ದ್ರೋಣ ಚಿತ್ರಕ್ಕೆ ಮುಹೂರ್ತ ಫಿಕ್ಸ್

Kannada News (itskannada) ಸ್ಯಾಂಡಲ್ ವುಡ್ : ದ್ರೋಣ ಚಿತ್ರಕ್ಕೆ ಮುಹೂರ್ತ ಫಿಕ್ಸ್

ಸ್ಯಾಂಡಲ್ ವುಡ್ ಬಾಸ್  ಹ್ಯಾಟ್ರಿಕ್ ಹಿರೋ ಡಾ.ಶಿವರಾಜಕುಮಾರ್ ದ್ರೋಣ ಚಿತ್ರಕ್ಕೆ ಸಜ್ಜಾಗಿದ್ದಾರೆ. ಚಿತ್ರವು ಕುತೂಹಲಕಾರಿ ಶೀರ್ಷಿಕೆಯನ್ನು ಹೊಂದಿದ್ದು  ಚಿತ್ರ ಜೂನ್ 22 ರಿಂದ ಚಿತ್ರೀಕರಣ ಆರಂಭಗೊಳಿಸಲಿದೆ. ಚಿತ್ರದಲ್ಲಿ ಶಿವಣ್ಣ ಶಿಕ್ಷಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈ ಚಿತ್ರಕ್ಕೆ  ಹರಿಹರ’ ಎಂಬ ಹೆಸರು ಇಟ್ಟು ಸದ್ದು ಮಾಡಿದ್ದ ನಿರ್ದೇಶಕ ಪ್ರಮೋದ್ ಚಕ್ರವರ್ತಿ ಈಗ ಹೆಸರು ಬದಲಾಯಿಸಿ ಮತ್ತೆ ಅಬ್ಬರಿದಿದ್ದಾರೆ. ಈಗಾಗಲೇ ಕಂಠೀರವ ಸ್ಟುಡಿಯೋದಲ್ಲಿ ಶಿವಣ್ಣನ ಫೋಟೋಶೂಟ್ ಸಹ ಆಗಿದೆ. ಈ ಚಿತ್ರವನ್ನು ಡಾಲ್ಫಿನ್ ಮೀಡಿಯಾ ಹೌಸ್ ಲಾಂಛನದಲ್ಲಿ ಮಹದೇವ್, ಸಂಗಮೇಶ್ ಮತ್ತು ಶೇಷು ಚಕ್ರವರ್ತಿ ನಿರ್ಮಿಸುತ್ತಿದ್ದಾರೆ.
`ದ್ರೋಣ’ ಚಿತ್ರಕ್ಕೆ ಪ್ರಮೋದ್ ಚಕ್ರವರ್ತಿ ನಿರ್ದೇಶನ ಹಾಗೂ ಸಂಭಾಷಣೆಗಳನ್ನು ರಚಿಸಿದ್ದಾರೆ. ಶಿವರಾಜಕುಮಾರ್ ಜೊತೆಗೆ  ಚಿತ್ರದಲ್ಲಿ  ರಂಗಾಯಣ, ಇನಿಯಾ, ಸ್ವಾತಿ ಶರ್ಮ,  ರಘು, ವಿ. ಮನೋಹರ್, ಸಾಧು ಕೋಕಿಲ, ಬಾಬು ಹಿರಣ್ಣಯ್ಯ ಮುಂತಾದವರು ನಟಿಸುತ್ತಿದ್ದು, ಜಗದೀಶ್ ವಾಲಿ  ಛಾಯಾಗ್ರಹಣ ಮತ್ತು ರಾಮ್‍ಕ್ರಿಶ್ ಅವರ ಸಂಗೀತ ಸಂಯೋಜನೆ ಮಾಡಲಿದ್ದಾರೆ. ////Film News – Sandalwood News