ಸ್ವಾತಂತ್ರ್ಯ ದಿನಾಚರಣೆ ಸಮಾರಂಭ ಗೂಗಲ್ ಲೈವ್

Watch the Independence Day ceremony on Google Live

0

ಸ್ವಾತಂತ್ರ್ಯ ದಿನಾಚರಣೆ ಸಮಾರಂಭ ಗೂಗಲ್ ಲೈವ್

ದೇಶದ ಪ್ರಧಾನ ಮಂತ್ರಿಗಳು ಸ್ವಾತಂತ್ರ್ಯ ದಿನಾಚರಣೆಯ ಸಮಾರಂಭದ ಭಾಷಣದಲ್ಲಿ ಡಿಜಿಟಲ್ ಮೆರುಗು ಕಾಣಲಿದೆ, ಯಾರೂ ಮಾಡಿರದ ಡಿಜಿಟಲ್ ಮೋಡಿಯನ್ನು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದ ಭಾಷಣದಲ್ಲಿ ಎಲ್ಲರೂ ಹುಬ್ಬೇರುವ ಹಾಗೆ ಡಿಜಿಟಲ್ ಮೇರಗು ಕಾಣಲಿದೆ.

ಸ್ವಾತಂತ್ರ್ಯ ದಿನಾಚರಣೆ ಪ್ರಧಾನಮಂತ್ರಿಗಳ ಭಾಷಣ – ಗೂಗಲ್ ನೇರ ಪ್ರಸಾರ

ನಾಳಿನ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಇಡೀ ದೇಶವೇ ಕಾತರದಿಂದ ಕಾಯುತ್ತಾ ಕುಳಿತಿರುವ ಮಾನ್ಯ ಪ್ರಧಾನಮಂತ್ರಿಗಳ ಭಾಷಣ, ದೇಶ ವಿದೇಶಿಗರು ಮೋಡಿಗೆ ಒಳಗಾಗಲಿದೆ ಎಸ್ ಹೌದು.

ದೆಹಲಿಯ ಕೆಂಪುಕೋಟೆಯಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆ ಸಮಾರಂಭ ನಿಮಿತ್ಯ ಪ್ರಧಾನಿ ನರೇಂದ್ರ ಮೋದಿಯವರ ಭಾಷಣವನ್ನು ಗೂಗಲ್ ನೇರ ಪ್ರಸಾರ ಮಾಡಲು ನಿರ್ಧರಿಸಿದೆ.

ಡಿಜಿಟಲ್ ಯೋಜನೆಯ ಮೂಲಕ ಹೆಚ್ಚು ಜನರನ್ನು ತಲುಪಲು ಗೂಗಲ್ ಸಂಸ್ಥೆ ಪ್ರಸಾರ ಭಾರತಿ ಸಹಯೋಗದೊಂದಿಗೆ ಗೂಗಲ್ ತನ್ನ Search ಪೇಜಿನ ಮುಖ್ಯ ಪುಟದಲ್ಲಿ ಮತ್ತು ಯುಟೋಬ್‍ನಲ್ಲಿ ಸ್ವಾತಂತ್ರ್ಯ ದಿನದ ಕಾರ್ಯಕ್ರಮವನ್ನು ಪ್ರಸಾರ ಮಾಡಲು ಈ ಪ್ಲಾನ್ ರೋಪಿಸಿದೆ.

ಸ್ವಾತಂತ್ರ್ಯ ದಿನಾಚರಣೆ ಸಮಾರಂಭ ಯುಟುಬ್ ನಲ್ಲಿ ಸಿಗಲಿದೆಸ್ವಾತಂತ್ರ್ಯ ದಿನಾಚರಣೆ ಸಮಾರಂಭ ಗೂಗಲ್ ಲೈವ್-itsKannada

ಪ್ರಥಮ ಬಾರಿಗೆ ಭಾರತದಲ್ಲಿ ನೇರವಾಗಿ ಪರದೇಯ ಮೇಲೆ ಪ್ರಸಾರ ಮಾಡಲು ಮುಂದಾಗಿರುವ ಈ ಯೋಜನೆ ಮೋದಿ ಭಾಷಣವನ್ನು ಆದಷ್ಟು ಎಲ್ಲ ವೀಕ್ಷಕರಿಗೆ ತಲುಪಿದಂತಾಗುತ್ತದೆ ಮತ್ತು ಹೊಸ ಆಯಾಮಕ್ಕೆ ಜನಗಳನ್ನು ಸೆಳೆದಂತಾಗುತ್ತದೆ.

ಈ ವಿಷಯ ಕುರಿತು ಪ್ರಸಾರ ಭಾರತಿಯ ಮುಖ್ಯಸ್ಥರಾದ ಶಶಿ ಶೇಖರ್ ವೆಂಪತಿಯವರು ಮಾತನಾಡಿ, ಡಿಜಿಟಲ್ ಕ್ಷೇತ್ರವನ್ನು ಉತ್ತೇಜನಗೊಳಿಸಲು ಗೂಗಲ್ ಸಹಯೋಗದೊಂದಿಗೆ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಲಾಗುತ್ತಿದೆ ಎಂದರು.

ಸ್ವಾತಂತ್ರ್ಯ ದಿನಾಚರಣೆ ಸಮಾರಂಭದ ನೇರ ಪ್ರಸಾರ 22 ಭಾಷೆಗಳಲ್ಲಿ

ಸ್ವತಂತ್ರ ದಿನಾಚರಣೆಯ ಎಲ್ಲಾ ಸಮಾರಂಭಗಳನ್ನು ನಮ್ಮ ದೂರದರ್ಶನದ ಮೂಲಕವು ಸಹ ವೀಕ್ಷಣೆ ಮಾಡಬಹುದಾಗಿದೆ. ಇದರ ಚಿತ್ರೀಕರಣಕ್ಕೆ ಸುಮಾರು 22 ಕ್ಕೂ ಹೆಚ್ಚಿನ ಹೆಚ್ ಡಿ ಕ್ಯಾಮೆರಾಗಳನ್ನು ಈಗಾಗಲೇ ಸಿದ್ದಪಡಿಸಿಕೊಳ್ಳಲಾಗಿದೆ. ದೇಶದ 22 ಭಾಷೆಗಳಲ್ಲಿ ನೇರಪ್ರಸಾರಗೊಳ್ಳುತ್ತದೆ ಎಂದು ತಿಳಿಸಿದರು.//// ವರದಿ: ಪ್ರವೀಣ್ ಹುಬ್ಬಳ್ಳಿ


WebTitle : ಸ್ವಾತಂತ್ರ್ಯ ದಿನಾಚರಣೆ ಸಮಾರಂಭ ಗೂಗಲ್ ಲೈವ್ – Watch the Independence Day ceremony on Google Live

ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ಕ್ಲಿಕ್ಕಿಸಿ – National News KannadaNational News Latest

You're currently offline