ರೂ ರಾಜನ ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಾರಾ? ಎಂಬ ಕುತೂಹಲ ಕೂಡ ಕಿಚ್ಚನ ಅಭಿಮಾನಿಗಳಲ್ಲಿ ಮನೆ ಮಾಡಿದೆ.

ಅಂದಹಾಗೆ, ಸುಮಾರು ಹದಿನೆಂಟು ವರ್ಷಗಳ ಹಿಂದೆಯೇ ಅನೂಪ್‌ ಭಂಡಾರಿ ಈ ಕಥೆಯನ್ನು ಮಾಡಿಕೊಂಡಿದ್ದರಂತೆ. “ಸುಪ್ರಿಯಾನ್ವಿ ಪ್ರೊಡಕ್ಷನ್ಸ್‌’ ಬ್ಯಾನರ್‌ನಲ್ಲಿ ಸುದೀಪ್‌ ಪತ್ನಿ ಪ್ರಿಯಾ ಸುದೀಪ್‌ “ಬಿಲ್ಲ ರಂಗ ಬಾಷ’ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಸದ್ಯ ಈ ಚಿತ್ರದ ಪ್ರೀ-ಪ್ರೊಡಕ್ಷನ್‌ ಕೆಲಸಗಳು ಅಂತಿಮ ಹಂತದಲ್ಲಿದ್ದು, ಚಿತ್ರರಂಗದ ಮೂಲಗಳ ಪ್ರಕಾರ ಮುಂಬರುವ ಸಂಕ್ರಾಂತಿಯ ಬಳಿಕ ಚಿತ್ರ ಮುಹೂರ್ತ ನಡೆಯಲಿದೆ//// ಕೃ.ಫೆ. ಉ.ವಾ

WebTitle : “ಬಿಲ್ಲ ರಂಗ ಬಾಷ” ಸಂಕ್ರಾಂತಿ ಬಳಿಕ ಚಿತ್ರ ಮುಹೂರ್ತ-Billa Ranga Baasha, after the Sankranti, will be Muhurtha

>>> ಕ್ಲಿಕ್ಕಿಸಿ ಕನ್ನಡ ನ್ಯೂಸ್ : Sandalwood NewsKannada Film News