ಪತ್ನಿ, ಮಕ್ಕಳಿಗೆ ಗುಂಡಿಕ್ಕಿ, ತಾನೂ ಶೂಟ್ ಮಾಡಿಕೊಂಡ

shoots-wife-children-and-self-in-tripura

23
(itskannada) ಅಗರ್ತಾಲ: ತ್ರಿಪುರ ರಾಜ್ಯ ಟಿಎಸ್ಆರ್ ನ ಯೋಧನೊಬ್ಬ ತನ್ನ ಇಬ್ಬರು ಮಕ್ಕಳು ಮತ್ತು ಪತ್ನಿಗೆ ಗುಂಡಿಕ್ಕಿ ಹತ್ಯೆ ಮಾಡಿ ಬಳಿಕ ತಾನೂ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಮಂಗಳವಾರ ನಡೆದಿದೆ.
 ಟಿಎಸ್ ಆರ್ 1ನೇ ಬಟಾಲಿಯನ್ ಗೆ ಸೇರಿದ ಯೋಧ ಮಾಣಿಕ್ ಘೋಷ್ ಅವರು ಇಂದು ಬೆಳಗ್ಗೆ ಅಗರ್ತಾಲದ ಸುಭಾಸನಗರದಲ್ಲಿರುವ ತಮ್ಮ ನಿವಾಸದಲ್ಲಿ ಸರ್ವೀಸ್ ರಿವಾಲ್ವಾರ್ ನಿಂದ ಪತ್ನಿ ರತ್ನಾ ಘೋಷ್(34), ಪುತ್ರ ದೀಪ್ ರಾಜ್ ಘೋಷ್(10) ಹಾಗೂ ಪುತ್ರಿ ಇಪ್ಸಿತಾ(4)ಗಳನ್ನು ಹತ್ಯೆ ಮಾಡಿದ್ದಾನೆ. ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅದೃಷ್ಟವಶಾತ್ ಆತನ ತಂದೆ ಮತ್ತು ಸಹೋದರ ಮಾಣಿಕ್ ಘೋಷ್ ಗುಂಡಿನ ದಾಳಿಯಿಂದ ತಪ್ಪಿಸಿಕೊಂಡು ಜೀವ ಉಳಿಸಿಕೊಂಡಿದ್ದಾರೆ.
ಘಟನೆಯ ನಂತರ ಸುಭಾಸನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. // ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ಕ್ಲಿಕ್ಕಿಸಿ – National News Latest
Open

error: Content is protected !!