ಕುತೂಹಲ ಮೂಡಿಸಿದ ನಟಸಾರ್ವಭೌಮ !

Kannada News (itskannada) ಸ್ಯಾಂಡಲ್ ವುಡ್ : ಕುತೂಹಲ ಮೂಡಿಸಿದ ನಟಸಾರ್ವಭೌಮ ! ಪವನ್ ಒಡೆಯರ್ ನಿರ್ದೇಶನದಲ್ಲಿ ಪುನೀತ್ ರಾಜಕುಮಾರ್ ನಟಿಸುತ್ತಿರುವ ೨೮ ನೇ ‘ನಟಸಾರ್ವಭೌಮ’. ಚಿತ್ರ ಫಸ್ಟ್ ಲುಕ್ ಪೋಸ್ಟರ್ ಹಾಗೂ ಫಸ್ಟ್ ಲುಕ್ ಟೀಸರ್ ನಿಂದ ದೊಡ್ಡ  ನಿರೀಕ್ಷೆ ಹುಟ್ಟು ಹಾಕಿದ್ದು ಯಾವಾಗ ಬಿಡುಗಡೆಯಾಗಲಿದೆ ಎಂಬ ಕುತೂಹಲ ಉಂಟು ಮಾಡಿದೆ.

ಕುತೂಹಲ ಮೂಡಿಸಿದ ನಟಸಾರ್ವಭೌಮ !

ಆದರೆ ಇಲ್ಲಿ ಒಂದು ಪ್ರಶ್ನೆ ಉದ್ಭವಿಸಿತ್ತು. ಅದೇನು ಅಂತೀರಾ  ನಟಸಾರ್ವಭೌಮ ಚಿತ್ರ ರಿಮೇಕ್ ಇರಬಹುದಾ ಎಂಬ ಪ್ರಶ್ನೆ ಹಲವರಲ್ಲಿ ಅನುಮಾನ ಉಂಟು ಮಾಡಿತಂತೆ  ಆದರೆ ಅದಕ್ಕೆ ಇದೀಗ ಉತ್ತರ ಚಿತ್ರದ ನಿರ್ದೇಶಕ ಪವನ್ ಒಡೆಯರ್ ಸ್ಪಷ್ಟ ಪಡಿಸಿದ್ದಾರೆ.  ನಟಸಾರ್ವಭೌಮ ಚಿತ್ರ ರಿಮೇಕ್ ಅಲ್ಲಾ ಎಂದು ಹೇಳಿದ್ದಾರೆ. ಇದರಿಂದ  ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದ್ದು ತೆರೆ ಕಾಣಲು ಕಾತುರರಾಗಿದ್ದಾರೆ.

ನಟಸಾರ್ವಭೌಮ ಎಂದು ಡಾ. ರಾಜಕುಮಾರ್ ಅವರಿಗೆ ಅಭಿಮಾನಿಗಳು ಕರೆಯುತ್ತಿದ್ದರು. ಈಗ ಅದೇ ಬಿರುದನ್ನು ಪುನೀತ್ ರಾಜಕುಮಾರ್ ಹೊಸ ಚಿತ್ರಕ್ಕೆ ಹೆಸರಾಗಿ  ಇಡಲಾಗಿದೆ. ಚಿತ್ರದಲ್ಲಿ ಪುನೀತ್‌‌ಗೆ  ಗುಳಿ ಕೆನ್ನೆಯ ಚೆಲುವೆ ರಚಿತಾ ರಾಮ್ ನಾಯಕಿಯಾಗಿ ನಟಿಸುತ್ತಿದ್ದು, ಇನ್ನು ಚಿತ್ರದಲ್ಲಿ ಹಿರಿಯ ನಟಿ ಬಿ. ಸರೋಜಾದೇವಿ ಕೂಡಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಿದ್ದಾರೆ.  ಬಹು ದಿನದ  ನಂತರ ಅವರು ಮತ್ತೆ ಸಿನಿ ದುನಿಯಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಚಿತ್ರದಲ್ಲಿ  ರವಿಶಂಕರ್, ಚಿಕ್ಕಣ್ಣ, ಸೇರಿದಂತೆ ಇನ್ನಿತರ ನಟರು ಸಿನಿಮಾದಲ್ಲಿದ್ದಾರೆ. ಚಿತ್ರಕ್ಕೆ ಡಿ. ಇಮಾನ್ ಸಂಗೀತ ನೀಡುತ್ತಿದ್ದು,  ಇದು ರಾಕ್‍ಲೈನ್ ಎಂಟರ್‌‌‌ಟೈನ್ಮೆಂಟ್‌‌ ಬ್ಯಾನರ್‌ ಅಡಿ ನಿರ್ಮಾಣವಾಗುತ್ತಿರುವ  ಸಿನಿಮಾವಾಗಿದೆ.
ಇನ್ನು ಚಿತ್ರ ತಂಡ ಚಿತ್ರದ ಬಗ್ಗೆ ಕುತೂಹಲ ಮೂಡಿಸಿದೆ. ವಿಭಿನ್ನ ವೈವಿಧ್ಯಮಯ ಚಿತ್ರವಾಗಿ ಮೂಡಿಬರಲಿದೆ ಅಂತೆ. ಅಪ್ಪು ಅಭಿಮಾನಿಗಳು ತೆರೆ ಮೇಲೆ ಕಾಣಲು ಕಾತರಾಗಿದ್ದಾರೆ. ಇನ್ನಷ್ಟು ದಿನಗಳಲ್ಲಿ ಚಿತ್ರ ತೆರೆ ಕಾಣಲಿದೆ. ಯಾವ ರೀತಿ ಅಬ್ಬರಿಸುತ್ತದೆ ಎಂದು ಕಾದು ನೋಡೋಣ. /// Film News – Sandalwood News
-ಶಶಿಧರ ಬಿಕ್ಕಣ್ಣವರ 
WebTitle : ಕುತೂಹಲ ಮೂಡಿಸಿದ ನಟಸಾರ್ವಭೌಮ !
Keyword : ನಟಸಾರ್ವಭೌಮ,ನಟಸಾರ್ವಭೌಮ ಕನ್ನಡ ಸಿನಿಮಾ ,ನಟಸಾರ್ವಭೌಮ ಹೊಸ ಚಿತ್ರ , ಪುನೀತ್ ರಾಜ್ ಕುಮಾರ್ ನಟಸಾರ್ವಭೌಮ. 

Natasarvabouma -Puneeth Rajkumar-Natasarvabouma – Kannada – News – Natasarvabouma New Film ,Natasarvabouma movie, Cineme , Updates,