“ಆ ಕರಾಳ ರಾತ್ರಿ” ಹಾರರ್ ಚಿತ್ರವಲ್ಲ | ಕನ್ನಡ ನ್ಯೂಸ್

0 144

Kannada News (itskannada) ಸ್ಯಾಂಡಲ್ ವುಡ್ : ಆ ಕರಾಳ ರಾತ್ರಿ ಹಾರರ್ ಚಿತ್ರವಲ್ಲ :  ಬಿಗ್ ಬಾಸ್ ನಲ್ಲಿದ್ದ ಸ್ಪರ್ಧಿಗಳೆಲ್ಲರೂ  ಬ್ಯೂಸಿ ಆಗಿದ್ದಾರೆ. ಯಾಕಂದ್ರೆ ಬಿಗ್  ಬಾಸ್ ವಿನ್ನರ್ ಚಂದನ್ ಶೆಟ್ಟಿ ” ಮಾಸ್ಟರ್ ಡಾನ್ಸರ್ ” ಮತ್ತು ಸಂಗೀತ ಹಿನ್ನೆಲೆ ನೀಡುತ್ತಾ ಗಮನ ಸೆಳೆಯುತ್ತಿದ್ದಾರೆ. ಅಲ್ಲದೆ ಇನ್ನುಳಿದ  ಕಲಾವಿದರು ಈಗ ಸಿನಿಮಾಗಳಲ್ಲಿ , ರಿಯಾಲಿಟಿ ಶೋಗಳಲ್ಲಿ  ಭಾಗಿಯಾಗಿದ್ದಾರೆ. ಅದೇ ರೀತಿಯಲ್ಲಿ ಜೆಕೆ, ಅನುಪಮ ಹಾಗೂ ವೈಷ್ಣವಿ ಈಗ  ಒಂದೇ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

‘ಆ ಕರಾಳ ರಾತ್ರಿ’ ಎಂಬ ಹೆಸರು ಕೇಳಿದರೆ  ಇದು ಹಾರರ್ ಚಿತ್ರ  ಅನಿಸುತ್ತದೆ. ಆದರೆ, ಅದು ಹಾರರ್ ಅಲ್ಲ, ಇದೊಂದು ಎಮೋಷನಲ್ ಥ್ರಿಲ್ಲರ್ ಸಿನಿಮಾವಾಗಿದೆ.ಶೂಟಿಂಗ್ ಕೆಲಸ ಈಗಾಗಲೇ ಮುಗಿಸಿ ಸುದ್ದಿಯಾದ ಚಿತ್ರವನ್ನು, ದಯಾಳ್ ಪದ್ಮನಾಭನ್  ಅವರು ನಿರ್ಮಿಸುತ್ತಿದ್ದಾರೆ.  ಸೋಮವಾರ ಈ ಚಿತ್ರದ  ಆಡಿಯೋ ಬಿಡುಗಡೆಯನ್ನ  ರಿಯಲ್ ಸ್ಟಾರ್ ಉಪೇಂದ್ರ ಅವರು ಇತ್ತೀಚೆಗೆ  ಬೆಂಗಳೂರಿನ ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ಬಿಡುಗಡೆಗೊಳಿಸಿದರು.

ಮೊದಲ ಬಾರಿಗೆ 80 ರ ದಶಕದ ಗೆಟಪ್ ನಲ್ಲಿ ಕಾಣಿಸಿಕೊಂಡಿರುವ ಜೆ.ಕೆ ಈ ಚಿತ್ರದ ಕುರಿತು ಖುಷಿ ವ್ಯಕ್ತಪಡಿಸುತ್ತಾರೆ. ಹಾಗೂ ರಿಯಾಲಿಟಿಗೆ ವಿರುದ್ಧವಾಗಿ ಉದ್ದ ಮೀಸೆ, ಸ್ಮೂಥ್ ಶೇವ್ ಗೆಟಪ್ ನಲ್ಲಿ ಮಿಂಚುತ್ತಿದ್ದಾರೆ.

ಒಂದು ರಾತ್ರಿಯಲ್ಲಿ ನಡೆಯುವ ಘಟನೆಯ ಸುತ್ತ ಹೆಣೆದ ಕತೆ ‘ ಆ ಕರಾಳ ರಾತ್ರಿ ‘ ಚಿತ್ರದಲ್ಲಿ ಹಳ್ಳಿಯಲ್ಲಿ ನಡೆಯುವ ಕಥೆ ಇದಾಗಿದೆ ಎಂದು ಹೇಳಲಾಗಿದೆ . ನಗರದಿಂದ ಹಳ್ಳಿಗೆ ಬಂದ ಹುಡುಗನೊಬ್ಬ ಮನೆಯೊಂದರಲ್ಲಿ ಉಳಿದುಕೊಂಡಾಗ ಏನಾಗುತ್ತೆ ಎನ್ನುವುದು ಚಿತ್ರದಲ್ಲಿದೆ . ಈ ಚಿತ್ರದ ನಾಯಕನಾಗಿ ಜೆ.ಕೆ ಮತ್ತು ನಾಯಕಿ ಅನುಪಮಾ ಗೌಡ ಅವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
 ಈ ಚಿತ್ರಕ್ಕೆ ನಟ ನವೀನ್ ಕೃಷ್ಣ ಅವರು ಸಂಭಾಷಣೆ ಬರೆದಿದ್ದಾರೆ. ಗಣೇಶ್ ನಾರಾಯಣ್ ಅವರ ಸಂಗೀತ ಸಂಯೋಜಿಸಿದ್ದಾರೆ. ಬಿಗ್ ಬಾಸ್ ನ ಆಶಿತಾ,  ರಂಗಾಯಣರಘು,  ವೀಣಾಸುಂದರ್ ಸೇರಿದಂತೆ ಹಲವಾರು ಕಲಾವಿದರು ಈ ಚಿತ್ರದಲ್ಲಿ ಕಾಣಿಸಿ ಕೊಳ್ಳಲಿದ್ದಾರೆ.
 ‘ಆ ಕರಾಳ ರಾತ್ರಿ’ ಚಿತ್ರ ಮುಂದಿನ ತಿಂಗಳು ಬಿಡುಗಡೆಯಾಗಲಿದ್ದು ಪ್ರೇಕ್ಷಕರಿಗೆ ಯಾವ ರೀತಿ ಮನರಂಜಿಸುತ್ತದೆ ಎಂದು ಕಾದು ನೋಡೋಣ. /// ಈ ವಿಭಾಗದ ಎಲ್ಲಾ ಸುದ್ದಿಗಳಿಗೆ ತಪ್ಪದೇ ಕ್ಲಿಕ್ಕಿಸಿ – Film News -Kannada Film News – Sandalwood News

Stay Updated with itsKannada, to know more Latest Kannada News – Read Kannada News Updates Kannada News Online – Get Latest News Headlines Breaking News in Kannada

ತ್ವರಿತ ಕನ್ನಡ ಸುದ್ದಿ ಹಾಗೂ ಕ್ಷಣಕ್ಷಣದ ಕನ್ನಡ ನ್ಯೂಸ್ ಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ – its-Kannada

error: Content is protected !!