ಅಸಹಾಯಕ ಮಹಿಳೆಯರ ಪ್ರತಿನಿಧಿ-ಹೆಬ್ಬೆಟ್‌ ರಾಮಕ್ಕ

25

Film News ( itskannada ) ಪಂಚಾಯತ್‌ರಾಜ್‌ ವ್ಯವಸ್ಥೆಯಲ್ಲಿ ಮಹಿಳೆಯರಿಗೂ ಸೂಕ್ತ ರಾಜಕೀಯ ಸ್ಥಾನಮಾನ ಸಿಕ್ಕಿದೆ. ಆದರೆ, ಕೆಲವು ಸ್ಥಳೀಯ ಸಂಸ್ಥೆಗಳಲ್ಲಿ ಅನಕ್ಷರಸ್ಥ ಮಹಿಳಾ ಜನಪ್ರತಿನಿಧಿಗಳ ಅಧಿಕಾರ ಅವರ ಗಂಡ, ಕುಟುಂಬದ ಸದಸ್ಯರ ಹಿಡಿತಕ್ಕೆ ಸಿಲುಕಿದೆ. ಅಂತಹ ಮಹಿಳೆಯರ ಮೂಕವೇದನೆ, ಅವರ ಒಡಲಾಳದ ಬೇಗೆ ಅವ್ಯಕ್ತ ಚರಿತ್ರೆಯಾಗಿಯೇ ಉಳಿದುಬಿಟ್ಟಿದೆ. ಅಧಿಕಾರದಲ್ಲಿ ಮಹಿಳಾ ಮೀಸಲಾತಿಯ ದುರುಪಯೋಗವನ್ನು ‘ಹೆಬ್ಬೆಟ್‌ ರಾಮಕ್ಕ’ ಚಿತ್ರದ ಮೂಲಕ ವಿಡಂಬನಾತ್ಮಕವಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಎನ್.ಆರ್‌. ನಂಜುಂಡೇಗೌಡ.

ಅಸಹಾಯಕ ಮಹಿಳೆಯರ ಪ್ರತಿನಿಧಿ-ಹೆಬ್ಬೆಟ್‌ ರಾಮಕ್ಕ

ಪುರುಷರ ಅಧಿಕಾರಲಾಲಸೆಯಿಂದ ಮಹಿಳೆಯರು ಅನುಭವಿಸಬೇಕಾದ ಎಣೆಯಿಲ್ಲದ ಸಂಕಟಗಳ ಕಥೆಯನ್ನು ರಾಮಕ್ಕ ಕಟ್ಟಿಕೊಡುತ್ತಾಳೆ. ಅಧಿಕಾರದಲ್ಲಿದ್ದೂ ಅದನ್ನು ಸಮರ್ಥವಾಗಿ ಬಳಸಿಕೊಳ್ಳಲು ಸಾಧ್ಯವಾಗದಿರುವ ಹಲವು ಅಸಹಾಯಕ ಮಹಿಳೆಯರ ಪ್ರತಿನಿಧಿಯಾಗಿಯೂ ಅವಳು ಕಾಡುತ್ತಾಳೆ.

ಈ ಚಿತ್ರದಲ್ಲೊಂದು ದೃಶ್ಯವಿದೆ. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನದ ಆಯ್ಕೆಗೆ ಆಡಳಿತಾರೂಢ ಪಕ್ಷದ ಮುಖಂಡರ ಸಮಾಲೋಚನಾ ಸಭೆ ನಡೆಯುತ್ತಿರುತ್ತದೆ. ಅಧ್ಯಕ್ಷ ಗಾದಿ ಮಹಿಳೆಗೆ ಮೀಸಲು. ಪಕ್ಷದಿಂದ ಮೂವರು ಸ್ತ್ರೀಯರು ಜಯ ಗಳಿಸಿರುತ್ತಾರೆ. ರಾಮಕ್ಕನನ್ನು ಹೊರತುಪಡಿಸಿದರೆ ಉಳಿದಿಬ್ಬರು ಅಕ್ಷರಸ್ಥೆಯರು. ಆದರೆ, ತನ್ನ ರಾಜಕೀಯ ಲಾಭಕ್ಕಾಗಿ ಪಕ್ಷದ ಶಾಸಕನೇ ರಾಮಕ್ಕಳನ್ನು ಅಧ್ಯಕ್ಷ ಸ್ಥಾನಕ್ಕೆ ಕೂರಿಸುತ್ತಾನೆ. ಆ ಮೂಲಕ ಅಧಿಕಾರ ವಿಕೇಂದ್ರೀಕರಣದ ಬೇರುಗಳು ಸಡಿಲಗೊಳ್ಳಲು ಕಾರಣವಾಗುತ್ತಿರುವ ಬಗೆಯನ್ನು ನಿರ್ದೇಶಕರು ಸೂಚ್ಯವಾಗಿ ಹೇಳಿದ್ದಾರೆ.

 

ಹೆಬ್ಬೆಟ್‌ ರಾಮಕ್ಕ’ ಒಂದು ಕಥೆಯಾಗಿ ಉಳಿಯದೆ ವರ್ತಮಾನದ ವಿದ್ಯಮಾನಗಳಿಗೆ ಕನ್ನಡಿ ಹಿಡಿಯುವ ಪ್ರಯತ್ನ ನಡೆಸುತ್ತದೆ. ಮಹಿಳಾ ಮೀಸಲಾತಿಯ ದುರ್ಬಳಕೆ ಬಗ್ಗೆ ಹೇಳುವ ನಿರ್ದೇಶಕರ ಹಂಬಲಕ್ಕೆ ಬಿ. ಸತೀಶ್‌ ಅವರ ಛಾಯಾಗ್ರಹಣ ಸಮರ್ಥವಾಗಿ ಸ್ಪಂದಿಸಿದೆ. // ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ಕ್ಲಿಕ್ಕಿಸಿ . – Kannada Film -Sandalwood News

Open

error: Content is protected !!