ಬ್ರಹ್ಮಿಣಿರವರಿಗೆ ರಾಜಕೀಯದಲ್ಲಿ ಆಸಕ್ತಿಯಿಲ್ಲ-ಚಂದ್ರಬಾಬು ನಾಯ್ಡು

Rumors On Brahmini-Babu Puts End

28

Hyderabad (itskannada) ಹೈದರಾಬಾದ್ : ಬ್ರಹ್ಮಿಣಿರವರಿಗೆ ರಾಜಕೀಯದಲ್ಲಿ ಆಸಕ್ತಿಯಿಲ್ಲ-ಚಂದ್ರಬಾಬು ನಾಯ್ಡು-Rumors On Brahmini-Babu Puts End : ಊಹಾಪೋಹಗಳಿಗೆ ಪುಲ್ ಸ್ಟಾಪ್ ಇಟ್ಟ ಚಂದ್ರಬಾಬು ನಾಯ್ಡು ಅವರು ನಾರಾ ಬ್ರಹ್ಮಿಣಿ ಅವರ ರಾಜಕೀಯ ಪ್ರವೇಶವನ್ನು ಸ್ಪಷ್ಟಪಡಿಸಿದ್ದಾರೆ. ತೆಲಂಗಾಣ ಟಿಡಿಪಿ ಮುಖಂಡರು ನಾರಾ ಬ್ರಹ್ಮಿಣಿಯ ರಾಜಕೀಯ ಪ್ರವೇಶ ಮತ್ತು ತೆಲಂಗಾಣ ಟಿಡಿಪಿ ಘಟಕದ ನಾಯಕತ್ವವನ್ನು ಬಯಸಿದಾಗ, ಚಂದ್ರಬಾಬುರವರು ಆ ಬಗ್ಗೆ ಎಲ್ಲರಿಗೂ ಸ್ಪಷ್ಟಪಡಿಸಿದ್ದಾರೆ. “ಬ್ರಹ್ಮಿಣಿರವರಿಗೆ ರಾಜಕೀಯದಲ್ಲಿ ಆಸಕ್ತಿಯಿಲ್ಲ, ಅವರು ಯಾವುದೇ ರಾಜಕೀಯ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ” ಎಂದು ಚಂದ್ರಬಾಬು ಅವರು ಹೈದರಾಬಾದ್ ಎನ್.ಟಿ.ಆರ್ ಭವನದಲ್ಲಿ ಶುಕ್ರವಾರ ನಡೆದ ಪಕ್ಷದ ಸಭೆಯಲ್ಲಿ ತೆಲಂಗಾಣ ಟಿಡಿಪಿ ಮುಖಂಡರಿಗೆ ತಿಳಿಸಿದ್ದಾರೆ. ತೆಲಂಗಾಣ ಟಿಡಿಪಿ ಮುಖಂಡರ ಮನವಿಗೆ ಪ್ರತಿಕ್ರಿಯಿಸಿದ ಚಂದ್ರಬಾಬು ಅವರು ಈ ಕುರಿತು ತಿಳಿಸಿದ್ದಾರೆ.

ನಾರಾ ಬ್ರಹ್ಮಿಣಿ ಅವರು ಸಾಮಾಜಿಕ ಸೇವೆಗಳಲ್ಲಿ ಸಕ್ರಿಯರಾಗಿದ್ದಾರೆ ಮತ್ತು ಹೆರಿಟೇಜ್ ಫುಡ್ಸ್ ನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ, ಸಧ್ಯ ಅವರಿಗೆ ರಾಜಕೀಯದಲ್ಲಿ ಆಸಕ್ತಿಯಿಲ್ಲ ಎಂದು ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. // ಈ    ವಿಭಾಗದ ಇನ್ನಷ್ಟು ಸುದ್ದಿಗಳಿಗೆ ಕ್ಲಿಕ್ಕಿಸಿ – National News Latest

Open

error: Content is protected !!